ವಿಧಾನಸಭೆ ಅಧಿವೇಶನಕ್ಕೆ 2 ದಿನ ಬಾಕಿ: ಪಂಜಾಬಿನ 23 ಶಾಸಕರಿಗೆ ಕೊರೊನಾ ಸೋಂಕು
ನವದೆಹಲಿ, ಆಗಸ್ಟ್ 26: ಪಂಜಾಬ್‌ನ ವಿಧಾನಸಭೆ ಅಧಿವೇಶನಕ್ಕೆ ಇನ್ನು ಕೇವಲ 2 ದಿನಗಳಷ್ಟೇ ಬಾಕಿ ಇದೆ. ಇಲ್ಲಿಯವರೆಗೆ 23 ಶಾಸಕರಿಗೆ ಕೊರೊನಾ ಸೋಂಕು ತಗುಲಿದೆ.
Recommended Video
ಈ ಕುರಿತು ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಾಹಿತಿ ನೀಡಿದ್ದಾರೆ.ಇದು ಶಾಸಕರು, ಮಂತ್ರಿಗಳ ಸ್ಥಿತಿಯಾಗಿದ್ದರೆ, ಈ ನೆಲದ ಪರಿಸ್ಥಿತಿ ಹೇಗಿದೆ ಎಂಬುದನ್ನು ಊಹಿಸಬಹುದು, ಪರೀಕ್ಷೆಯನ್ನು ನಡೆಸಲು ಈ ಸನ್ನಿವೇಶ ಸೂಕ್ತವಾಗಿಲ್ಲ, ಎಂಜಿನಿಯರಿಂಗ್, ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಅವಕಾಶ ನೀಡುವ ಕೇಂದ್ರದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಗಳ ಆನ್‌ಲೈನ್ ಸಭೆಯಲ್ಲಿ ಸುಪ್ರೀಂಕೋರ್ಟ್ ಹೋಗಬೇಕೆಂದು ಸೂಚಿಸಿದ್ದು, ಈ ಸಾಂಕ್ರಾಮಿಕ ರೋಗ ಮಧ್ಯೆ ಜೆಇಇ, ನೀಟ್ ಪರೀಕ್ಷೆಯನ್ನು ಮುಂದೂಡಲು ಮನವಿ ಮಾಡಿದ್ದಾರೆ.

ಸಿಂಗ್ ಅವರು ಪಂಜಾಬ್ ಅಡ್ವೊಕೇಟ್ ಜನರಲ್ ಅತುಲ್ ನಂದಾ ಅವರನ್ನು ವಿರೋಧ ಪಕ್ಷ ಆಡಳಿತದಲ್ಲಿರುವ ಇತರೆ ರಾಜ್ಯಗಳಲ್ಲಿ ತಮ್ಮ ಸಹವರ್ತಿಗಳೊಂದಿಗೆ ಸುಪ್ರೀಂಕೋರ್ಟ್‌ನಲ್ಲಿ ಪರಿಶೀಲನಾ ಅರ್ಜಿ ಸಲ್ಲಿಸುವಂತೆ ಕೇಳಿದರು.
ಪರೀಕ್ಷೆಯನ್ನು ಮುಂದೂಡುವಂತೆ ಮನವಿ ಮಾಡಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳ ಜೀವದ ಪ್ರಶ್ನೆ ಇದಾಗಿದೆ. ಅವರು ಮುಂದಿನ ವರ್ಷವೂ ಕೂಡ ಪರೀಕ್ಷೆ ಬರೆಯಬಹುದು, ಅವರ ಆರೋಗ್ಯ ಮುಖ್ಯ ಎಂದರು.












Click it and Unblock the Notifications