ಖ್ಯಾತ ಜ್ಯೋತಿಷಿ ಬೆಜಾನ್ ದಾರುವಾಲ ವಿಧಿವಶ

ಗಾಂಧಿನಗರ, ಮೇ 29: ಖ್ಯಾತ ಜ್ಯೋತಿಷಿ ಬೆಜಾನ್ ದಾರುವಾಲ ಅವರು ಗಾಂಧಿನಗರದ ನಿವಾಸದಲ್ಲಿ ಶುಕ್ರವಾರದಂದು ನಿಧನರಾಗಿದ್ದಾರೆ.

ವಯೋ ಸಹಜ ಕಾಯಿಲೆಯಿಂದ ಅಸ್ವಸ್ಥರಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆ ಕೊನೆಯುಸಿರೆಳೆದಿದ್ದಾರೆ. 90 ವರ್ಷ ವಯಸ್ಸಿನ ದಾರುವಾಲ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಕಳೆದ ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಳಿಜ್ವರ, ಉಸಿರಾಟದ ತೊಂದರೆ ಉಲ್ಬಣವಾಗಿತ್ತು, ಆಮ್ಲಜನಕ ಪ್ರಮಾಣ ಕುಸಿತ ಕಂಡಿತ್ತು. ಕೊನೆ ಕ್ಷಣದಲ್ಲಿ ವೆಂಟಿಲೇಟರ್ ವ್ಯವಸ್ಥೆ ಮೂಲಕ ಉಸಿರಾಟ ನಡೆಸಿದ್ದರು ಎಂದು ಅವರ ಪುತ್ರ ತಿಳಿಸಿದ್ದಾರೆ.

ದಾರುವಾಲ ಅವರ ನಿಧನಕ್ಕೆ ಕೊವಿಡ್ 19 ಸೋಂಕು ಕಾರಣ ಎಂಬ ವರದಿಗಳಿದ್ದರೂ ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ ಹಲವಾರು ಗಣ್ಯರು ಗಣಪತಿ ಉಪಾಸಕ, ವಿಶ್ವಖ್ಯಾತಿ ಜ್ಯೋತಿಷಿ ದಾರುವಾಲ ಅವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

Noted astrologer Bejan Daruwalla dies at 90 in Gujarats Gandhi Nagar

ಪ್ರಧಾನಿಗಳ ಚುನಾವಣೆ ಜಯ ಭವಿಷ್ಯ
ಆಟಲ್ ಬಿಹಾರಿ ವಾಜಪೇಯಿ, ಮೊರಾರ್ಜಿ ದೇಸಾಯಿ, ನರೇಂದ್ರ ಮೋದಿ ಸೇರಿದಂತೆ ಹಲವು ಪ್ರಧಾನಿ ಅಭ್ಯರ್ಥಿಗಳ ಚುನಾವಣೆ ಫಲಿತಾಂಶದ ಬಗ್ಗೆ ನಿಖರವಾಗಿ ಭವಿಷ್ಯ ನುಡಿದಿದ್ದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಅಕಾಲಿಕ ಮರಣ, ಸಂಜಯ್ ಗಾಂಧಿ ಅವರ ಅಪಘಾತ, ಭೋಪಾಲ್ ಅನಿಲ ದುರಂತದ ಬಗ್ಗೆ ಕೂಡಾ ಭವಿಷ್ಯ ತಿಳಿಸಿದ್ದರು.

1931ರಲ್ಲಿ ಜನಿಸಿದ ದಾರುವಾಲ ಅವರು ವೇದಿಕ್ ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಹಸ್ತ ಸಾಮುದ್ರಿಕಾ, ಐ ಚಿಂಗ್, ಟಾರೋ, ಕಬಲಾ, ಪಾಶ್ಚಿಮಾತ್ಯ ಜ್ಯೋತಿಷ್ಯ ಪದ್ಧತಿಗಳನ್ನು ಅಭ್ಯಸಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+