ರಾಜ್‌ಕೋಟ್‌ ಜೈಲಿನಲ್ಲಿ 23 ಕೈದಿಗಳಿಗೆ ಕೋವಿಡ್ ಸೋಂಕು

ಅಹಮದಾಬಾದ್, ಆಗಸ್ಟ್ 16 : ರಾಜ್‌ಕೋಟ್ ಜೈಲಿನಲ್ಲಿ 23 ಕೈದಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಇದುವರೆಗೂ ಜಿಲ್ಲೆಯಲ್ಲಿ 3173 ಕೋವಿಡ್ ಪ್ರಕರಣಗಳು ದಾಖಲಾಗಿವೆ.

ಗುಜರಾತ್‌ನ ರಾಜ್‌ಕೋಟ್ ಜೈಲಿನಲ್ಲಿರುವ 94 ಕೈದಿಗಳಿಗೆ ರ‍್ಯಾಪಿಡ್‌ ಟೆಸ್ಟ್ ಮಾಡಲಾಗಿತ್ತು. ಈ ವೇಳೆ 23 ಕೈದಿಗಳಿಗೆ ಸೋಂಕು ಇರುವುದು ಖಚಿತವಾಗಿದೆ. ಇವರಲ್ಲಿ ವಿಚಾರಣಾಧೀನ ಕೈದಿಗಳು, ಅಪರಾಧಿಗಳು ಸೇರಿದ್ದಾರೆ.

ರಾಜ್‌ಕೋಟ್ ಜೈಲಿನಲ್ಲಿ 1368 ಕೈದಿಗಳಿದ್ದಾರೆ. ಕೆಲವು ದಿನಗಳ ಹಿಂದೆ 11 ಕೈದಿಗಳಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿತ್ತು. "ಎಲ್ಲಾ ಕೈದಿಗಳನ್ನು ಐಸೊಲೇಷನ್‌ನಲ್ಲಿ ಇಡಲಾಗಿದೆ. ರೋಗ ಲಕ್ಷಣ ಇರುವ ಕೈದಿಗಳನ್ನ ಆಸ್ಪತ್ರೆಗೆ ದಾಖಲಿಸಲಾಗುತ್ತದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.

23 Prisoners Of Rajkot Jail Tested Positive For COVID 19

ಗುಜರಾಜ್ ರಾಜ್ಯದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 77,663. ಸಕ್ರಿಯ ಪ್ರಕರಣಗಳ ಸಂಖ್ಯೆ 14,261. ರಾಜ್‌ಕೋಟ್ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3173.

ಆರೋಗ್ಯ ಇಲಾಖೆ ನೀಡುವ ಮಾಹಿತಿ ಪ್ರಕಾರ ರಾಜ್‌ಕೋಟ್‌ನಲ್ಲಿ ಇದುವರೆಗೂ 65 ಸೋಂಕಿತರು ಮೃತಪಟ್ಟಿದ್ದಾರೆ. 1685 ಜನರು ಗುಣಮುಖರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+