ತಿರುಪತಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಡಾಲರ್ ಶೇಷಾದ್ರಿ ನಿಧನ
ತಿರುಪತಿ, ನವೆಂಬರ್ 30: ತಿರುಮಲ ತಿರುಪತಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಡಾಲರ್ ಶೇಷಾದ್ರಿ ನಿಧನರಾಗಿದ್ದಾರೆ.
ಡಾಲರ್ ಶೇಷಾದ್ರಿ ಅವರಿಗೆ ಹೃದಯಾಘಾತವಾಗಿತ್ತು ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುತ್ತಿದ್ದ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. 1978 ರಿಂದಲೂ ಡಾಲರ್ ಶೇಷಾದ್ರಿ ಅವರು ದೇವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 2007 ರಲ್ಲಿ ನಿವೃತ್ತರಾಗಿದ್ದರು. ನಂತರ ಒಎಸ್ ಡಿ ಆಗಿ ಮುಂದುವರೆದಿದ್ದರು.
ಡಾಲರ್ ಶೇಷಾದ್ರಿ ನಿಧನಕ್ಕೆ ಟಿ ಟಿ ಡಿ ಅಧ್ಯಕ್ಷ ವೈ.ವಿ ಸುಬ್ಬಾರೆಡ್ಡಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಟಿಟಿಡಿಯ ಹೆಚ್ಚುವರಿ ಇಒ ಧರ್ಮ ರೆಡ್ಡಿ ಡಾಲರ್ ಶೇಷಾದ್ರಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಟಿಟಿಡಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಲೇ ಶೇಷಾದ್ರಿ ಅವರಿಗೆ ಹೃದಯಾಘಾತ ಸಂಭವಿಸಿದೆ.

ಜುಲೈ 31, 2006ರಂದು ಪಾಲಾ ಶೇಷಾದ್ರಿ ಅವರು ನಿವೃತ್ತಿ ಹೊಂದಿದ್ದರು, ಅಂದಿನಿಂದ ವಿಶೇಷ ಮಾನವೀಯತೆ ಮೇಲೆ ಅಧಿಕಾರ ವಿಸ್ತರಣೆಯಲ್ಲಿದ್ದರು. ಆಗಮ ಶಾಸ್ತ್ರ ಪಂಡಿತರಾಗಿದ್ದ ಡಾಲರ್ ಶೇಷಾದ್ರಿ ಅವರು ಕಳೆದ 50 ವರ್ಷಗಳಿಂದ ತಿರುಮಲ ವೆಂಕಟೇಶ್ವರ ದೇವರ ಸೇವೆ ಸಲ್ಲಿಸುತ್ತಿದ್ದರು.
2007ರಲ್ಲಿ ದೇವಸ್ಥಾನದ 300 ಚಿನ್ನದ ಡಾಲರ್‌ಗಳು ನಾಪತ್ತೆಯಾಗಿದ್ದಾಗ ಇವರ ಮೇಲೆ ಆರೋಪ ಬಂದು ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಬಳಿಕ ಇವರನ್ನು ಆರೋಪಮುಕ್ತಗೊಳಿಸಿ ಟಿಟಿಡಿಯಲ್ಲಿ ಸೇವೆಗೆ ಅವಕಾಶ ನೀಡಲಾಗಿತ್ತು.ತಿರುಪತಿ ತಿರುಮಲ ದೇವಸ್ಥಾನದ ಕಣ್ಣು-ಕಿವಿ ಮೂಗು ಕೊನೆಗೆ ಆತ್ಮವೇ ಆಗಿದ್ದ. ದೇಶ-ವಿದೇಶದ ವಿವಿಐಪಿಗಳು ಶ್ರೀವಾರಿ ದರ್ಶನಕ್ಕೆ ಬಂದಾಗಲೂ ಅದರ ಸಂಪೂರ್ಣ ಹೊಣೆಗಾರಿಕೆ ಶೇಷಾದ್ರಿ ಅವರದೇ.ಎಲ್ಲಾ ಸೇವಾ ಕಾರ್ಯಗಳ ಉಸ್ತುವಾರಿ ಕೂಡ ಇವರದೇ. ದರ್ಶನದ ಸಮಯ ನಿಗದಿ ಮಾಡುವುದರಿಂದ ಹಿಡಿದು ಯಾವ ಯಾವ ಕಾಲದಲ್ಲಿ ಯಾವ ಯಾವ ತರದ ಪೂಜೆಗಳಿಗೆ ಯಾವ ಯಾವ ತರದ ವ್ಯವಸ್ಥೆಗಳು ಆಗಬೇಕು ಅಂತ ನೋಡಿಕೊಳ್ಳುತ್ತಿದ್ದವರು ಶೇಷಾದ್ರಿ.
1978 ರಲ್ಲಿ ಸಾಧಾರಣ ಟಿಟಿಡಿ ಉದ್ಯೋಗಿಯಾಗಿ ಕೆಲಸಕ್ಕೆ ಸೇರಿದ ಶೇಷಾದ್ರಿ 2007 ರಲ್ಲಿ ಹುದ್ದೆಯಿಂದ ಅಧಿಕೃತವಾಗಿ ನಿವೃತ್ತಿಯನ್ನು ಹೊಂದಿದ್ದರು. ಮೊದಲೇ ಹೇಳಿದಂತೆ ಅವರು ಆ ಹೊತ್ತಿಗೆ ತಿರುಪತಿ ತಿರುಮಲ ದೇವಸ್ಥಾನದ ಆತ್ಮವೇ ಆಗಿಬಿಟ್ಟಿದ್ದರು ಹೀಗಾಗಿ ಅವರ ಸೇವೆಯನ್ನು ಮುಂದುವರಿಸಲು ನಿರ್ಧರಿಸಿದ ಟಿಟಿಡಿ ಅವರನ್ನು OSD (ಆಫೀಸರ್ ಇನ್ ಸ್ಪೆಷಲ್ ಡ್ಯೂಟಿ) ಹುದ್ದೆಯನ್ನು ಸೃಷ್ಠಿಸಿ ಅವರನ್ನು TTD ಯಲ್ಲಿ ಮುಂದುವರಿಸಿತು. ಸರ್ಕಾರಗಳು ಬದಲಾದರೂ, ಮುಖ್ಯಮಂತ್ರಿಗಳು ಬದಲಾದರೂ ಅವರ ಸ್ಥಾನ ಟಿಟಿಡಿಯಲ್ಲಿ ಅಬಾಧಿತ. ಮಕ್ಕಳಿಲ್ಲದ ಶೇಷಾದ್ರಿ ದಂಪತಿಗಳು ಟಿಟಿಡಿಯ ಒಂದು ಸಾಧಾರಣ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿದ್ದರು.
ಬಹುಶಃ ಮಕ್ಕಳಿಲ್ಲ ಎಂಬ ಕೊರಗು ಇಲ್ಲದಷ್ಟು ಮಟ್ಟಕ್ಕೆ ಶೇಷಾದ್ರಿಯವರು ತಮ್ಮನ್ನು ತಾವು ಶ್ರೀವಾರಿ ಸೇವೆಯಲ್ಲಿ ತೊಡಗಿಸಿಕೊಂಡು ಬಿಟ್ಟಿದ್ದರು. ಅವರಿಗೆ ಇದ್ದ ಸಂಪರ್ಕದಲ್ಲಿ ಬೇಕಾದರೆ ಬೆಟ್ಟದಷ್ಟು ಹಣವೇ ಮಾಡಬಹುದಾಗಿತ್ತು. ಆದರೆ ಡಾಲರ್ ಶೇಷಾದ್ರಿ ಅಂತಹ ಅವಕಾಶಗಳಿಗಾಗಿ ಕೈ ಒಡ್ಡಲಿಲ್ಲ. 2016ರಲ್ಲಿ ಹೃದಯಾಘಾತಕ್ಕೆ ಒಳಗಾದ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಪ್ರಾಣಪಕ್ಷಿ ಹಾರದಂತೆ ಅಪೋಲೋ ಆಸ್ಪತ್ರೆ ಸಿಬ್ಬಂದಿ ನೋಡಿಕೊಂಡಿದ್ದರು.
ಇಂದು ಮುಂಜಾನೆ ವೈಜಾಗ್ ನಲ್ಲಿ ಟಿಟಿಡಿ ವತಿಯಿಂದ ಕಾರ್ತಿಕ ಸೋಮವಾರದ ಆಚರಣೆಗಾಗಿ ಬಂದಿದ್ದ ಶೇಷಾದ್ರಿ ಅವರು 4:00 ಹೊತ್ತಿನ ಸಮಯದಲ್ಲಿ ಹೃದಯಾಘಾತದಿಂದ ದೈಹಿಕವಾಗಿ ಸಮಾಜದಿಂದ,ಶ್ರೀವಾರಿ ಸೇವೆಯಿಂದ ದೂರವಾಗಿದ್ದಾರೆ.
ಇಷ್ಟಕ್ಕೂ ಅವರನ್ನು ಯಾಕೆ ಡಾಲರ್ ಶೇಷಾದ್ರಿ ಅಂತ ಕರೆಯುತ್ತಿದ್ದರು ಗೊತ್ತೆ?
ಶೇಷಾದ್ರಿ ಅವರು ಶ್ರೀವಾರಿ ವಾಹನವಾದ ಗರುಡ ಡಾಲರ್ ಸದಾ ತಮ್ಮ ಕೊರಳಿನಲ್ಲಿ ಧರಿಸಿರುತ್ತಿದ್ದರು. ಹೀಗಾಗಿಯೇ ಅವರು ಡಾಲರ್ ಶೇಷಾದ್ರಿ ಅಂತಲೇ ಎಲ್ಲರಿಂದಲೂ ಕರೆಯಲ್ಪಟ್ಟರು- ರವೀಂದ್ರ ಕೊಠಾರಿ
Recommended Video
-
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ












Click it and Unblock the Notifications