ಗುಜರಾತ್ : ಜಸ್‌ಧನ್ ಕ್ಷೇತ್ರದ ಉಪ ಚುನಾವಣೆ, ಬಿಜೆಪಿ ಮುನ್ನಡೆ
ಅಹಮದಾಬಾದ್, ಡಿಸೆಂಬರ್ 23 : ಗುಜರಾತ್ ರಾಜ್ಯದ ಜಸ್‌ಧನ್ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಭಾನುವಾರ ಪ್ರಕಟವಾಗಲಿದೆ. ಬಿಜೆಪಿಯ ಕುನ್ವರಾಜೀ ಬಾವಾಲಿಯಾ ಅವರು 17000 ಮತಗಳ ಅಂತರಿಂದ ಮುನ್ನಡೆ ಸಾಧಿಸಿದ್ದಾರೆ.
2017ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಜಯಗಳಿಸಿದ್ದ ಕುನ್ವರಾಜೀ ಬಾವಾಲಿಯಾ ಅವರು ಬಿಜೆಪಿ ಸೇರಿದ್ದಾರೆ. ಉಪ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್‌ನಿಂದ ಅವಸಾರ್ ನಖೀಯಾ ಕಣದಲ್ಲಿದ್ದಾರೆ.
ಕುನ್ವರಾಜೀ ಬಾವಾಲಿಯಾ ಜಸ್‌ಧನ್ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದು, ಈ ಬಾರಿಯು ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಆದರೆ, ಕಾಂಗ್ರೆಸ್ ಈ ಬಾರಿ ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳುವ ಉತ್ಸಾಹದಲ್ಲಿದೆ.

ಕುನ್ವರಾಜೀ ಬಾವಾಲಿಯಾ ಜಸ್‌ಧನ್ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದು, ಈ ಬಾರಿಯು ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಆದರೆ, ಕಾಂಗ್ರೆಸ್ ಈ ಬಾರಿ ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳುವ ಉತ್ಸಾಹದಲ್ಲಿದೆ.
ಕುನ್ವರಾಜೀ ಬಾವಾಲಿಯಾ ಮತ್ತು ಅವಸಾರ್ ನಖೀಯಾ ಹೊರತು ಪಡಿಸಿ 6 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಕುನ್ವರಾಜೀ ಬಾವಾಲಿಯಾ ಅವರು ಕ್ಷೇತ್ರದಲ್ಲಿ 1995, 1998, 2002, 20017ರಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಜಯಗಳಿಸಿದ್ದಾರೆ.
2017ರ ಚುನಾವಣೆಯಲ್ಲಿ ಬಿಜೆಪಿ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ಎದುರಿಸಿತ್ತು, ಕಾಂಗ್ರೆಸ್‌ಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ 79 ಸ್ಥಾನಗಳಲ್ಲಿ ಜಯಗಳಿಸಿತ್ತು.

Click it and Unblock the Notifications