ಹಳೆ ಲವ್ವರ್ ಮಸಲತ್ತು; ಸ್ಫೋಟವಾಯ್ತು ಮದುವೆ ಮನೆಯಲ್ಲಿ ನೀಡಿದ ಆ ಗಿಫ್ಟು!

ಅಹ್ಮದಾಬಾದ್, ಮೇ 18: ಗುಜರಾತ್‌ನಲ್ಲಿ ಮಾಜಿ ಲವ್ವರ್ ಮಾಡಿರುವ ಮಸಲತ್ತಿಗೆ ನವ ದಂಪತಿಯ ಜೊತೆಗೆ ಆತನ ಅಳಿಯ ಕೂಡ ಆಸ್ಪತ್ರೆ ಸೇರುವಂತಹ ಘಟನೆ ವರದಿಯಾಗಿದೆ. ಈ ವಿಚಿತ್ರ ಘಟನೆಯ ಕುರಿತು ಓದಿದರೆ ಯಾರಿಂದಾದರೂ ಉಡುಗೊರೆ ಸ್ವೀಕರಿಸುವುದಕ್ಕೂ ಮುನ್ನ ಎಂಥವರೂ ಯೋಜಿಸುವಂತಾಗುತ್ತದೆ.

ರಿಚಾರ್ಜ್ ಮಾಡುವ ಸಂದರ್ಭದಲ್ಲಿ ಆಟಿಕೆ ವಸ್ತುವೊಂದು ಸ್ಫೋಟಗೊಂಡು ದಂಪತಿ ಹಾಗೂ ವರನ ಸೋದರಳಿಯ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಆಟಿಕೆಯ ಮೂಲವನ್ನು ಹುಡುಕಿದಾಗ ಅದನ್ನು ನೀಡಿರುವುದು ವಧುವಿನ ಸೋದರಿಯ ಮಾಜಿ ಪ್ರಿಯಕರ ಎನ್ನುವುದು ಬೆಳಕಿಗೆ ಬಂದಿದೆ.

ದಕ್ಷಿಣ ಗುಜರಾತ್‌ನ ನವಸಾರಿ ಜಿಲ್ಲೆಯ ಮಿಂಧಬರಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ. ಸಂತ್ರಸ್ತೆಯ ಕುಟುಂಬದ ಸದಸ್ಯರು ವಂಸ್ಡಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ನವದಂಪತಿಗೆ ಸಂಬಂಧಿಕರಿಂದ ಉಡುಗೊರೆ

ನವದಂಪತಿಗೆ ಸಂಬಂಧಿಕರಿಂದ ಉಡುಗೊರೆ

ಮಿಂಧಬರಿ ಗ್ರಾಮದ ಲತೇಶ್ ಗವಿತ್ ನವಸಾರಿ ಜಿಲ್ಲೆಯ ವಂಸ್ದಾ ತಾಲೂಕಿನ ಗಂಗಾಪುರ ಗ್ರಾಮದ ಹುಡುಗಿಯನ್ನು ವಿವಾಹವಾದರು. ಈ ದಂಪತಿಗಳು ಸಂಬಂಧಿಕರು, ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಂದ ಹಲವಾರು ಉಡುಗೊರೆಗಳನ್ನು ಪಡೆದುಕೊಂಡಿದ್ದರು. ಆದರೆ ಅದೊಬ್ಬ ನೀಡಿದ ಅದೊಂದು ಉಡುಗೊರೆ ಮಾತ್ರ ಎಲ್ಲದ್ದಕ್ಕಿಂತ ಹಾಗೂ ಎಲ್ಲರಿಗಿಂತಲೂ ವಿಶೇಷ, ವಿಭಿನ್ನ ಹಾಗೂ ಅಪಾಯಕಾರಿ ಎನ್ನುವಂತಿತ್ತು.

ಉಡುಗೊರೆ ಪರಿಶೀಲನೆ ವೇಳೆ ಸಿಕ್ಕ ಆಟಿಕೆ ವಸ್ತು

ಉಡುಗೊರೆ ಪರಿಶೀಲನೆ ವೇಳೆ ಸಿಕ್ಕ ಆಟಿಕೆ ವಸ್ತು

ಮದುವೆ ಮನೆಯಲ್ಲಿ ಸ್ವೀಕರಿಸಿದ ಎಲ್ಲ ಉಡುಗೊರೆಯನ್ನು ವರ ಲತೇಶ್ ಮತ್ತು ಅವರ ಸೋದರಳಿಯ ಜಿಯಾನ್ ಪರಿಶೀಲನೆ ಮಾಡುತ್ತಾ ಕುಳಿತಿದ್ದರು. ಈ ಸಂದರ್ಭದಲ್ಲಿ ರಿಜಾರ್ಜ್ ಮಾಡಬಹುದಾದ ಆಟಿಕೆಯ ವಸ್ತುವೊಂದು ಕಣ್ಣಿಗೆ ಬಿತ್ತು. ಉಡುಗೊರೆಯಲ್ಲಿ ಆಟಿಕೆ ಕಂಡು, ಲತೇಶ್ ಮತ್ತು ಜಿಯಾನ್ ಅದನ್ನು ಚಾರ್ಜ್ ಮಾಡಲು ಪ್ರಯತ್ನಿಸಿದರು. ಆದರೆ ಜಾರ್ಜ್ ಮಾಡಲು ಹೋದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿತು. ಇದರ ಪರಿಣಾಮವಾಗಿ ಲತೇಶ್ ಮತ್ತು ಜಿಯಾನ್ ತೀವ್ರವಾಗಿ ಗಾಯಗೊಂಡರು.

ಗಾಯಗೊಂಡವರು ಆಸ್ಪತ್ರೆಗೆ ದಾಖಲು

ಗಾಯಗೊಂಡವರು ಆಸ್ಪತ್ರೆಗೆ ದಾಖಲು

ಉಡುಗೊರೆಯಾಗಿ ಪಡೆದ ಆಟಿಕೆಯ ವಸ್ತು ಸ್ಫೋಟಗೊಂಡ ಹಿನ್ನಲೆ ಲತೇಶ್ ತೋಳುಗಳು, ತಲೆ ಮತ್ತು ಕಣ್ಣುಗಳಿಗೆ ತೀವ್ರ ಗಾಯವಾಗಿದೆ. ಅವರ ಸೋದರಳಿಯ ಜಿಯಾನ್ ತಲೆ ಮತ್ತು ಕಣ್ಣು ಸೇರಿದಂತೆ ದೇಹದಲ್ಲಿ ಅನೇಕ ಕಡೆ ಸುಟ್ಟ ಗಾಯಗಳಾಗಿವೆ. ಸದ್ಯ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಸ್ಫೋಟಗೊಂಡ ಉಡುಗೊರೆ ಹಿಂದೆ ಹಳೆ ಲವ್ವರ್

ಸ್ಫೋಟಗೊಂಡ ಉಡುಗೊರೆ ಹಿಂದೆ ಹಳೆ ಲವ್ವರ್

ನವದಂಪತಿಗೆ ನೀಡಿದ ಚಾರ್ಜಿಂಗ್ ಆಟಿಕೆಯ ಹಿಂದೆ ಹಳೆಯ ಲವ್ವರ್ ಕೈವಾಡ ಇರುವುದಾಗಿ ಪೋಷಕರು ಆರೋಪಿಸಿದ್ದಾರೆ. ಕೊಯಂಬಾ ನಿವಾಸಿ ರಾಜು ಎಂಬಾತ ಈ ಉಡುಗೊರೆಯನ್ನು ನೀಡಿದ್ದಾನೆ. ಇದೇ ರಾಜು ಈ ಹಿಂದೆ ವಧುವಿನ ಅಕ್ಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಹೇಳಲಾಗುತ್ತಿದೆ. ವಧುವಿನ ಅಕ್ಕನ ಜೊತೆಗೆ ರಾಜು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದರು ಎಂದು ವರನ ಪೋಷಕರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+