ಗುಜರಾತ್‌: 4 ದಿನದಲ್ಲಿ 3 ಕಾಂಗ್ರೆಸ್‌ ಶಾಸಕರ ರಾಜೀನಾಮೆ

ಗಾಂಧಿನಗರ, ಮಾರ್ಚ್‌ 11: ಗುಜರಾತ್‌ನ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಿ ಅಲ್ಪ ಅಂತರದಿಂದ ಸರ್ಕಾರ ರಚಿಸುವ ಅವಕಾಶ ಕಳೆದುಕೊಂಡ ಕಾಂಗ್ರೆಸ್ ಈಗ ಬಹುತೇಕ ಒಡೆದ ಮನೆಯಾಗುವತ್ತ ಸಾಗಿದೆ.

ಕಳೆದ ನಾಲ್ಕು ದಿನದಲ್ಲಿ ಬರೋಬ್ಬರಿ ಮೂವರು ಕಾಂಗ್ರೆಸ್ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದರಲ್ಲಿ ಒಬ್ಬರು ಅಧಿಕೃತವಾಗಿ ಬಿಜೆಪಿ ಸೇರಿದ್ದು, ಇನ್ನಿಬ್ಬರು ಬಿಜೆಪಿ ಸೇರ್ಪಡೆಗೊಳ್ಳುವ ಹಾದಿಯಲ್ಲಿದ್ದಾರೆ.

ಇಂದು ಜಾಮನಗರ ಗ್ರಾಮಾಂತರ ಭಾಗದ ಶಾಸಕರಾಗಿದ್ದ ವಲ್ಲಭ ದಾರಾವಿಯ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ರಾಜೀನಾಮೆ ಪತ್ರವನ್ನು ವಿಧಾನಸಭೆ ಸ್ಪೀಕರ್‌ಗೆ ನೀಡಿದ್ದಾರೆ.

ವಲ್ಲಭ ದಾರಾವಿಯ ಅವರು ಸ್ವಿಚ್ಛೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ ಎಂದು ಗುಜರಾತ್ ವಿಧಾನಸಭೆ ಸ್ಪೀಕರ್ ತ್ರಿವೇದಿ ಮಾಹಿತಿ ನೀಡಿದ್ದಾರೆ.

Three congress MLAs resign in four days in Gujarat

ಕಳೆದ ನಾಲ್ಕು ದಿನದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ಮೂರನೇ ಕಾಂಗ್ರೆಸ್ ಶಾಸಕ ಇವರಾಗಿದ್ದು, ಲೋಕಸಭೆ ಚುನಾವಣೆಗೆ ಮುನ್ನಾ ಇದು ಉತ್ತಮ ಬೆಳವಣಿಗೆ ಅಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಆತಂಕ ವ್ಯಕ್ತಪಡಿಸಿದೆ.

ಬಿಜೆಪಿ ಪಕ್ಷ ಸೇರಲೆಂದು ಈ ಶಾಸಕರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಸೀಟು ಗಿಟ್ಟಿಸಿಕೊಳ್ಳುವ ಉಮೇದು ರಾಜೀನಾಮೆ ನೀಡಿದ ಶಾಸಕರಿಗೆ ಇದೆ.

ವಲ್ಲಭ ದಾರಾವಿಯ ಅವರು ಇಂದು ರಾಜೀನಾಮೆ ನೀಡುವ ಮುನ್ನಾ ಪುರುಶೋತ್ತಮ ಸಬರಿಯಾ ಅವರು ರಾಜೀನಾಮೆ ನೀಡಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು. ಹಗರಣವೊಂದಕ್ಕೆ ಸಂಬಂಧಪಟ್ಟಂತೆ ಅವರನ್ನು ಬಂಧಿಸಲಾಗಿತ್ತು, ಆ ನಂತರ ಅವರು ಬಿಡುಗಡೆ ಆಗಿದ್ದರು.

ಅದಕ್ಕೂ ಮುನ್ನಾ ಮಾರ್ಚ್‌ 8 ರಂದು ಕಾಂಗ್ರೆಸ್‌ನ ಜವಾಹರ್ ಚೌಡಾ ಅವರು ಸಹ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+