ಉಗ್ರ ದಾಳಿ: ಮದುವೆ ಸಂಭ್ರಮದ ನಡುವೆ ಮಾನವೀಯತೆ ಮೆರೆದ ನವಜೋಡಿ
ಸೂರತ್, ಫೆಬ್ರವರಿ 16: ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾಗಲು ದೇಶದಾದ್ಯಂತ ಜನರು ಸಹಾಯ ಹಸ್ತ ಚಾಚುತ್ತಿದ್ದಾರೆ.
ಗುಜರಾತ್‌ನ ಸೂರತ್‌ನಲ್ಲಿನ ನವ ಜೋಡಿಯೊಂದು ಇನ್ನೂ ಒಂದು ಹೆಜ್ಜೆ ಮುಂದಿರಿಸಿದೆ. ಸೈನಿಕರು ಹುತಾತ್ಮರಾದ ಹಿನ್ನೆಲೆಯಲ್ಲಿ ಫೆ. 15ರಂದು ತಮ್ಮ ಮಕ್ಕಳ ಮದುವೆಯನ್ನು ಈ ಕುಟುಂಬಗಳು ಅತ್ಯಂತ ಸರಳವಾಗಿ ನಡೆಸಿದ್ದವು. ನವ ವಿವಾಹಿತ ಜೋಡಿ ಅಮಿ ಮತ್ತು ಮೀತ್, ಹಾಗೂ ಅವರ ಕುಟುಂಬದವರು ಆರತಕ್ಷತೆ ಒಳಗೊಂಡಂತೆ ಮದುವೆಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳನ್ನೂ ರದ್ದುಗೊಳಿಸಲು ನಿರ್ಧರಿಸಿದ್ದಾರೆ.
ಅದಕ್ಕೆ ಖರ್ಚು ಮಾಡುವ ಹಣದಲ್ಲಿ ಐದು ಲಕ್ಷ ರೂಪಾಯಿಯನ್ನು ಸೇನೆಗೆ ಹಾಗೂ 11 ಲಕ್ಷ ರೂಪಾಯಿಯನ್ನು ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ನೀಡಲು ಉದ್ದೇಶಿಸಿದ್ದಾರೆ.

ವಜ್ರ ವ್ಯಾಪಾರ ನಡೆಸುವ ಈ ಎರಡೂ ಕುಟುಂಬಗಳ ನಿರ್ಧಾರಕ್ಕೆ ಮದುವೆ ಸಮಾರಂಭಕ್ಕೆ ಆಹಾರ ಪೂರೈಕೆ ಮಾಡುವವರು ಸೇರಿದಂತೆ ಎಲ್ಲರಿಂದಲೂ ಬೆಂಬಲ ವ್ಯಕ್ತವಾಗಿದೆ.












Click it and Unblock the Notifications