ಜಮಖಂಡಿ ಉಪಚುನಾವಣೆ ಸನ್ನಿಹಿತ: ಬ್ಯಾರೇಜ್ ಗೆ ಸಿದ್ದು ನ್ಯಾಮಗೌಡ ಹೆಸರು
Recommended Video

ಬಾಗಲಕೋಟೆ, ಅಕ್ಟೋಬರ್ 5: ಜಮಖಂಡಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರ ಬೀಳಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್ ಗೆ ದಿವಂಗತ ಶಾಸಕ ಸಿದ್ದು ನ್ಯಾಮಗೌಡ ಹೆಸರನ್ನು ನಾಮಕರಣ ಮಾಡಿ ಆದೇಶ ಹೊರಡಿಸಿದೆ.
ಇತ್ತೀಚೆಗಷ್ಟೇ ರಸ್ತೆ ಅಪಘಾತದಲ್ಲಿ ನಿಧನರಾದ ದಿವಂಗತ ಸಿದ್ದು ನ್ಯಾಮಗೌಡ ಅವರ ಹೆಸರನ್ನು ಜಮಖಂಡಿ ತಾಲೂಕಿನಲ್ಲಿರುವ ಚಿಕ್ಕಪಡಸಲಗಿ ಬ್ಯಾರೇಜ್ ಗೆ ನಾಮಕರಣ ಮಾಡಲು ರಾಜ್ಯ ಸರ್ಕಾರ ಆದೇಶ ನೀಡಿದೆ. ಸಚಿವ ಡಿಕೆ ಶಿವಕುಮಾರ್ ಈ ಸೂಚನೆಯನ್ನು ನೀಡಿದ್ದಾರೆ.
ಸಿದ್ದು ನ್ಯಾಮಗೌಡ ಅವರು ಚಿಕ್ಕಪಡಸಲಗಿಯಲ್ಲಿ ಸ್ವಂತ ಶ್ರಮದಿಂದ ಬ್ಯಾರೇಜ್ ನಿರ್ಮಿಸಿದ್ದರು, ಸಿದ್ದು ನ್ಯಾಮಗೌಡ ಅವರ ಹೆಸರನ್ನು ಬ್ಯಾರೇಜಿಗೆ ಇಡಬೇಕೆಂಬುದು ಆ ಭಾಗದ ರೈತರ ಆಶಯವಾಗಿತ್ತು. ಶಿವಕುಮಾರ್ ಅವರು ಇದಕ್ಕೆ ಸ್ಪಂದಿಸಿದ್ದಾರೆ.

ಜಮಖಂಡಿ ತಾಲೂಕಿನ ಜಮಖಂಡಿ, ಮತ್ತೂರ, ಮೈಗೂರ, ಕಂಕಣವಾಡಿ ಮತ್ತಿತರ ಗ್ರಾಮಗಳ ಪಕ್ಕದಲ್ಲೇ ಕೃಷ್ಣಾ ನದಿ ನೀರು ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುತ್ತಿತ್ತು. ತಮಗೊಂದು ಬ್ಯಾರೇಜ್ ಇದ್ದಿದ್ದರೆ ಈ ನೀರು ಕೃಷಿಗೆ ಬಳಕೆ ಆಗುತ್ತಿತ್ತು ಎಂದು ಆ ಭಾಗದ ರೈತರು ಚಿಂತೆಗೀಡಾಗಿದ್ದರು.
ಸಿದ್ದು ನ್ಯಾಮಗೌಡರು ಹೆಚ್ಚು ಕಾಳಜಿ ವಹಿಸಿ, ಸಂಪನ್ಮೂಲ ಕ್ರೋಢೀಕರಿಸಿ, ರೈತರ ಜತೆಗೂಡಿ ಶ್ರಮದಾನ ಮಾಡಿದ ಪ್ರಯುಕ್ತ ಚಿಕ್ಕಪಡಸಲಗಿ ಬ್ಯಾರೇಜ್ ನ್ನು ಸ್ಥಾಪಿಸಿದರು. ನಂತರ ಅವರನ್ನೇ ಬ್ಯಾರೇಜ್ ಸಿದ್ದು ಎಂದೇ ಕರೆದರು. ಹಾಗಾಗಿ ಸಿದ್ದು ನ್ಯಾಮಗೌಡ ಅವರ ಸ್ಮರಣಾರ್ಥ ಅವರ ಹೆಸರನ್ನೇ ಬ್ಯಾರೇಜ್ ಗೆ ಇಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಕುರಿತು ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.












Click it and Unblock the Notifications