ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಂಟೂರು ಮೆಣಸಿನಕಾಯಿಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ!

|
Google Oneindia Kannada News

ಗುಂಟೂರು, ಡಿಸೆಂಬರ್ 30: ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಶೇಖರಿಸಿಡಲಾಗಿದ್ದ ಗುಂಟೂರು ಮೆಣಸಿನಕಾಯಿಯಲ್ಲಿ ಕ್ಯಾನ್ಸರ್‌ಗೆ ಕಾರಣ ಆಗಬಹುದಾದಂತಹ ಅಂಶಗಳು ಪತ್ತೆಯಾಗಿವೆ.

ಮೆಣಸಿನಕಾಯಿಯ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಎಫ್ಲಾಟಾಕ್ಸಿನ್ ಎಂಬ ಕ್ಯಾನ್ಸರ್‌ ತರಬಹುದಾದಂತಹ ಅಂಶ ಸಾಮಾನ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ.

cancer-causing antitoxins found in Guntur chili samples

ಗುಂಟೂರು ಮೆಣಸಿನಕಾಯಿಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾಗಿರುವ ಸಂಶೋಧನಾ ವರದಿಯನ್ನು ಏಷ್ಯನ್ ಜರ್ನಲ್ ಆಫ್ ಫಾರ್ಮಾಸಿಟಿಕ್ಸ್‌ ಇತ್ತೀಚಿಗೆ ಪ್ರಕಟಿಸಿದೆ. ಮೆಣಸಿನಕಾಯಿಯಲ್ಲಿ ಮಣ್ಣಿನಲ್ಲಿ ಹರಡುವುದು, ತೇವಾಂಶದಲ್ಲಿ ಬಿಡುವುದು, ಅವೈಜ್ಞಾನಿಕವಾಗಿ ನಿರ್ವಹಣೆ, ಸಂಸ್ಕರಣೆ ಮಾಡುವುದರಿಂದ ಎಫ್ಲಾಟಾಕ್ಸಿನ್‌ ಅಂಶ ಕಾಣಿಸಿಕೊಳ್ಳುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕಿದ್ವಾಯಿ ಆಸ್ಪತ್ರೆಯ ಧರ್ಮಶಾಲೆ ನವೀಕರಿಸಿದ ಇನ್ಫೋಸಿಸ್ ಕಿದ್ವಾಯಿ ಆಸ್ಪತ್ರೆಯ ಧರ್ಮಶಾಲೆ ನವೀಕರಿಸಿದ ಇನ್ಫೋಸಿಸ್

ಕೆಂಪು ಮೆಣಸಿನಕಾಯಿಯು ಮಣ್ಣಿನೊಂದಿಗೆ ಹೆಚ್ಚು ಸಂಪರ್ಕದಲ್ಲಿದ್ದರೆ ಈ ಕ್ಯಾನ್ಸರ್‌ಕಾರಕ ವಿಷ ಅದರಲ್ಲಿ ಸೇರಿಸಿಕೊಳ್ಳುತ್ತದೆ ಎನ್ನಲಾಗಿದೆ.

ಮಚಿಲಿಪಟ್ಟಣದ ಕೃಷ್ಣಾ ವಿಶ್ವವಿದ್ಯಾನಿಲಯದ ಸಂಶೋಧಕರು ಹಾಗೂ ವಿಜಯವಾಡದ ಕೆಬಿಎನ್‌ ಬಿಜಿ ಕಾಲೇಜು ಹಾಗೂ ಪಿ.ಬಿ. ಸಿದ್ಧಾರ್ಥ ಕಾಲೇಜು ಸೇರಿ ಎರಡು ಸ್ನಾತಕೋತ್ತರ ಕಾಲೇಜುಗಳು ಗುಂಟೂರು ನಗರದ ಹಲವೆಡೆ ಮೆಣಸಿನಕಾಯಿಯ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದಾರೆ.

ಕ್ಯಾನ್ಸರ್ ಚಿಕಿತ್ಸೆ ನಂತರ ಮುಂಬೈಗೆ ಮರಳಿದ ಸೋನಾಲಿ ಬೇಂದ್ರೆ ಕ್ಯಾನ್ಸರ್ ಚಿಕಿತ್ಸೆ ನಂತರ ಮುಂಬೈಗೆ ಮರಳಿದ ಸೋನಾಲಿ ಬೇಂದ್ರೆ

ಸಂಗ್ರಹಿಸಿದ ಏಳು ಮಾದರಿಗಳಲ್ಲಿ ಐದರಲ್ಲಿ ಜಿ1, ಜಿ2 ಹಾಗೂ ಬಿ2 ಎಫ್ಲಾಟಾಕ್ಸಿನ್ಸ್‌ಗಳು ಪತ್ತೆಯಾಗಿವೆ. ಅಲ್ಲದೆ, ಎಫ್ಲಾಟಾಕ್ಸಿನ್‌ ಸ್ವಲ್ಪ ಪ್ರಮಾಣದಲ್ಲಿದ್ದರೂ ಕ್ಯಾನ್ಸರ್‌ಗೆ ಕಾರಣವಾಗಬಲ್ಲದು. ಇನ್ನು, ಇದರಿಂದ ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚು ತೊಂದರೆಯಾಗುತ್ತದೆ ಎಂದು ವರದಿಗಳು ಹೇಳಿವೆ.

ಕ್ಯಾನ್ಸರ್ ಪೀಡಿತ ನಫೀಸಾ ನೋಡಲು ಬಂದ ಗೆಳತಿ ಸೋನಿಯಾ ಕ್ಯಾನ್ಸರ್ ಪೀಡಿತ ನಫೀಸಾ ನೋಡಲು ಬಂದ ಗೆಳತಿ ಸೋನಿಯಾ

English summary
cancer causing antitoxins poison found in Guntur chili samples collected in Gunturu. Gunturu Chili is famous in India and also world wide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X