"ಹೌದು ಹುಲಿಯಾ' ಹೆಸರಿನಲ್ಲಿ ತಲೆ ಎತ್ತಿತು ಹೋಟೆಲ್...!

ಬಾಗಲಕೋಟೆ, ಜನವರಿ 30: ಕಳೆದ ವರ್ಷ ಕರ್ನಾಟಕ ಉಪ ಚುನಾವಣೆಯ ಸಂದರ್ಭದಲ್ಲಿ ಸಖತ್ ವೈರಲ್ ಆಗಿದ್ದ "ಹೌದು ಹುಲಿಯಾ' ಸದ್ದು ಇನ್ನೂ ನಿಂತಿಲ್ಲ.

"ಹೌದು ಹುಲಿಯಾ' ಎಷ್ಟು ಹವಾ ಸೃಷ್ಟಿಸಿದೆಯೆಂದರೆ, "ಹೌದು ಹುಲಿಯಾ' ಹೆಸರಿನಲ್ಲಿ ಹೋಟೆಲ್ ಒಂದು ಆರಂಭವಾಗಿದೆ. ಹೌದು, ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ "ಹೌದು ಹುಲಿಯಾ' ಹೋಟೆಲ್ ತಲೆ ಎತ್ತಿದೆ.

ಬೀಳಗಿ ಪಟ್ಟಣದಲ್ಲಿ ನಡೆಯುತ್ತಿರುವ ಸುಪ್ರಸಿದ್ದ ಮಾರಿಕಾಂಬಾ ಜಾತ್ರಾ ಮಹೋತ್ಸವದಲ್ಲಿ ಈ "ಹೌದು ಹುಲಿಯಾ' ಫಾಸ್ಟ್ ಪುಡ್ ಎಂಬ ಹೋಟೆಲ್ ತಲೆ ಎತ್ತಿದೆ. ಫೆಬ್ರವರಿ 15 ರವರೆಗೆ ಜಾತ್ರೆ ನಡೆಯಲಿದ್ದು, ಈ "ಹೌದು ಹುಲಿಯಾ' ಹೋಟೆಲ್ ಜಾತ್ರೆಗೆ ಬಂದವರ ಗಮನ ಸೆಳೆಯುತ್ತಿದೆ. ನೀಲಪ್ಪ ಎನ್ನುವರು ಈ ಹೋಟೆಲ್ ಆರಂಭಿಸಿದ್ದು, ಸಿದ್ದರಾಮಯ್ಯನವರ ಮೇಲಿನ ಅಭಿಮಾನದಿಂದ ಈ ರೀತಿ ಹೆಸರು ಇಟ್ಟಿರುವುದಾಗಿ ಹೇಳಿದ್ದಾರೆ. ಇದೇ ಹೆಸರನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.

A Hotel Open In Bagalkot Hotel Name Is Houdu Huliya

ಡಿಸೆಂಬರ್‌ನಲ್ಲಿ ನಡೆದಿದ್ದ ಉಪ ಚುನಾವಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಗವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಪೀರಪ್ಪ ಎನ್ನುವ ವ್ಯಕ್ತಿ ಸಿದ್ದರಾಮಯ್ಯ ಅವರ ಭಾಷಣಕ್ಕೆ ಹುರುಪು ತುಂಬಲು "ಹೌದು ಹುಲಿಯಾ' ಎಂದು ಜೋರಾಗಿ ಕೂಗಿದ್ದರು. ಈ ಡೈಲಾಗ್ ಇಡೀ ರಾಜ್ಯಾದ್ಯಂತ ಮಾಧ್ಯಮಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+