ಪೊಲೀಸರಿಂದ ಮಹಿಳೆಯರಿಗೆ ಉಚಿತವಾಗಿ ಪಿಕ್‌ಅಪ್-ಡ್ರಾಪ್ ಸೇವೆ
ಲೂಧಿಯಾನ, ಡಿಸೆಂಬರ್ 3: ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆ ಒದಗಿಸಲು ಲೂಧಿಯಾನ ಪೊಲೀಸರು ಮುಂದಾಗಿದ್ದಾರೆ.
ಮಹಿಳೆಯರಿಗೆ ಉಚಿತ ಪಿಕ್-ಅಪ್ ಹಾಗೂ ಡ್ರಾಪ್ ಸೇವೆಯನ್ನು ನೀಡಲು ಲೂಧಿಯಾನ ಪೊಲೀಸರು ಸಜ್ಜಾಗಿದ್ದಾರೆ.
ಲೂಧಿಯಾನ ಪೊಲೀಸರು 28 ಎಸ್‌ಎಚ್‌ಓ ವಾಹನಗಳು, 110 ಪಿಸಿ ಮೋಟಾರುಸೈಕಲ್‌ಗಳು ಮತ್ತು 10 ವ್ಯಾನ್‌ಗಳನ್ನು ಹೊಂದಿದ್ದಾರೆ.

ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯೊಳಗೆ ಯಾವುದೇ ಮಹಿಳೆ ಮನೆಗೆ ತೆರಳಲು ವಾಹನ ಸಿಗದಿದ್ದ ಪಕ್ಷದಲ್ಲಿ 112,1091, 7837018555 ನಂಬರ್‌ಗೆ ಕರೆ ಮಾಡಿ ವಾಹನ ಸೇವೆ ಕಲ್ಪಿಸಲಾಗುತ್ತದೆ.
ಪೊಲೀಸ್ ಕಂಟ್ರೋಲ್ ರೂಂ ವ್ಯಾನ್ ಅಥವಾ ಸ್ಟೇಷನ್ ಹೌಸ್ ಆಫೀಸರ್ ವಾಹನ ಬಂದು ಸುರಕ್ಷಿತವಾಗಿ ಸ್ಥಳಕ್ಕೆ ತಲುಪಿಸಲಾಗುತ್ತದೆ. ಹೈದರಾಬಾದ್‌ನಲ್ಲಿ ನಡೆದ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ದೇಶವನ್ನೇ ಬೆಚ್ಚಿ ಬೀಳಿಸಿದೆ. ಹೀಗಾಗಿ ಮಹಿಳೆಯರ ಸುರಕ್ಷತೆ ಬಗ್ಗೆ ಗಮನ ಕೊಡಲು ಲೂಧಿಯಾನ ಪೊಲೀಸರು ಮುಂದಾಗಿದ್ದಾರೆ.












Click it and Unblock the Notifications