ವಿಡಿಯೋ: ಪುತ್ರ ಪ್ರಧಾನಿ ಮೋದಿಗೆ ತಾಯಿ ಕೊಟ್ಟ ಉಡುಗೊರೆ ಏನು?

Recommended Video

      ಮತ ಚಲಾಯಿಸಲು ತೆರಳುವ ಮುನ್ನ ತಾಯಿಯ ಆಶೀರ್ವಾದ ಪಡೆದ ನರೇಂದ್ರ ಮೋದಿ | Oneindia Kannada

      ಅಹ್ಮದಾಬಾದ್, ಏಪ್ರಿಲ್ 23: ಪ್ರಧಾನಿ ನರೇಂದ್ರ ಮೋದಿ ಅವರು ಮತದಾನಕ್ಕೂ ಮುನ್ನ ತಮ್ಮ ತಾಯಿ ಹೀರಾಬೆನ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಮಗನನ್ನು ಆಶೀರ್ವದಿಸಿ, ಸಿಹಿ ತಿನ್ನಿಸಿದ ಹೀರಾಬೆನ್ ನಂತರ ಅವರಿಗೆ ಕೆಂಪು ಬಣ್ಣದ ಶಾಲ್ ಅನ್ನು ಉಡುಗೊರೆಯಾಗಿ ನೀಡಿದರು.

      ತಾಯಿಯ ಆಶೀರ್ವಾದ ಪಡೆದ ನಂತರ ಅಹ್ಮದಾಬಾದಿನ ರಾನಿಪ್ ಮತಗಟ್ಟೆಯಲ್ಲಿ ಮೋದಿಯವರು ಮತಚಲಾಯಿಸಿದರು. ಮತಚಲಾವಣೆಗೂ ಮುನ್ನ ಟ್ವೀಟ್ ಮಾಡಿದ್ದ ಮೋದಿ, ಮೂರನೇ ಹಂತದ ಮತದಾನಕ್ಕೆ ಪ್ರತಿಬ್ಬರೂ ಭಾಗಿಯಾಗಿ, ತಮ್ಮ ಅಮೂಲ್ಯ ಮತಚಲಾಯಿಸುವಂತೆ ಕರೆ ನೀಡಿದ್ದರು.

      PM Modis mother blesses son and gives a gift to him

      ಮತದಾನದ ನಂತರ ಮಾತನಾಡಿದ ಮೋದಿ, ಉಗ್ರರು ಬಳಸುವ ಐಇಡಿ(ಸುಧಾರಿತ ಸ್ಫೋಟಕ)ಗಿಂತ ಪ್ರಜಾಪ್ರಭುತ್ವದಲ್ಲಿ ಮತದಾರ ಚಲಾಯಿಸುವ ವೋಟಿಗೇ ಹೆಚ್ಚು ಶಕ್ತಿ ಇದೆ ಎಂದರು. ಮಂಗಳವಾರ ಮೂರನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಒಟ್ಟು 15 ರಾಜ್ಯಗಳ 117 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಫಲಿತಾಂಶ ಮೇ 23 ರಂದು ಹೊರಬೀಳಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+