India
  • search
  • Live TV
ಅಮೃತಸರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಇಬ್ಬರು ಅಧಿಕಾರಿಗಳಿಗೆ ಗುಂಡು ಹಾರಿಸಿದ ಯೋಧ

|
Google Oneindia Kannada News

ಚಂಡೀಗಢ, ಜೂನ್ 27: ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯಲ್ಲಿ ಸೋಮವಾರ ನಡೆದ ಗುಂಡಿನ ದಾಳಿನ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಇಬ್ಬರು ಸೇನಾ ಅಧಿಕಾರಿಗಳು ಹತ್ಯೆಗೀಡಾಗಿದ್ದಾರೆ.

ಭಾರತೀಯ ಸೇನೆಗೆ ಸೇರಿರುವ ಯೋಧನಿಂದಲೇ ಇಬ್ಬರು ಅಧಿಕಾರಿಗಳ ಹತ್ಯೆಯಾಗಿದೆ. ತನ್ನ ಇಬ್ಬರು ಸಹೋದ್ಯೋಗಿಗಳನ್ನು ಯೋಧ ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. ಈ ಸೇನಾ ಸಿಬ್ಬಂದಿ ಅವರು ಮಿರ್ಥಲ್ ಕಂಟೋನ್ಮೆಂಟ್‌ನಲ್ಲಿದ್ದರು.

ಮೃತ ಸಶಸ್ತ್ರ ಪಡೆಗಳ ಇಬ್ಬರು ಅಧಿಕಾರಿಗಳು ಮಲಗಿ ನಿದ್ರಿಸುತ್ತಿದ್ದ ವೇಳೆಯಲ್ಲಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಕೊಲೆಗೆ ಕಾರಣಗಳು ಇನ್ನೂ ಬಹಿರಂಗವಾಗಿಲ್ಲ.

ಘಟನೆ ವಿವರ: ಇಂದು ಮುಂಜಾನೆ 2.30 ರ ಸುಮಾರಿಗೆ ಮಿರ್ಥಾಲ್‌ನಲ್ಲಿರುವ 15ನೇ ಗಾರ್ಡ್ ಸೇನಾ ಸಂಕೀರ್ಣದಲ್ಲಿ ಸೇನಾ ಸಿಬ್ಬಂದಿಗಳ ನಡುವೆ ಸಣ್ಣದಾಗಿ ಮಾತಿನ ಚಕಮಕಿ ಆರಂಭವಾಗಿದೆ. ಮಾತುಕತೆ ವಿಕೋಪಕ್ಕೆ ತಿರುಗಿದ ನಂತರ ಸಹೋದ್ಯೋಗಿಯೊಬ್ಬರು ಗುಂಡಿಕ್ಕಿ ಇಬ್ಬರು ಸೈನಿಕರನ್ನು ಕೊಂದಿದ್ದಾರೆ.

ಗುಂಡು ಹಾರಿಸಿದ ಸಿಪಾಯಿಯನ್ನು ಜಾರ್ಖಂಡ್‌ ಮೂಲದ 22 ವರ್ಷ ವಯಸ್ಸಿನ ಲೋಕೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳದ ಗೌರಿ ಶಂಕರ್ ಮತ್ತು ಮಹಾರಾಷ್ಟ್ರದ ಸೂರ್ಯಕಾಂತ್ ಅವರನ್ನು ಲೋಕೇಶ್ ಅವರು INSAS ರೈಫಲ್‌ನಿಂದ ಗುಂಡಿಕ್ಕಿ ಕೊಂದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಈ ಆಯುಧವು ಸಶಸ್ತ್ರ ಪಡೆಗಳ ಪ್ರಮಾಣಿತ ಪದಾತಿ ಶಸ್ತ್ರವಾಗಿದೆ.

ಘಟನೆ ನಡೆದಾಗ ಮೂವರೂ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇಬ್ಬರು ಸಿಬ್ಬಂದಿಯನ್ನು ಹತ್ಯೆಗೈದ ಆರೋಪದ ಮೇಲೆ ಲೋಕೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ತಂಡದಿಂದ ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಘಟನೆ ಬಳಿಕ ಆತಂಕಗೊಂಡಿದ್ದ ಲೋಕೇಶ್, ನಗರದಿಂದ ಪರಾರಿಯಾಗಲು ಪ್ರಯತ್ನಿಸುತ್ತಿದ್ದ, ಪೊಲೀಸರು ಬೆಳಗ್ಗೆ 4.30 ರ ಸುಮಾರಿಗೆ ಆತನನ್ನು ಹಿಡಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದರು

ನಂಗಲ್ ಭೂರ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 302 ಐಪಿಸಿ (ಕೊಲೆ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

English summary
A jawan of the Army allegedly shot dead two of his colleages in a firing incident on Monday in Pathankot district of Punjab. This army personnel were inside he Mirthal cantonment. The two deceased armed forces personnel were asleep at the time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X