ಆಂಧ್ರದಲ್ಲಿ 35 ಸಾವಿರದ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ
ಅಮರಾವತಿ, ಜುಲೈ 15 : ಆಂಧ್ರಪ್ರದೇಶದಲ್ಲಿ 2,432 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದ್ದು ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 35,000ದ ಗಡಿದಾಟಿದೆ. ಇದುವರೆಗೂ 452 ಜನರು ರಾಜ್ಯದಲ್ಲಿ ಮೃತಪಟ್ಟಿದ್ದಾರೆ.
Recommended Video
ಭಾರತದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕಿತರು ಇರುವ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರಪ್ರದೇಶ 8ನೇ ಸ್ಥಾನದಲ್ಲಿದೆ. ಬುಧವಾರ 2,432 ಹೊಸ ಪ್ರಕರಣ ದಾಖಲಾಗಿದ್ದು, 44 ಜನರು ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಒಟ್ಟು ಸಂಖ್ಯೆ 35,451ಕ್ಕೆ ಏರಿಕೆಯಾಗಿದೆ. ರಾಜ್ಯದ ಪಕ್ಕದ ತೆಲಂಗಾಣದಲ್ಲಿ 37,745 ಪ್ರಕರಣಗಳು ಇವೆ. ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 44,077.

ಸೋಮವಾರ ಲಾಕ್ ಡೌನ್ ಮಾರ್ಗಸೂಚಿಯನ್ನು ಬದಲಾವಣೆ ಮಾಡಿದ್ದ ಆಂಧ್ರಪ್ರದೇಶ ಸರ್ಕಾರ ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳನ್ನು ಅತಿ ಅಪಾಯಕಾರಿ ರಾಜ್ಯಗಳ ಪಟ್ಟಿಗೆ ಸೇರಿಸಿತ್ತು. ಅಂತರರಾಜ್ಯಗಳ ಸಂಚಾರವನ್ನು ಬಂದ್ ಮಾಡಿದ್ದ ಆಂಧ್ರಪ್ರದೇಶ ಸೋಮವಾರದಿಂದ ಅದನ್ನು ತೆರವುಗೊಳಿಸಿತ್ತು.
ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ತೆಲಂಗಾಣ ರಾಜ್ಯಗಳನ್ನು ಅತಿ ಅಪಾಯಕಾರಿ ರಾಜ್ಯಗಳು ಎಂದು ಆಂಧ್ರಪ್ರದೇಶ ಪಟ್ಟಿ ಮಾಡಿದೆ. ಈ ರಾಜ್ಯಗಳ ಜನರು ಆಂಧ್ರಪ್ರದೇಶಕ್ಕೆ ಸಂಚಾರ ನಡೆಸಲು ಪಾಸು ಪಡೆಯಬೇಕು. ರಾಜ್ಯದ ಗಡಿಯಲ್ಲಿ ಕಡ್ಡಾಯವಾಗಿ ಸ್ಕ್ರೀನಿಂಗ್‌ಗೆ ಒಳಪಡಬೇಕಿದೆ.












Click it and Unblock the Notifications