Fact Check: ನೀತಾ ಅಂಬಾನಿ ವೈಭವ್ ಸೂರ್ಯವಂಶಿಗೆ ಮುಂಬೈ ಇಂಡಿಯನ್ಸ್‌ಗೆ ಬರುವಂತೆ ₹30,00,00,000 ಆಫರ್? ಇಲ್ಲಿದೆ ಅಸಲಿ ಸತ್ಯ

Fact Check: ಐಪಿಎಲ್‌ 2026ರಲ್ಲಿ ರಾಜಸ್ಥಾನ್ ರಾಯಲ್ಸ್‌ ತಂಡವು ಕ್ವಾಲಿಫೈಯರ್ 2 ಹಂತಕ್ಕೆ ಬರಲು 15 ವರ್ಷದ ವೈಭವ್ ಸೂರ್ಯವಂಶಿ ಅವರ ಆಕ್ರಮಣಕಾರಿ ಆಟ ಪ್ರಮುಖ ಪಾತ್ರವಹಿಸಿದೆ. ಶುಕ್ರವಾರ (ಮೇ 29) ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಆರ್‌ಆರ್‌ ಹಾಗೂ ಜಿಟಿ ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಪ್ರಚಂಡ ಪುಟಾಣಿ, ವಂಡರ್ ಕಿಡ್‌, ಯೂನಿವರ್ಸ್ ಬೇಬಿ ಬಾಸ್ ಅಂತಲೇ ಪ್ರಸಿದ್ಧಿ ಪಡೆದಿರುವ ವೈಭವ್‌ಗೆ ಮುಂಬೈ ಇಂಡಿಯನ್ಸ್‌ ಮಾಲಕಿ ನೀತಾ ಅಂಬಾನಿ ಅವರು ಬರೋಬ್ಬರಿ 30 ಕೋಟಿ ರೂಪಾಯಿ ಆಫರ್ ಮಾಡಿದ್ದಾರೆ ಎನ್ನುವ ವದಂತಿಯೊಂದು ಹರಿದಾಡುತ್ತಿದೆ. ಅಸಲಿ ಸತ್ಯ ಏನೆಂಬುದನ್ನು ಇಲ್ಲಿ ತಿಳಿಯಿರಿ.

ಮುಂಬೈ ಇಂಡಿಯನ್ಸ್ ಮಾಲಕಿಯಾದ ನೀತಾ ಅಂಬಾನಿ ಅವರು ರಾಜಸ್ಥಾನ್ ರಾಯಲ್ಸ್ ತಂಡದ ಅದ್ಭುತ ಪ್ರತಿಭೆ, ಯುವ ಆಟಗಾರ ವೈಭವ್ ಸೂರ್ಯವಂಶಿ ಅವರಿಗೆ 30 ಕೋಟಿ ರೂಪಾಯಿ ಆಫರ್ ನೀಡಿದ್ದಾರೆ ಎಂಬ ಗಾಸಿಪ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದು ಸತ್ಯಕ್ಕೆ ದೂರವಾದುದು ಅಥವಾ ಸುಳ್ಳು ಸುದ್ದಿ ಎನ್ನುವ ಮಾಹಿತಿ ಲಭ್ಯವಾಗಿದೆ.

Nita Ambani Offered 30 Crore to Vaibhav Sooryavanshi Lalit Modi Reacts to Viral IPL 2026 Rumours

ಲಲಿತ್ ಮೋದಿ ಹೇಳಿದ್ದೇನು?

ಐಪಿಎಲ್ ಮಾಜಿ ಕಮಿಷನರ್ ಲಲಿತ್ ಮೋದಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಇಂತಹ ಯಾವುದೇ ಆಫರ್ ನೀಡಲು ಐಪಿಎಲ್ ನಿಯಮಗಳಲ್ಲಿ ಅವಕಾಶವಿಲ್ಲ ಮತ್ತು ಇದು ಕೇವಲ ವದಂತಿ ಎಂದು ಸ್ಪಷ್ಟನೆ ನೀಡಿದ್ದಾರೆ. ಐಪಿಎಲ್ ನಿಯಮದ ಪ್ರಕಾರ, ಒಬ್ಬ ಆಟಗಾರ ಒಂದು ತಂಡದಿಂದ ಇನ್ನೊಂದು ತಂಡಕ್ಕೆ ಹೋಗಬೇಕೆಂದರೆ ಅಧಿಕೃತ ಟ್ರೇಡಿಂಗ್ ವಿಂಡೋ ಮೂಲಕ ಅಥವಾ ಹರಾಜಿನ ಮೂಲಕ ಮಾತ್ರ ಸಾಧ್ಯ.

ರಾಜಸ್ಥಾನ್ ಪರ ಆಡುತ್ತಿರುವ ವೈಭವ್

ವೈಭವ್ ಸೂರ್ಯವಂಶಿ ಸದ್ಯಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದಾರೆ. ಅವರನ್ನು 2025ರ ಹರಾಜಿನಲ್ಲಿ ಆರ್‌ಆರ್‌ ತಂಡವು 1.10 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. 2026ರ ಸೀಸನ್‌ನಲ್ಲಿ ಅವರು ಅದ್ಭುತ ಪ್ರದರ್ಶನ ನೀಡುತ್ತಿರುವುದು ನಿಜ. ಆದರೆ ಮುಂಬೈ ಇಂಡಿಯನ್ಸ್ ಸೇರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ವೈರಲ್ ಪೋಸ್ಟ್‌ ಕಂಡು ಬೆರಗಾದ ಅಭಿಮಾನಿಗಳು

ಐಪಿಎಲ್ 2026ರಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಸದ್ಯ ಕ್ರಿಕೆಟ್ ಜಗತ್ತಿನ ಕೇಂದ್ರಬಿಂದುವಾಗಿದ್ದಾರೆ. ಮೈದಾನದಲ್ಲಿ ಅವರು ದಾಖಲೆಗಳನ್ನು ಬರೆಯುತ್ತಿದ್ದರೆ, ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ವದಂತಿಗಳ ಅಲೆ ಎದ್ದಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲು ವೈರಲ್ ಆಗುತ್ತಿರುವ ಒಂದು ಪೋಸ್ಟ್ ಕ್ರಿಕೆಟ್ ಅಭಿಮಾನಿಗಳನ್ನು ಬೆರಗಾಗಿಸಿದೆ.

ಸುಳ್ಳು ಸುದ್ದಿ ವಿರುದ್ಧ ಲಲಿತ್ ಮೋದಿ ಆಕ್ರೋಶ

ಮುಂಬೈ ಇಂಡಿಯನ್ಸ್ ಮಾಲೀಕರಾದ ನೀತಾ ಅಂಬಾನಿ ಅವರು ವೈಭವ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಬೃಹತ್ ಪ್ರಮಾಣದ ಹಣ ಸುರಿದಿದ್ದಾರೆ ಎನ್ನುವ ವದಂತಿ ಹಬ್ಬಿದೆ. ಈ ವೈರಲ್ ಪೋಸ್ಟ್ ಭಾರಿ ಚರ್ಚೆಗೆ ಕಾರಣವಾಗುತ್ತಿದ್ದಂತೆ ಐಪಿಎಲ್ ಮಾಜಿ ಕಮಿಷನರ್ ಲಲಿತ್ ಮೋದಿ ಅವರೇ ಸ್ವತಃ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡುವವರನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಐಪಿಎಲ್‌ನ ಕಠಿಣ ನಿಯಮಗಳನ್ನು ನೆನಪಿಸುವ ಮೂಲಕ ಇಂತಹ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.

ವೈರಲ್‌ ಪೋಸ್ಟ್‌ನಲ್ಲಿ ಏನಿದೆ?

ಮುಂಬೈ ಇಂಡಿಯನ್ಸ್ ಮಾಲಕಿ ನೀತಾ ಅಂಬಾನಿ ಅವರು ವೈಭವ್ ಸೂರ್ಯವಂಶಿ ತಮ್ಮ ತಂಡದ ಪರ ಆಡಲು 30 ಕೋಟಿ ರೂಪಾಯಿಗಳ ಆಫರ್ ನೀಡಿದ್ದಾರೆ ಎಂದು ಈ ಪೋಸ್ಟರ್‌ನಲ್ಲಿ ತಿಳಿಸಲಾಗಿದೆ. ಮುಕೇಶ್ ಅಂಬಾನಿ ಅವರ ಐಷಾರಾಮಿ ನಿವಾಸ ಆಂಟಿಲಿಯಾದಲ್ಲಿ ಒಂದು ಫ್ಲಾಟ್ ಮತ್ತು ಮಾಲ್ಡೀವ್ಸ್‌ನಲ್ಲಿ ಒಂದು ಖಾಸಗಿ ದ್ವೀಪವನ್ನು ನೀಡುವ ಭರವಸೆ ನೀಡಲಾಗಿದೆ. ಅಷ್ಟೇ ಅಲ್ಲದೆ ವೈಭವ್ ಅವರನ್ನು ಮುಂಬೈ ತಂಡಕ್ಕೆ ವರ್ಗಾಯಿಸಲು ಅವರ ಪೋಷಕರಿಗೆ ಬ್ಲ್ಯಾಂಕ್ ಚೆಕ್ ನೀಡಲಾಗಿದೆ ಮತ್ತು ಈ ಬಗ್ಗೆ ನಿರ್ಧರಿಸಲು ವೈಭವ್ ಕಾಲಾವಕಾಶ ಕೇಳಿದ್ದಾರೆ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಈ ನಿರ್ಧಾರಕ್ಕೆ ರಾಜಸ್ಥಾನ್ ರಾಯಲ್ಸ್ ಮಾಲೀಕರು ಅಡ್ಡಿಪಡಿಸುತ್ತಿದೆ. ಆದರೆ ಅಂತಿಮ ತೀರ್ಮಾನ ವೈಭವ್ ಅವರ ಕೈಯಲ್ಲೇ ಇದೆ ಅಂತೆಲ್ಲಾ ಈ ವೈರಲ್ ಪೋಸ್ಟ್‌ನಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ. ಆದರೆ ಸ್ವತಃ ಈ ಬಗ್ಗೆ ಲಲಿತ್ ಮೋದಿ ಅವರೇ ಸ್ಪಷ್ಟನೆ ನೀಡಿದ್ದು, ಇದು ಸುಳ್ಳು ಸುದ್ದಿ. ಈ ರೀತಿಯ ನಿಯಮ ಐಪಿಎಲ್‌ನಲ್ಲಿ ಇಲ್ಲ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+