ಕೊರೊನಾಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೆ ನೆಗೆಟಿವ್
ನವದೆಹಲಿ, ಮಾರ್ಚ್ 27: ಕೊರೊನಾ ಭೀತಿಯಿಂದ 23 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಆ ವ್ಯಕ್ತಿಗೆ ಈಗ ಕೊರೊನಾ ನೆಗೆಟಿವ್ ಎಂಬ ವರದಿ ಬಂದಿದೆ.
ಮೃತಪಟ್ಟ ವ್ಯಕ್ತಿ ಪಂಜಾಬ್ ನ ಬಾಲಾಚೌರ್ ನವರಾಗಿದ್ದು, ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದಿದ್ದರು. ವಿದೇಶದಿಂದ ಬಂದ ಕಾರಣ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಿ, ನಂತರ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾಗಿತ್ತು.
ನನಗೆ ಕೊರೊನಾ ವೈರಸ್ ಹರಡಿದೆ ಎನ್ನುವ ಆತಂಕದಲ್ಲಿ ಆ ಯುವಕ ಆಸ್ಪತ್ರೆಯ ಏಳನೇ ಮಹಡಿಯಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ, ಆ ವ್ಯಕ್ತಿಗೆ ಕೊರೊನಾ ಪರೀಕ್ಷಾ ವರದಿ ಈಗ ಬಂದಿದ್ದು, ನೆಗೆಟಿವ್ ಎಂದು ತಿಳಿದಿದೆ. ಪರೀಕ್ಷೆ ವರದಿ ಬರುವ ಮೊದಲೇ ಕೊರೊನಾ ಬೀತಿಯಿಂದಲೇ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಫ್ದರ್ಜಂಗ್ ಆಸ್ಪತ್ರೆಯ ವಿರುದ್ಧ. ಯುವಕನ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏನೆನೋ ಪರೀಕ್ಷೆ ಮಾಡಿ ಮಗನಿಗೆ ಆಸ್ಪತ್ರೆಯವರು ಆತಂಕ ಹುಟ್ಟಿಸಿದ್ದಾರೆ. ಕೊನೆಯ ಬಾರಿ ಮಗನನ್ನು ನೋಡಲು ಬಿಡಲಿಲ್ಲ. ಈ ಸಾವಿಗೆ ಅವರೇ ಕಾರಣ ಎಂದು ಆರೋಪ ಮಾಡಿದ್ದಾರೆ.












Click it and Unblock the Notifications