ಗಜಲಕ್ಷ್ಮೀ ರಾಜಯೋಗದಿಂದ ನಾಲ್ಕು ರಾಶಿಯವರಿಗೆ ಹೆಚ್ಚುವುದು ಧನ ಸಂಪತ್ತು, ಸಾಲದಿಂದ ಸಿಗುವುದು ಮುಕ್ತಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು ಸಮೃದ್ಧಿ, ಜ್ಞಾನ, ಖ್ಯಾತಿ ಮತ್ತು ಸಂತೋಷಕ್ಕೆ ಕಾರಣವಾಗುವ ಗ್ರಹ. ಗುರು ಗ್ರಹವನ್ನು ಸಂಪತ್ತು ಮತ್ತು ಖ್ಯಾತಿಯ ಅಧಿಪತಿ ಎಂದೂ ಕರೆಯಲಾಗುತ್ತದೆ. ಶುಕ್ರನು ಮೇ 14 ರಂದು ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ. ಗುರು ಕೂಡಾ ಇದೇ ರಾಶಿಯಲ್ಲಿ ಇರುವುದರಿಂದ ಗುರು-ಶುಕ್ರರ ಸಂಯೋಗದೊಂದಿಗೆ ಗಜಲಕ್ಷ್ಮೀ ರಾಜಯೋಗವು ರೂಪುಗೊಂಡಿದೆ. ಈ ರಾಜಯೋಗವು ನಾಲ್ಕು ರಾಶಿಯವರ ಅದೃಷ್ಟವನ್ನು ಬದಲಾಯಿಸಲಿದೆ.
ಗಜಲಕ್ಷ್ಮೀ ರಾಜಯೋಗದಿಂದ ಯಾವ ರಾಶಿಯವರಿಗೆ ಶುಭ:

ವೃಷಭ ರಾಶಿ:
ಗಜಲಕ್ಷ್ಮಿ ರಾಜಯೋಗದ ಪರಿಣಾಮವಾಗಿ, ವೃಷಭ ರಾಶಿಯವರಿಗೆ ಒಳ್ಳೆಯ ದಿನಗಳು ಬರಲಿವೆ. ಇದ್ದಕ್ಕಿದ್ದಂತೆ ಹಣ ಸಿಗುತ್ತದೆ. ಸಂಪತ್ತು ಹೆಚ್ಚಾಗುವುದು. ವೃಷಭ ರಾಶಿಯವರ ಆರ್ಥಿಕ ಸ್ಥಿತಿ ಬಹಳಷ್ಟು ಸುಧಾರಿಸಲಿದೆ. ಪ್ರಸ್ತುತ ಇರುವ ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತವೆ. ವೃತ್ತಿಯಲ್ಲಿ ಉತ್ತಮ ಅವಕಾಶ ಉದ್ಭವಿಸುತ್ತದೆ.

ತುಲಾ ರಾಶಿ:
ಗಜಲಕ್ಷ್ಮಿ ರಾಜಯೋಗವು ತುಲಾ ರಾಶಿಯವರಿಗೆ ಉತ್ತಮ ಪ್ರಗತಿಯನ್ನು ಸೂಚಿಸುತ್ತದೆ. ಹೊಸ ಜೀವನವನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಆಸ್ತಿಯಿಂದ ಲಾಭ ಪಡೆಯಲು ಸಾಧ್ಯವಾಗುತ್ತದೆ. ಕೌಟುಂಬಿಕ ವಿವಾದಗಳು ಬಗೆಹರಿಯುತ್ತವೆ. ಈ ಬಾರಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ.

ಧನು ರಾಶಿ:
ಈ ರಾಶಿಯವರಿಗೆ ಗಜಲಕ್ಷ್ಮೀ ರಾಜಯೋಗವು ಉತ್ತಮ ಅವಕಾಶವನ್ನು ಸೃಷ್ಟಿಸಲಿದೆ. ಆದಾಯದಲ್ಲಿ ಭಾರೀ ಹೆಚ್ಚಳವಾಗುತ್ತದೆ. ದೇಶ ಮತ್ತು ವಿದೇಶಗಳಲ್ಲಿ ಒಂದೇ ಮಟ್ಟದಲ್ಲಿ ಪ್ರಗತಿಯನ್ನು ಕಾಣುತ್ತಾರೆ. ಉದ್ಯೋಗ ಮತ್ತು ವ್ಯವಹಾರವು ಒಂದೇ ಮಟ್ಟದಲ್ಲಿ ಸುಧಾರಿಸುತ್ತದೆ. ಸಾಲದಿಂದ ಮುಕ್ತಿ ಸಿಗುವುದು.

ಮೀನ ರಾಶಿ:
ಗಜಲಕ್ಷ್ಮೀ ರಾಜಯೋಗವು ಹೆಚ್ಚಿನ ಸುಧಾರಣೆಯನ್ನು ತರುತ್ತದೆ. ಮನೆ ಮತ್ತು ಕಾರನ್ನು ಖರೀದಿಸುವ ಯೋಗವಿದೆ. ಒಂದೊಂದಾಗಿಯೇ ಅವಕಾಶಗಳು ಒಲಿದು ಬರುವುದು. ಜೀವನವು ಮೊದಲಿಗಿಂತ ಹೆಚ್ಚು ಸುಂದರವಾಗಿರುತ್ತದೆ. ವ್ಯಾಪಾರ ವ್ಯವಹಾರವೂ ಮೊದಲಿಗಿಂತ ಉತ್ತಮವಾಗಿರುತ್ತದೆ. ಹಣಕಾಸಿನ ವಹಿವಾಟುಗಳಲ್ಲಿ ವಿಶೇಷ ಪ್ರಯೋಜನವಾಗುವುದು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications