ಮೋದಿ ಹೆಸರಿನಲ್ಲಿ ಸೀತಾಫಲ ಐಸ್ ಕ್ರೀಮ್ ಸ್ಪೆಷಲ್

ಅಹಮದಾಬಾದ್, ಮೇ 29: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಜಯವನ್ನು ಸಂಭ್ರಮಿಸಲು ಬಿಜೆಪಿ ಬೆಂಬಲಿಗರೊಬ್ಬರು ಮೋದಿ ಹೆಸರಿನಲ್ಲಿ ಐಸ್ ಕ್ರೀಮ್ ಪರಿಚಯಿಸುತ್ತಿದ್ದಾರೆ.

ಸೂರತ್ ನಲ್ಲಿ ಐಸ್ ಕ್ರೀ ಪಾರ್ಲರ್ ನಲ್ಲಿ ಮೋದಿ ಸೀತಾಫಲ ಕುಲ್ಫಿಯನ್ನು ಹೊರ ತಂದಿದ್ದಾರೆ. ಕುಲ್ಫಿ ಹೆಸರಿಟ್ಟಿರುವುದಷ್ಟೇ ಅಲ್ಲ, ಮೋದಿ ಅವರ ಮುಖವನ್ನು ಅಂದವಾಗಿ ಕುಲ್ಫಿಯನ್ನು ಮೂಡಿಸಲಾಗಿದೆ.

ಮೋದಿ ಕುಲ್ಫಿ ಪರಿಚಯಿಸುತ್ತಿದ್ದಂತೆ ಸಕತ್ ಆಗಿ ಮಾರಾಟವಾಗಿದೆ. ಬಿಜೆಪಿ ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಶೇ 50 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಸೂರತ್ ನ ಐಸ್ ಕ್ರೀಮ್ ಪಾರ್ಲರ್ ಮಾಲೀಕ ವಿವೇಕ್ ಅಜ್ಮೇರಾ ಎಎನ್ಐಗೆ ತಿಳಿಸಿದ್ದಾರೆ. ನಾವು 100% ನೈಸರ್ಗಿಕ ಪದಾರ್ಥಗಳನ್ನು ಮಾತ್ರ ಬಳಸಿದ್ದೇವೆ, ಯಾವುದೇ ಕೃತಕ ಎಸೆನ್ಸ್ ಬಳಸಿಲ್ಲ ಎಂದಿದ್ದಾರೆ.

This ice-cream parlour in Surat introduces Modi Sitafal Kulfi featuring PMs face

ನರೇಂದ್ರ ಮೋದಿ ಅವರು ಮೇ 30ರಂದು ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 542 ಸ್ಥಾನಗಳ ಫಲಿತಾಂಶ ಮೇ 23ರಂದು ಹೊರ ಬಂದಿದ್ದು, ಬಿಜೆಪಿ 303 ಹಾಗೂ ಎನ್ಡಿಎ 352 ಸ್ಥಾನಗಳನ್ನು ಪಡೆದು ಅಧಿಕಾರ ಸ್ಥಾಪನೆಗೆ ಮುಂದಾಗಿದೆ. ಬಿಜೆಪಿ ಬೆಂಬಲಿಗರು ಹಲವೆಡೆ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಉಚಿತ ಆಟೋರಿಕ್ಷಾ, ಟ್ಯಾಕ್ಸಿ ಸೇವೆಯನ್ನು ನೀಡುತ್ತಿದ್ದಾರೆ.

ಲೋಕಸಭೆಯ 542 ಸ್ಥಾನಗಳಿಗಾಗಿ ಏಪ್ರಿಲ್ 11ರಿಂದ ಮೇ 19ರ ತನಕ ಏಳು ಹಂತಗಳಲ್ಲಿ ಚುನಾವಣೆ ನಡೆಸಲಾಯಿತು. ಮೋದಿ ಗೆಲುವಿನ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ ಎಂಬ ಸಂತಸದಲ್ಲಿ ಮುಂಬೈನ ಬೊರಿವಲಿಯ ಸಿಹಿ ತಿನಿಸು ಅಂಗಡಿಯ ಸಿಬ್ಬಂದಿಗಳು ಮೋದಿ ಮುಖವಾಡ ಧರಿಸಿ 2000 ಲಡ್ಡು ತಯಾರಿ ಮಾಡಿ, ಹಂಚಿ ಸಂಭ್ರಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+