• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ನೂಲು ವಿಮಾನ ನಿಲ್ದಾಣಕ್ಕೆ ಗ್ರೀನ್ ಸಿಗ್ನಲ್, ಇನ್ನೆರಡು ತಿಂಗಳಲ್ಲಿ ಕಾರ್ಯಾರಂಭ

|

ಕರ್ನೂಲು , ಜನವರಿ 18: ಕರ್ನಾಟಕದ ಜೊತೆ ಒಡನಾಟ ಹೊಂದಿರುವ ಕರ್ನೂಲು ಪಟ್ಟಣಕ್ಕೆ ವಿಮಾನ ನಿಲ್ದಾಣ ಹೊಂದಲು ನಾಗರಿಕ ವಿಮಾನಯಾನ ಸಚಿವಾಲಯ (ಡಿಜಿಸಿಎ) ಹಸಿರು ನಿಶಾನೆ ತೋರಿದೆ. ಆಂಧ್ರಪ್ರದೇಶ ವಿಮಾನಯಾನ ಅಭಿವೃದ್ಧಿ ನಿಗಮ ನಿಯಮಿತ (ಎಪಿಡಿಸಿಎಲ್) ಕ್ಕೆ ಲೈಸನ್ಸ್ ದೊರೆತಿದೆ. ಕರ್ನೂಲ್ ವಿಮಾನ ನಿಲ್ದಾಣ ಮಾರ್ಚ್ ತಿಂಗಳಲ್ಲಿ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ.

ಊರ್ವಕಾಲ್ ವಿಮಾನ ನಿಲ್ದಾಣ ಸುಮಾರು 970 ಎಕರೆ ವಿಸ್ತೀರ್ಣ ಹೊಂದಿದ್ದು, ಕರ್ನೂಲ್ ಪಟ್ಟಣದಿಂದ 20 ಕಿ.ಮೀ ದೂರದಲ್ಲಿದೆ. ವಿಜಯವಾಡದಿಂದ 350 ಕಿ.ಮೀ ಹಾಗೂ ಬೆಂಗಳೂರಿನಿಂದ 360 ಕಿ. ಮೀ ದೂರವಿದೆ. ಹೈದರಾಬಾದ್ ವಿಮಾನ ನಿಲ್ದಾಣ 200 ಕಿ.ಮೀ ದೂರದಲ್ಲಿದೆ.

ರಾಜ್ಯ ಸರ್ಕಾರದಿಂದಲೇ ಸಂಪೂರ್ಣವಾಗಿ ನಿರ್ಮಿತವಾದ ದಕ್ಷಿಣ ಭಾರತದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗುರತು ಈ ವಿಮಾನ ನಿಲ್ದಾಣ ಹೊಂದಿದೆ. ನಾಲ್ಕು ಪ್ರತ್ಯೇಕ ಪಾರ್ಕಿಂಗ್ ಸ್ಥಳ. ಎಟಿಆರ್ -72/ಕ್ಯೂ 400 ಕೆಟಗೆರಿ ಲಘು ಏರ್ ಕ್ರಾಫ್ಟ್ ಗಳ ಕಾರ್ಯಾಚರಣೆಗೆ ರನ್ ವೇ ಸಿದ್ಧವಾಗಿದೆ.

Kurnool Airport To Start Operations From March

ರಾತ್ರಿ ವೇಳೆ ಲ್ಯಾಂಡಿಂಗ್, ಪೈಲಟ್ ತರಬೇತಿ ಕೇಂದ್ರಗಳನ್ನು ಶೀಘ್ರದಲ್ಲೇ ಊರ್ವಕಾಲ್ ವಿಮಾನ ನಿಲ್ದಾಣ ಹೊಂದಲಿದೆ ಎಂದು ಆಂಧ್ರಪ್ರದೇಶ ಕೈಗಾರಿಕಾ ಸಚಿವ ಮೇಕಾಪಟಿ ಗೌತಮ ರೆಡ್ಡಿ ತಿಳಿಸಿದರು.

ಈ ವಿಮಾನ ನಿಲ್ದಾಣದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದಂತೆ ರಾಯಲಸೀಮೆಯಂದ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಪ್ರಮುಖ ನಗರಗಳಿಗೆ ಸಂಪರ್ಕ ಸಾಧ್ಯತೆ ಹೆಚ್ಚಾಗುವ ನಿರೀಕ್ಷೆಯಿದೆ.

ಮಂತ್ರಾಲಯ, ಶ್ರೀಶೈಲಂ, ಮಹಾನಂದಿ, ಅಹೋಬಿಲಂ, ಅದೋನಿ, ಉರುವಗೊಂಡ,ಎಲ್ಲಾರ್ತಿ ದರ್ಗಾ ಸೇರಿದಂತೆ ಪ್ರಮುಖ ಧಾರ್ಮಿಕ, ಪ್ರೇಕ್ಷಣೀಯ ಸ್ಥಳಿಗಳಿಗೆ ಉತ್ತಮ ಸಂಪರ್ಕ ಸಿಗಲಿದೆ.

English summary
The Director of Civil Aviation (DGCA) has granted licence to Andhra Pradesh Airports Development Corporation Limited (APDCL) to open Kurnool Airport at Orvakal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X