ಮಾಧ್ಯಮಗಳ ವಿರುದ್ಧ ಹರಿಹಾಯ್ದ ಮಾಜಿ ಸಿಎಂ ಎಚ್ಡಿಕೆ
ಬಾಗಲಕೋಟೆ, ಜನವರಿ 29: ದೃಶ್ಯ ಮಾಧ್ಯಮಗಳು ಜೆಡಿಎಸ್ ಪಕ್ಷದ ವರದಿ ಪ್ರಸಾರ ಮಾಡುತ್ತಿಲ್ಲ ಇದರಿಂದ ನಮಗೆ ತೀವ್ರ ಬೇಸರವಾಗಿದೆ ಎಂದು ಮಾಧ್ಯಮಗಳಿಗೆ ಕೈ ಮುಗಿದು ಸಂದರ್ಶನವೇ ಬೇಡ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ವರದಿಯನ್ನು ದೃಶ್ಯ ಮಾಧ್ಯಮದವರು ಬಿತ್ತರಿಸುತ್ತಿಲ್ಲ, ನಮ್ಮ ಸುದ್ದಿಗಳನ್ನು ಡಸ್ಟ್ ಬಿನ್ ಗೆ ಹಾಕಿ ಬಿಸಾಡಲಾಗುತ್ತಿದೆ. ಆದರೆ ಬಿಜೆಪಿ ಕಾಂಗ್ರೆಸ್ ಬಗ್ಗೆ ಮಾತ್ರ ಸುದ್ದಿ ಪ್ರಸಾರ ಮಾಡಲಾಗುತ್ತದೆ. ಹೀಗಾಗಿ ನಾನೇಕೆ ನಮ್ಮ ಸಮಯವನ್ನು ವ್ಯರ್ಥ ಮಾಡಲಿ ನಾನು ಸಂದರ್ಶನವನ್ನು ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಮಧ್ಯೆ ನಾವು ಪ್ರತಿಕ್ರಿಯೆ ನೀಡುವುದೇ ತಪ್ಪು ಎನಿಸಿದೆ, ಹಾಗಾಗಿ ನನ್ನನ್ನು ಹೇಳಿಕೆ ನೀಡುವಂತೆ ಬಲವಂತ ಮಾಡಬೇಡಿ, ನಾಣು ಈಗಾಗಲೇ ಮುಖ್ಯಮಂತ್ರಿಯಾಗಿ ಹೋಗಿದ್ದೇನೆ. ಈಗ ಎಲ್ಲಾ ಸುದ್ದಿ ವಾಹಿನಿಗಳು ಈ ರೀತಿ ಮಾಡುತ್ತಿರುವುದು ನನಗೆ ನೋವುಂಟು ಮಾಡಿದೆ ಎಂದು ತಮ್ಮ ನೋವನ್ನು ಹೇಳಿಕೊಂಡರು.













Click it and Unblock the Notifications