• search
 • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈಎಸ್ಸಾರ್ ಕಾಂಗ್ರೆಸ್ ಶಾಸಕಿ ರೋಜಾ ಗನ್ ಮ್ಯಾನ್ ಗೆ ಕೊವಿಡ್ 19

|

ತಿರುಮಲ, ಜುಲೈ 10: ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಶಾಸಕಿ, ಎಪಿಐಸಿ ಚೇರ್ಮನ್ ರೋಜಾ ಅವರ ಗನ್ ಮ್ಯಾನ್ ಗೆ ಕೊರೊನಾವೈರಸ್ ಸೋಂಕು ಇರುವುದು ಪತ್ತೆಯಾಗಿದೆ. ಈ ಬಗ್ಗೆ ಸುದ್ದಿ ಹಬ್ಬುತ್ತಿದ್ದಂತೆ ಗಾಬರಿಗೊಂಡು ರೋಜಾ ಅಭಿಮಾನಿಗಳು ಪ್ರಶ್ನಿಸತೊಡಗಿದ್ದು, ರೋಜಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

   Negative ಇದ್ರು Positive ಇದೆ ಬನ್ನಿ ಅಂತಾರೆ ಹುಷಾರ್ | Victoria Hospital | Oneindia Kannada

   ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮ(APIIC)ದ ಅಧ್ಯಕ್ಷೆ, ನಗರಿ ಕ್ಷೇತ್ರದ ಶಾಸಕಿ ರೋಜಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಯಾರೂ ಗಾಬರಿಯಾಗುವುದು ಬೇಡ, ಗನ್ ಮ್ಯಾನ್ ಗೆ ಕೊವಿಡ್ 19 ಪಾಸಿಟಿವ್ ಇರುವುದು ಪತ್ತೆಯಾಗಿದೆ. ಸದ್ಯ ತಿರುಪತಿಯಲ್ಲಿರ ಶ್ರೀವೆಂಕಟೇಶ್ವರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (SWIMS)ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಳೆದ 15 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ. ನಟಿ, ಶಾಸಕಿ ರೋಜಾ ಹಾಗೂ ಕಚೇರಿ ಸಿಬ್ಬಂದಿಗಳಿಗೂ ಸ್ವಾಬ್ ಟೆಸ್ಟ್ ಸೇರಿದಂತೆ ಕೊವಿಡ್ 19 ಪರೀಕ್ಷೆ ನಡೆಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

   ವೈಎಸ್ಸಾರ್ ಕಾಂಗ್ರೆಸ್ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಜುಲೈ 8ರಂದು ರೈತರ ಕಲ್ಯಾಣ ಯೋಜನೆಗಳ ಕುರಿತ ಕಾರ್ಯಕ್ರಮಗಳಲ್ಲಿ ರೋಜಾ ಪಾಲ್ಗೊಂಡಿದ್ದರು. ಇತ್ತೀಚೆಗೆ 108 ಆಂಬ್ಯುಲೆನ್ಸ್ ಸೇವೆ ಉದ್ಘಾಟನೆ ಮಾಡುವ ಸಂದರ್ಭದಲ್ಲಿ ಸ್ವಯಂ ವಾಹನ ಚಾಲನೆ ಮಾಡಲು ಮುಂದಾಗಿದ್ದರು. ಇದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಾಸ್ಕ್ ಇಲ್ಲದೆ ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಂಡಿದ್ದರಿಂದ ಕೂಡಾ ಅನೇಕರಿಂದ ಟೀಕೆಗೆ ಒಳಗಾಗಿದ್ದರು.

   ಜುಲೈ 10ರಂತೆ ಆಂಧ್ರಪ್ರದೇಶದಲ್ಲಿ 23,814 ಪ್ರಕರಣಗಳಿದ್ದು,11,383 ಸಕ್ರಿಯ ಸೋಂಕಿತ ಪ್ರಕರಣಗಳಿವೆ 12,154 ಮಂದಿ ಗುಣಮುಖರಾಗಿದ್ದಾರೆ. 277 ಮಂದಿ ಮೃತ ಪಟ್ಟಿದ್ದಾರೆ.

   English summary
   APIIC Chairperson MLA Roja’s Gunman is tested positive for Covid-19 and he is being treated at Sri Venkateshwara institute of medical sciences (SWIMS) in Tirupati.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X