ಮದುವೆಗೆ ಕೆಲ ಗಂಟೆಗಳ ಮುಂಚೆ ವಧು ಅಪಹರಣ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮದುವೆ ದಿನ ಇನ್ನೂ ಚೆಂದ ಕಾಣಬೇಕು ಅಂತ ಯಾರಿಗೆ ಅನಿಸೋದಿಲ್ಲ? ಆದರೆ ಅದೇ ಕಾರಣಕ್ಕಾಗಿ ಮದುವೆ ದಿನ ಬ್ಯೂಟಿ ಪಾರ್ಲರ್ ಗೆ ತೆರಳಿದ ಯುವತಿ ಏನಾಗಿದ್ದಾಳೆ ಗೊತ್ತೆ?

ಬ್ಯೂಟಿಪಾರ್ಲರ್ ನ ಹೊರಗಡೆಯಿಂದ ವಧುವನ್ನು ಅಪಹರಿಸಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಈ ಘಟನೆ ನಡೆದಿರುವುದು ಪಂಜಾಬ್ ನ ಮುಕ್ತ್ ಸರ್ ನಲ್ಲಿ. ಆ ಯುವತಿಯ ಮದುವೆಗೆ ಇನ್ನೇನು ಕೆಲವೇ ಗಂಟೆಗಳು ಇರುವಾಗ ಅಪಹರಣ ಮಾಡಲಾಗಿದ್ದು, ಘಟನೆಯ ಸಂಪೂರ್ಣ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.

ಕೆಲವು ಯುವಕರು ವಧುವನ್ನು ಅಪಹರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಎಸ್.ಪಿ.ರಣ್ಬೀರ್ ಸಿಂಗ್ ಹೇಳಿದ್ದಾರೆ. ಬ್ಯೂಟಿಪಾರ್ಲರ್ ಎದುರಿಗೆ ಇರುವ ಮಳಿಗೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯಾವಳಿಗಳು ಸೆರೆಯಾಗಿದ್ದು, ಬೆಳಗ್ಗೆ 5.30ರ ವೇಳೆಗೆ ಬ್ಯೂಟಿಪಾರ್ಲರ್ ನಿಂದ ಆಚೆ ಬಂದ ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ.

Bride abducted outside beauty parlor hours before wedding

ಆ ಯುವತಿಯು ಪ್ರತಿರೋಧ ಒಡ್ಡಿರುವುದು ಕಂಡುಬಂದಿದೆ. ಆದರೆ ಆಕೆಯನ್ನು ಎತ್ತಿ, ಕಾರಿನೊಳಗೆ ತುಂಬಿಕೊಂಡಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+