ದಲಿತ ಯುವತಿಯ ಅಪಹರಿಸಿ, ಅತ್ಯಾಚಾರ ಮಾಡಿ, ಕೊಂದು, ನೇಣು ಬಿಗಿದರು

Recommended Video

      ಸರಿಯಾಗಿ ಕೇಳಿ, ಯೋಗಿ ಆದಿತ್ಯನಾಥ ಭಜರಂಗಿಯನ್ನು 'ದಲಿತ' ಅಂದಿಲ್ಲ! | Oneindia Kannada

      ಅಹ್ಮದಾಬಾದ್, ಜನವರಿ 10: ಗಾಂಧಿ ನಾಡು ಗುಜರಾತ್‌ ನಲ್ಲಿ ದಲಿತರ ಮೇಲಿನ ದೌರ್ಜನ್ಯಕ್ಕೆ ಕೊನೆಯೇ ಇಲ್ಲದಂತಾಗಿದೆ. 19 ವರ್ಷ ವಯಸ್ಸಿನ ದಲಿತ ಯುವತಿಯ ಮೇಲೆ ಅತ್ಯಾಚಾರ ಮಾಡಿ ಕೊಂದು ಹಾಕಿದ್ದಾರೆ ದುರುಳರು.

      ಗುಜರಾತ್‌ನ ಅರಾವಳಿ ಜಿಲ್ಲೆಯ ಮದೋಸಾ ತಾಲ್ಲೂಕಿನ ಹಳ್ಳಿಯೊಂದರಲ್ಲಿ ದಲಿತ ಯುವತಿಯ ಶವ ಮರದ ಕೊಂಬೆಯಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಜನವರಿ 05 ರಂದು ಪತ್ತೆಯಾಗಿದೆ. ಅದೇ ಯುವತಿ ನಾಲ್ಕು ದಿನಗಳ ಹಿಂದೆ ನಾಪತ್ತೆ ಆಗಿದ್ದಳು.

      ನಾಲ್ಕು ದಿನದ ಹಿಂದೆ ಯುವತಿಯ ಪೋಷಕರು ದೂರು ನೀಡಲು ಹೋದಾಗ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ನಂತರ ದಲಿತ ಸಂಘಟನೆಗಳು ಪ್ರತಿಭಟನೆ ಮಾಡಿದ ನಂತರ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯ ಮೇಲೆ ಅಪಹರಣ, ಅತ್ಯಾಚಾರ, ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

      Gujrat: Dalit Girl Gang Raped And Murdered

      ಯುವತಿಯನ್ನು ಅಪಹರಿಸಿರುವ ಕಿರಾತಕರು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದು, ಆಕೆಯ ಶವವನ್ನು ಮರವೊಂದನ್ನು ನೇಣು ಹಾಕಿದ್ದಾರೆ. ಯುವತಿಯ ಶವ ದೊರೆತ ಮೇಲೆ ಪೊಲೀಸರ ನಿರ್ಲಕ್ಷ್ಯತನದ ಬಗ್ಗೆ ಪ್ರತಿಭಟನೆ ಹೆಚ್ಚಾಗಿದ್ದು, ಅಹ್ಮದಾಬಾದ್ ಆಸ್ಪತ್ರೆಯಲ್ಲಿ ಶವಪರೀಕ್ಷೆಗೂ ಬಿಡದೆ ಪ್ರತಿಭಟನೆಗಳು ಮಾಡಲಾಗಿವೆ.

      'ನಾವು ಸೂಚಿಸಿದ ವೈದ್ಯರೇ ಯುವತಿಯ ಮರಣೋತ್ತರ ಪರೀಕ್ಷೆ ಮಾಡಬೇಕು, ನಮಗೆ ಪೊಲೀಸರ ಮೇಲೆ ನಂಬಿಕೆ ಇಲ್ಲ' ಎಂದು ಯುವತಿಯ ಸಂಬಂಧಿ ಹೇಳಿದ್ದಾರೆ. ಪ್ರತಿಭಟನೆಗಳ ಬಳಿಕ ಬುಧವಾರ ಯುವತಿಯ ಮರಣೋತ್ತರ ಪರೀಕ್ಷೆ ಮುಗಿದಿದೆ ಆದರೆ ಮರಣೋತ್ತರ ಪರೀಕ್ಷೆಯ ವರದಿ ಈ ವರೆಗೆ ನೀಡಿಲ್ಲ. ಇದು ಸಹ ಆಕ್ರೋಶಕ್ಕೆ ಕಾರಣವಾಗಿದೆ.

      ದಲಿತ ಯುವತಿಯ ಅತ್ಯಾಚಾರ, ಕೊಲೆ ವಿರೋಧಿಸಿ ಟ್ವಿಟ್ಟರ್‌ ನಲ್ಲಿ ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದ್ದು, ಯುವತಿಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+