ಪ್ರಧಾನಿ ನರೇಂದ್ರ ಮೋದಿ ಒಬ್ಬ ಉಗ್ರ: ಚಂದ್ರಬಾಬು ನಾಯ್ಡು
ಅಮರಾವತಿ, ಮಾರ್ಚ್ 03: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎನ್ನುವ ಮೂಲಕ ಅವರ ಅಭಿಮಾನಿಗಳ ಕೆಂಗಣ್ಣಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಕಾರಣರಾಗಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಲೋಕಸಭೆ ಚುನಾವಣೆ ಮತ್ತು ಆಂಧ್ರದ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರ ಸಮಾವೇಶವೊಂದರಲ್ಲಿ ಅವರು ಮಾತನಾಡುತ್ತಿದ್ದರು.
"ಮೋದಿಯವರನ್ನು ಉತ್ತಮ ಮನುಷ್ಯ ಎನ್ನಬೇಡಿ! ಅವರೊಬ್ಬ ಉಗ್ರ. ನಾನು ಅಲ್ಪಸಂಖ್ಯಾತರಿಗೆ ಒಂದು ಎಚ್ಚರಿಕೆಯನ್ನು ನೀಡಬಲ್ಲೆ. ಅಕಸ್ಮಾತ್ ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಭಾರೀ ಸಮಸ್ಯೆ ಎದುರಿಸಬೇಕಾಗಬಹುದು" ಎಂದರು.

"ಅವರು ತ್ರಿವಳಿ ತಲಾಖ್ ಮಸೂದೆಯನ್ನು ಜಾರಿಗೆ ತಂದರು. ನಿಮ್ಮನ್ನು(ಮುಸ್ಲಿಮರು) ಜೈಲಿನಲ್ಲಿ ಕೂಡಿಹಾಕಲು ಪಿತೂರಿ ನಡೆಸಿದರು. ಗೋಧ್ರಾದಲ್ಲಿ 2000 ಕ್ಕೂ ಹೆಚ್ಚು ಜನರನ್ನು ಕೊಂದರು. ಆ ಸಮಯದಲ್ಲಿ ನಾನು ಅವರ ರಾಜೀನಾಮೆಗೆ ಬೇಡಿಕೆ ಇಟ್ಟಿದ್ದೆ. ಆ ಸಮಯದಲ್ಲಿ ದೇಶದಲ್ಲಿ ಎಲ್ಲೂ ಅವರಿಗೆ ಬೆಲೆ ಇರಲಿಲ್ಲ. ಆದರೆ ಅವರು ಮತ್ತೆ ಈಗ ಅಲ್ಪಸಂಖ್ಯಾತರ ಹಕ್ಕು ಕಸಿವ ಕೆಲಸ ಮಾಡುತ್ತಿದ್ದಾರೆ"ಎಂದು ನಾಯ್ಡು ದೂರಿದರು.












Click it and Unblock the Notifications