ಮೋದಿಗಿಂತ ಅರವಿಂದ್ ಕೇಜ್ರಿವಾಲ್ ಉತ್ತಮ ಪ್ರಧಾನಿಯಾಗಬಲ್ಲರು: ನಾಯ್ಡು

Recommended Video

      ಮೋದಿಗಿಂತ ಅರವಿಂದ್ ಕೇಜ್ರಿವಾಲ್ ಉತ್ತಮ ಪ್ರಧಾನಿಯಾಗಬಲ್ಲರು: ನಾಯ್ಡು..! | Oneindia Kannada

      ಅಮರಾವತಿ, ಫೆಬ್ರವರಿ 14: ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆಯನ್ನು ನೋಡಿದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮೋದಿಗಿಂತ ಉತ್ತಮ ಪ್ರಧಾನಿಯಾಗಬಲ್ಲರು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

      "ಕೇಜ್ರಿವಾಲ್ ಮೋದಿಯವರಿಗಿಂತ 1000 ಪಟ್ಟು ಉತ್ತಮ. ಕೇಜ್ರಿವಾಲ್ ತಾವು ಪದವಿಯನ್ನು ಎಲ್ಲಿ ಪಡೆದರು ಎಂದು ಹೇಳಿಕೊಳ್ಳಬಹುದು. ನಾನೂ ಹೇಳಿಕೊಳ್ಳಬಹುದು. ಆದರೆ ಮೋದಿ ಅವರು ಪದವಿಯನ್ನು ಎಲ್ಲಿ ಪಡೆದರು ಎಂದು ಹೇಳುತ್ತಾರೆಯೇ?" ಎಂದು ಅವರು ವ್ಯಂಗ್ಯವಾಗಿ ಪ್ರಶ್ನಿಸಿದರು.

      Arvind Kejriwal will be better PM than Modi: Chandrababu Naidu

      "ಚಂದ್ರಬಾಬು ನಾಯ್ಡು ಅವರು ವಂಚನೆ ಮಾಡುವುದು ಹೊಸವಿಷಯವಲ್ಲ. ತಮ್ಮ ರಾಜಕೀಯ ಮಿತ್ರರಿಗೆ ಮಾತ್ರವಲ್ಲದೆ, ಸ್ವಂತ ಕುಟುಂಬದ ಸದಸ್ಯರಿಗೂ ಅವರೂ ಮೋಸ ಮಾಡಿದ್ದಾರೆ. ಅವರು ನನಗಿಂತ ಸೀನಿಯರ್ ಎಂದು ಪದೇ ಪದೇ ಹೇಳುತ್ತಾರೆ. ನಿಜ, ಹೀಗೆ ಮೈತ್ರಿಪಕ್ಷದೊಂದಿಗೆ ಸಂಬಂಧ ಕಡಿದುಕೊಳ್ಳುವಲ್ಲಿ, ಮೋಸ ಮಾಡುವುದರಲ್ಲಿ, ಹಿರಿಯರನ್ನು ಅವಹೇಳನ ಮಾಡುವಲ್ಲಿ ಅವರ ನನಗಿಂತ ಹಿರಿಯರೇ! ಅವರು ತಮ್ಮ ಮಾವ(ಎನ್ ಟಿ ರಾಮ ರಾವ್) ನವರಿಗೇ ವಂಚನೆ ಮಾಡಿದ್ದರಲ್ಲ..!" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

      ಅವರ ಮಾತಿಗೆ ಪ್ರತಿಕ್ರಿಯಿಸಿದ್ದ ನಾಯ್ಡು, ಜಶೋದಾಬೆನ್ ಅವರ ಬಗ್ಗೆ ಮಾತನಾಡಿದ್ದರು. ಪ್ರಧಾನಿ ಮೋದಿ ಅವರು ನಮ್ಮ ವೈಯಕ್ತಿಕ ವಿಷಯ ಮಾತನಾಡುವುದಕ್ಕೆ ಬಂದರೆ ನಾವೂ ಹಾಗೆಯೇ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ಖಡಕ್ ಸಂದೇಶ ನೀಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+