ಬಿಜೆಪಿ ಟಿಕೇಟ್ ಸಿಗದಿದ್ದರೆ, ಸ್ವತಂತ್ರವಾಗಿ ಸ್ಪರ್ಧೆ: ರಾಮಾರೂಢ ಸ್ವಾಮೀಜಿ

ಬಾಗಲಕೋಟೆ, ಏಪ್ರಿಲ್ 01: ಭಕ್ತರ ಒತ್ತಾಯ ಹಾಗೂ‌ ಬೀಳಗಿ ಮತಕ್ಷೇತ್ರದಲ್ಲಿ ಭ್ರಷ್ಟಾಚಾರ ಹಾಗೂ ಲಂಚಾವತಾರವನ್ನು ಹೋಗಲಾಡಿಸಲು ಈಗ ವಿಧಾನಸಭೆಯ ಬೀಳಗಿ ಮತಕ್ಷೇತ್ರದಲ್ಲಿ ಬಾಗಲಕೋಟೆಯ ಬೀಳಗಿ ರಾಮಾರೂಢ ಮಠದ ಪರಮಾನಂದ ಸ್ವಾಮೀಜಿಯವರು ಚುನಾವಣೆಯ ಕಣಕ್ಕೆ ಇಳಿಯಲು ಸಿದ್ದರಿರುವುದಾಗಿ ಪ್ರಕಟಿಸಿದ್ದಾರೆ.

ನವನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸ್ವಾಮೀಜಿಯವರು ಬಿಜೆಪಿಯನ್ನು ಸಂಪರ್ಕಿಸಿ ಟಿಕೇಟ್ ನೀಡುವಂತೆ ಯಡಿಯೂರಪ್ಪನವರನ್ನು ಹಾಗೂ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಯವರನ್ನು ಸಂಪರ್ಕಿಸಿ ಬೀಳಗಿ ಮತಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡಬೇಕು ಎಂದು ಕೇಳಲಾಗಿದೆ ಎಂದರು.

Elections 2018: Bagalkot : Bilagi Ramarudha Seer to contest as independent

ಈಗಾಗಲೇ ಬೀಳಗಿ ಮತಕ್ಷೇತ್ರದಲ್ಲಿ ಯಾರಿಗೆ ಟಿಕೇಟ್ ಎಂದು ಬಿಜೆಪಿಯವರು ಪ್ರಕಟಿಸಿಲ್ಲ. ಇನ್ನೂ ಆಶಾಭಾವನೆ ಹೊಂದಿದ್ದೇನೆ ಎಂದರು.

ಯಾವುದೇ ರೀತಿ ಬೇರೆ ಪಕ್ಷದವರು ಫಂಡ್ ನೀಡುತ್ತೇವೆ ಎಂದು ಕುಮ್ಮಕ್ಕು ನೀಡಿಲ್ಲ ಭಕ್ತರ ಹೇಳಿದಂತೆ ಸ್ಪರ್ಧೆ ಮಾಡುತ್ತೇನೆ. ಜೆಡಿಎಸ್ ಪಕ್ಷದವರು ಕರೆದಿದ್ದರು ಆ ಪಕ್ಷದ ನಾಯಕರು ಸಮರ್ಪಕವಾಗಿ ಸ್ಪಂದಿಸಿಲ್ಲ. ಬಿಜೆಪಿಯಲ್ಲಿ ಟಿಕೇಟ್ ನೀಡಿದಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಎಲ್ಲ ಸಿದ್ದತೆ ಮಾಡಿಕೊಂಡಿರುವುದಾಗಿ ತಿಳಿಸಿದರು.

'ಪಕ್ಷಕ್ಕೆ ಬನ್ನಿ ನಿಮ್ಮನ್ನು ಬೆಂಬಲಿಸುತ್ತೇನೆ ಎಂದು‌ ಬಿಜೆಪಿ ಯವರು ಕರೆದರೆ ಹೋಗುತ್ತೇವೆ. ಇನ್ನೊಂದು ವಾರ ಕಾಯುತ್ತೇನೆ. ಆದರೆ, ಕಾಂಗ್ರೆಸ್ ಪಕ್ಷದವರು ಟಿಕೇಟ್ ನೀಡುತ್ತೆವೆ ಬೀಳಗಿಯಲ್ಲಿ ನಿಲ್ಲಬೇಕು ಎಂದು ಕೇಳಿಕೊಂಡರೆ ಆ ಪಕ್ಷದಿಂದ ಸ್ಪರ್ಧಿಸುವುದಿಲ್ಲ' ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+