World Menstrual Hygiene Day: ಬೇಸಿಗೆಯಲ್ಲಿ ಪೀರಿಯೆಡ್ಸ್ ವೇಳೆ ಅಧಿಕ ರಕ್ತಸ್ರಾವವಾಗಲು 5 ಪ್ರಮುಖ ಕಾರಣಗಳು!
ಬೇಸಿಗೆಯ ಹವಾಮಾನವು ದೇಹದ ಮೇಲೆ ಹಲವು ವಿಧಗಳಲ್ಲಿ ಪರಿಣಾಮ ಬೀರುತ್ತದೆ. ತೀವ್ರವಾದ ಸೂರ್ಯನ ಬೆಳಕು ಮತ್ತು ಹೆಚ್ಚಿನ ತಾಪಮಾನದಿಂದಾಗಿ, ನಿರ್ಜಲೀಕರಣ, ಆಯಾಸ, ಜ್ವರ ಮತ್ತು ಮೈ ಕೈ ನೋವು ಮುಂತಾದ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ತಾಪಮಾನ ಹೆಚ್ಚಾದಾಗ ಹುಡುಗಿಯರು ಮತ್ತು ಮಹಿಳೆಯರ ದೇಹದಲ್ಲಿ ವಿವಿಧ ಹಾರ್ಮೋನುಗಳ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಈ ಹಾರ್ಮೋನುಗಳ ಬದಲಾವಣೆಗಳು ಬೇಸಿಗೆಯಲ್ಲಿ ಮುಟ್ಟಿನ ರಕ್ತಸ್ರಾವವನ್ನು ಹೆಚ್ಚಿಸುತ್ತದೆ. ಪೀರಿಯೆಡ್ಸ್ ವೇಳೆ ಅಧಿಕ ರಕ್ತಸ್ರಾವವಾದಾಗ ಅದು ಆತಂಕವನ್ನು ಉಂಟುಮಾಡುತ್ತದೆ.ಬೇಸಿಗೆಯಲ್ಲಿ ಮುಟ್ಟಾದಾಗ ಅಧಿಕ ರಕ್ತಸ್ತ್ರಾವವಾಗುವುದರ ಹಿಂದೆ ಅನೇಕ ಕಾರಣಗಳಿವೆ.
ಬೇಸಿಗೆಯಲ್ಲಿ ಭಾರೀ ಋತುಚಕ್ರಕ್ಕೆ ಮುಖ್ಯ ಕಾರಣಗಳು:
1. ನಿರ್ಜಲೀಕರಣ:
ಬೇಸಿಗೆಯಲ್ಲಿ, ಎಲ್ಲರಿಗೂ ಅತಿಯಾಗಿ ಬೆವರುತ್ತದೆ. ಹೀಗಾದಾಗ ದೇಹವು ಬೆವರಿನ ಮೂಲಕ ಹೆಚ್ಚಿನ ನೀರನ್ನು ಕಳೆದುಕೊಳ್ಳುತ್ತದೆ. ಇದು ರಕ್ತವನ್ನು ದಪ್ಪವಾಗಿಸುತ್ತದೆ ಮತ್ತು ದೇಹದ ಸಮತೋಲನಕ್ಕೆ ಅಡ್ಡಿಪಡಿಸುತ್ತದೆ. ನಿರ್ಜಲೀಕರಣವು ಹೆಚ್ಚಿನ ಹಾರ್ಮೋನುಗಳ ಬದಲಾವಣೆಗಳಿಗೆ ಕಾರಣವಾಗುತ್ತದೆ. ಇದು ಭಾರೀ ಮುಟ್ಟಿನ ರಕ್ತಸ್ರಾವಕ್ಕೆ ಕಾರಣವಾಗಬಹುದು.ಬೇಸಿಗೆಯಲ್ಲಿ ಕಡಿಮೆ ನೀರು ಕುಡಿಯುವುದು ಕೂಡಾ ಹೆವೀ ಬ್ಲೀಡಿಂಗ್ ಕಾರಣ ಎನ್ನಲಾಗಿದೆ.

2. ರಕ್ತ ಪರಿಚಲನೆಯಲ್ಲಿ ಬದಲಾವಣೆಗಳು:
ಬೇಸಿಗೆಯಲ್ಲಿ ಹೆಚ್ಚಾಗುವ ಉಷ್ಣತೆಯು ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.ಇದು ಗರ್ಭಾಶಯಕ್ಕೆ ಕೂಡಾ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಮುಟ್ಟಿನ ಸಮಯದಲ್ಲಿ ಭಾರೀ ರಕ್ತಸ್ರಾವವಾಗುವುದು.
3. ಹಾರ್ಮೋನುಗಳ ಅಸಮತೋಲನ:
ಹೆಚ್ಚಿನ ತಾಪಮಾನವು ದೇಹದಲ್ಲಿ ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡುತ್ತದೆ. ಇದು ವಿಶೇಷವಾಗಿ ಬೇಸಿಗೆಯಲ್ಲಿ, ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮೇಲೆ ಪರಿಣಾಮ ಬೀರುತ್ತದೆ. ಇದು ಅನಿಯಮಿತ ಮುಟ್ಟು ಅಥವಾ ಭಾರೀ ರಕ್ತಸ್ರಾವಕ್ಕೆ ಕಾರಣವಾಗುತ್ತದೆ.
4. ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಗಳು:
ಬೇಸಿಗೆಯಲ್ಲಿ ಅನೇಕರು ತಮ್ಮ ದೇಹವನ್ನು ತಂಪಾಗಿಸಲು ಪ್ಯಾಕ್ ಮಾಡಿದ ಜ್ಯೂಸ್‌ಗಳನ್ನು ಕುಡಿಯುತ್ತಾರೆ. ಇದು ನಾಲಗೆಗೆ ರುಚಿ ನೀಡಬಹುದು ಅಥವಾ ಒಂದು ಸಲಕ್ಕೆ ದೇಹವನ್ನು ತಣ್ಣಗಾಗಿಸಬಹುದು. ಆದರೆ, ಈ ಆಹಾರಗಳಲ್ಲಿ ಪೌಷ್ಟಿಕಾಂಶ ಕಡಿಮೆ ಇರುತ್ತದೆ. ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆಯಿದ್ದರೆ, ದೇಹದಲ್ಲಿಯೂ ಅದರ ಕೊರತೆ ಉಂಟಾಗುತ್ತದೆ ಎಂಬುದು ಸ್ಪಷ್ಟ.ಇದು ಮುಟ್ಟಿನ ರಕ್ತಸ್ರಾವವನ್ನು ಹೆಚ್ಚಿಸಲು ಕಾರಣವಾಗಬಹುದು.
5. ಥೈರಾಯ್ಡ್ ಅಥವಾ ಇತರ ಆರೋಗ್ಯ ಪರಿಸ್ಥಿತಿಗಳು:
ಕೆಲವು ಸಂದರ್ಭಗಳಲ್ಲಿ, ಭಾರೀ ಋತುಚಕ್ರವು ಹವಾಮಾನದ ಕಾರಣದಿಂದಾಗಿರದೆ, ಥೈರಾಯ್ಡ್, ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಅಥವಾ ಗರ್ಭಾಶಯದ ಫೈಬ್ರಾಯ್ಡ್‌ಗಳಿಂದಲೂ ಉಂಟಾಗಬಹುದು.
ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವವಾಗುತ್ತದೆ ಎಂದು ಅರ್ಥಮಾಡಿಕೊಳ್ಳುವುದು ಹೇಗೆ? :
* ಪ್ರತಿ 1 ರಿಂದ 2 ಗಂಟೆಗಳಿಗೊಮ್ಮೆ ಪ್ಯಾಡ್‌ಗಳನ್ನು ಬದಲಾಯಿಸಬೇಕಾಗಬಹುದು.
* ಮುಟ್ಟಿನ ಹರಿವು 5 ದಿನಗಳಿಗಿಂತ ಹೆಚ್ಚು ಇರುತ್ತದೆ.
* ಋತುಚಕ್ರದ ಸಮಯದಲ್ಲಿ ಕಾಡುವ ದೌರ್ಬಲ್ಯ.
* ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ .
ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವವನ್ನು ಎಂದಿಗೂ ಹಗುರವಾಗಿ ಪರಿಗಣಿಸಬಾರದು.ಈ ಬಗ್ಗೆ ವೈದ್ಯರೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications