ಗುಜರಾತ್‌ನ ಬಿಜೆಪಿ ಸಂಸದ ಅಭಯ್ ಭಾರದ್ವಾಜ್ ಕೊರೊನಾ ಸೋಂಕಿಗೆ ಬಲಿ

ಗಾಂಧಿನಗರ, ಡಿಸೆಂಬರ್ 1: ಗುಜರಾತ್ ಬಿಜೆಪಿ ಸಂಸದ ಅಭಯ್ ಭಾರದ್ವಾಜ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಕೋವಿಡ್‍-19 ಸಂಬಂಧಿಸಿದ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು, ಅಕ್ಟೋಬರ್ 9ರಿಂದ ನ್ಯೂಮಿನಿಯಾಗೆ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಸಂಜೆ 4.35ಕ್ಕೆ ಅವರು ಮೃತಪಟ್ಟಿದ್ದಾರೆ. 66 ವರ್ಷದ ಅಭಯ್ ಭಾರದ್ವಾಜ್ ವಕೀಲರೂ ಕೂಡ ಆಗಿದ್ದು ಇದೇ ಜೂನ್ ತಿಂಗಳಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು.

ಪಕ್ಷದ ಸಭೆಗಳು ಮತ್ತು ರಾಜ್‌ಕೋಟ್‌ನಲ್ಲಿ ನಡೆದ ರೋಡ್ ಶೋಗೆ ಹಾಜರಾದ ನಂತರ ಆಗಸ್ಟ್ 31 ರಂದು ಅವರಿಗೆ ಕೊರೊನಾವೈರಸ್‌ ಸೋಂಕು ದೃಢಪಟ್ಟಿತ್ತು.

Gujarat BJP MP Abhay Bharadwaj Dies After 3 Month Long Battle With Covid

ಸಂಸದ ಅಭಯ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಗುಜರಾತ್‌ನ ರಾಜ್ಯಸಭಾ ಸಂಸದರಾದ ಅಭಯ್ ಭಾರದ್ವಾಜ್ ಜಿ ಅವರು ವಿಶೇಷ ವಕೀಲರಾಗಿದ್ದರು ಮತ್ತು ಸಮಾಜ ಸೇವೆ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು.

ರಾಷ್ಟ್ರೀಯ ಅಭಿವೃದ್ಧಿಯ ಬಗ್ಗೆ ಉತ್ಸಾಹ ಹೊಂದಿರುವ ಪ್ರಕಾಶಮಾನವಾದ ಮತ್ತು ಒಳನೋಟವುಳ್ಳ ಮನಸ್ಸನ್ನು ನಾವು ಕಳೆದುಕೊಂಡಿರುವುದು ವಿಷಾದಕರ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+