ಗೆಳತಿ ಮತದಾನ ಕೇಂದ್ರಕ್ಕೆ ಬಂದ ಮತದಾರರಿಗೆ ಚಾಕಲೇಟ್ ವಿತರಣೆ
ಬಾಗಲಕೋಟೆ ಮೇ 12 : ಈ ಬಾರಿ ವಿಧಾನಸಭಾ ಚುನಾವಣೆ ಅನೇಕ ವಿಶೇಷತೆಗಳಿಂದ ಕೂಡಿದೆ. ಅಂತೆಯೇ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕಟಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೆಳತಿ ಮತದಾನ ಕೇಂದ್ರಕ್ಕೆ ಬಂದ ಮತದಾರರಿಗೆ ಚಾಕಲೇಟ್ ವಿತರಿಸಲಾಗಿದೆ.
ಎಲ್ಲಿ ಮಹಿಳೆಯರು ಹೆಚ್ಚಿರುತ್ತಾರೆ ಆ ಸ್ಥಳಗಳಲ್ಲಿ ಪಿಂಕ್ ಅಥವಾ ಗೆಳತಿ ಮತಗಟ್ಟೆಗಳನ್ನು ತೆರೆಯಲಾಗಿತ್ತು. ಇದೀಗ ಗೆಳತಿ ಮತದಾನ ಕೇಂದ್ರಕ್ಕೆ ಬರುವವರಿಗೆ ಚಾಕ್ ಲೇಟ್ ವಿತರಿಸಿ, ಮತದಾನ ಮಾಡುವವರಿಗೆ, ಮಾಡಿದವರಿಗೆ ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಸಂಗತಿ.
ಇನ್ನು ಬಾದಾಮಿ ತಾಲೂಕಿನ ಗುಳೇದಗುಡ್ಡ ಪಟ್ಟಣದ ವೆಂಕಟೇಶ್ವರ ಸ್ಕೂಲಿನಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಸ್ನೇಹಾ, ಚೇತನಾ, ಯಶೋಧ ರೂಪಾಲಿ, ಮಂತ್ರಿ ತಮ್ಮ ಸಂಸತಸವನ್ನು ಕ್ಯಾಮೆರಾಗೆ ಫೋಸ್ ನೀಡುವ ಮೂಲಕ ಹಂಚಿಕೊಂಡರು.

ಹಲಕುರ್ಕಿ ಗ್ರಾಮದಲ್ಲಿ ಬಿಸಿಲನ್ನು ಲೆಕ್ಕಿಸದೆ ಮತಗಟ್ಟೆ ಬಳಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.













Click it and Unblock the Notifications