ಟ್ರಂಪ್‌ಗೆ ಸ್ಲಂ ಕಾಣದಂತೆ ಗೋಡೆ ನಿರ್ಮಾಣ; ಮೇಯರ್ ಹೇಳಿದ್ದೇನು?

Recommended Video

      ಅಹಮದಾಬಾದ್ ನಲ್ಲಿ ಸ್ಲಂ ಗಳನ್ನೂ ಅಡಗಿಸಿದ ಮೋದಿ | Ahmedabad | Modi | Trump | Oneindia Kannada

      ಅಹಮದಾಬಾದ್, ಫೆಬ್ರವರಿ 13 : ಡೋನಾಲ್ಡ್‌ ಟ್ರಂಪ್‌ಗೆ ಸ್ಲಂಗಳು ಕಾಣದಂತೆ ಅಹಮದಾಬಾದ್ ನಗರಸಭೆ ಗೋಡೆಯನ್ನು ನಿರ್ಮಾಣ ಮಾಡುತ್ತಿದೆ. ಆದರೆ, ಮೇಯರ್ "ಈ ಕುರಿತು ನನಗೆ ಏನೂ ತಿಳಿದಿಲ್ಲ" ಎಂದು ಹೇಳಿದ್ದಾರೆ.

      ಅಹಮದಾಬಾದ್ ನಗರಸಭೆ ಸ್ಲಂ ಕಾಣದಂತೆ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ-ಇಂದಿರಾ ಬ್ರಿಡ್ಜ್ ತನಕ ಸಾಗುವ ಮಾರ್ಗದಲ್ಲಿ ಗೋಡೆ ನಿರ್ಮಿಸುತ್ತಿದೆ. ಇದು ಈಗ ಚರ್ಚೆಗೆ ಕಾರಣವಾಗಿದೆ.

      ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ 24 ಮತ್ತು 25ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಅಹಮದಾಬಾದ್‌ಗೆ ಅವರು ಭೇಟಿ ನೀಡಲಿದ್ದು, ವಿಮಾನ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಜೊತೆ ರೋಡ್ ಶೋ ನಡೆಸಲಿದ್ದಾರೆ.

      AMC Building Wall To Mask Slum Mayor Says I Dont Konw

      ರೋಡ್ ಶೋ ವೇಳೆ ಸ್ಲಂ ಕಾಣದಂತೆ ಸುಮಾರು ಅರ್ಧ ಕಿಲೋಮೀಟರ್ ಉದ್ದದ ಗೋಡೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಗಾಂಧಿನಗರ ಮತ್ತು ಅಹಮದಾಬಾದ್ ನಡುವಿನ ಮಾರ್ಗವನ್ನು ಸುಂದರಗೊಳಿಸಲು ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

      ದೇವ್ ಸರನ್ ಎಂದು ಕರೆಯಲಾಗುವ ಸ್ಲಂನಲ್ಲಿ ಸುಮಾರು 500 ಮನೆಗಳಿದ್ದು, 2500 ಜನರು ದಶಕಗಳಿಂದ ವಾಸವಾಗಿದ್ದಾರೆ. ಗೋಡೆ ಕಟ್ಟಿದ ಬಳಿಕ ಸ್ಲಂ ಇರುವ ಭಾಗದಲ್ಲಿ ಕರ್ಜೂರದ ಗಿಡಗಳನ್ನು ಬೆಳೆಸಲು ಸಹ ಯೋಜನೆ ರೂಪಿಸಲಾಗಿದೆ.

      ಅಹಮದಾಬಾದ್ ಮೇಯರ್ ಬಿಜಾಲ್ ಪಟೇಲ್, "ನಾನೇನು ನೋಡಿಲ್ಲ. ಈ ಬಗ್ಗೆ ನನಗೇನೂ ತಿಳಿದಿಲ್ಲ" ಎಂದು ಹೇಳಿದ್ದಾರೆ. ಆದರೆ, ಗೋಡೆ ಕಟ್ಟುತ್ತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+