ಅಮೃತಸರದ ನಿರಂಕಾರಿ ಭವನದ ಮೇಲೆ ಬಾಂಬ್ ದಾಳಿ, 3 ಸಾವು
ಅಮೃತ್ ಸರ್, ನವೆಂಬರ್ 18: ಅಮೃತಸರದ ರಜಸಾನ್ಸಿ ಗ್ರಮದ ನಿರಂಕಾರಿ ಭವನದ ಮೇಲೆ ಅಪರಿಚರು ಬಾಂಬ್ ದಾಳಿ ನಡೆಸಿದ್ದಾರೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಘಟನಾ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಬೈಕಿನಿಂದ ಅಪರಿಚಿತರು ಬಾಂಬ್ ಎಸೆದಿದ್ದು, ಇದರಿಂದಾಗಿ ಮೂವರು ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಭಾನುವಾರ(ನವೆಂಬರ್ 18) ಬೆಳಗ್ಗೆ ನಡೆದಿದೆ.

ಸ್ಪೋಟದ ತೀವ್ರತೆಗೆ ಸ್ಥಳದಲ್ಲಿ ಮೃತರ ಶವಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿದೆ. ಅಮೃತಸರ್ ದ ಅದ್ಲಿವಾಲ್ ಗ್ರಾಮ ನಿರಾಂಕರಿ ಧಾರ್ಮಿಕ ಕೇಂದ್ರದ ಮೇಲೆ ದಾಳಿಯಾಗಿದ್ದು, ಮೂವರು ಮೃತಪಟ್ಟಿದ್ದು, 10 ಮಂದಿಗೆ ಗಾಯವಾಗಿದೆ. ಮೃತ ದೇಹಗಳು ಚೆಲ್ಲಾಪಿಲ್ಲಿಯಾಗಿವೆ ಎಂದು ಡಿಸಿಪಿ ಕಮಲ್ ದೀಪ್ ಸಿಂಗ್ ಅವರು ಹೇಳಿದ್ದಾರೆ.
Spot visuals: Several injured in a blast at Nirankari Bhawan in Amritsar's Rajasansi village. More details awaited. #Punjab pic.twitter.com/Fzk0FW4725
— ANI (@ANI) November 18, 2018












Click it and Unblock the Notifications