ಹುಡುಗಿಯರ ಋತುಪರೀಕ್ಷೆ; ಕಾಲೇಜಿನ ಸಿಬ್ಬಂದಿ ಬಂಧನ
ಅಹಮದಾಬಾದ್, ಫೆಬ್ರವರಿ 18: ದೇಶಾದ್ಯಂತ ತೀವ್ರ ವಿರೋಧಕ್ಕೆ ಕಾರಣವಾಗಿದ್ದ ಗುಜರಾತ್‌ನ ಭುಜ್ ನಗರದ ಶ್ರೀಶಹಜಾನಂದ ಬಾಲಕಿಯರ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿಯರ ಉಡುಪು ತೆಗೆಯಿಸಿ ಋತುಸ್ರಾವ ಪರೀಕ್ಷಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಕಾಲೇಜಿನ ಪ್ರಾಚಾರ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಒಂದು ವಾರದ ಹಿಂದೆ ಕಾಲೇಜಿನಲ್ಲಿ 60 ವಿದ್ಯಾರ್ಥಿನಿಯರಿಗೆ, ಅವರು ಋತುಸ್ರಾವಕ್ಕೆ ಒಳಗಾಗಿದ್ದಾರೆಯೇ ಎಂಬುದನ್ನು ತಿಳಿಯಲು ಬಲವಂತವಾಗಿ ಅವರ ಉಡುಪು ತೆಗೆಸಿ ಪರಿಶೀಲಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಪೊಲೀಸರು ಸೋಮವಾರ ಸಂಜೆ ಪ್ರಾಚಾರ್ಯೆ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ಟ್ರಂಪ್ ಗುಜರಾತ್ ಭೇಟಿ; ಸ್ಲಂ ಕಾಣದಂತೆ ಗೋಡೆ ನಿರ್ಮಾಣ
ಪ್ರಾಚಾರ್ಯೆ ರಿತಾ ರಾಣಿಂಗಾ, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ರಾಮಿಲಿಬೆನ್ ಹಿರಾಣಿ, ಗುಮಾಸ್ತರಾದ ನೈನಾ ಗೊರಸಿಯ ಮತ್ತು ಅನಿತಾ ಚೌಹಾಣ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಐಪಿಸಿ ಕಾಯ್ದೆಯನ್ವಯ ಸುಲಿಗೆ, ಅಗೌರವ, ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ.













Click it and Unblock the Notifications