ಗುಜರಾತ್ ನಲ್ಲಿ ಅತ್ಯಾಚಾರ ಎಸಗಿ 12ರ ಬಾಲಕಿ ಶಿರಚ್ಛೇದಿಸಿದ ಸಂಬಂಧಿ

ಅಹ್ಮದಾಬಾದ್, ಅಕ್ಟೋಬರ್.18: ಗುಜರಾತ್ ಬನಸ್ಕಾಂತ್ ಜಿಲ್ಲೆಯಲ್ಲಿ ಮಾನವೀಯ ಸಮಾಜವೇ ತಲೆ ತಗ್ಗಿಸುವಂತಾ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದು, ನಂತರ ಆಕೆ ಶಿರಚ್ಛೇದ ಮಾಡಿರುವ ಬಗ್ಗೆ ವರದಿಯಾಗಿದೆ.
ಬನಸ್ಕಾಂತ್ ಜಿಲ್ಲೆಯ ದೀಸಾ ಪ್ರದೇಶದಲ್ಲಿ ಇಂಥದೊಂದು ಅಮಾನುಷ ಘಟನೆ ನಡೆದಿದೆ. ಶುಕ್ರವಾರ ನಾಪತ್ತೆಯಾಗಿದ್ದ ಬಾಲಕಿ ಮರುದಿನವೇ ಶವವಾಗಿ ಪತ್ತೆಯಾಗಿದ್ದಾಳೆ. ಪೊಲೀಸರು ತನಿಖೆ ಆರಂಭಿಸಿದ್ದು, ಬಾಲಕಿಯ ಕೊಲೆಗೂ ಮೊದಲು ಆಕೆ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ಆ ಫೋಟೊ ಹತ್ರಾಸ್ ಸಂತ್ರಸ್ತೆಯದ್ದಲ್ಲ ನನ್ನ ಪತ್ನಿಯದ್ದು: ಹೈಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ
ಇನ್ನು, ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಸಂಬಂಧಿಕನೇ ಎಂದು ಗುರುತಿಸಲಾದ ಆರೋಪಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಶುಕ್ರವಾರ ಆರೋಪಿಯು ಬಾಲಕಿಯನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.

12-Year-Old Girl Rape And decapitates At Gujarats Banaskantha

ಶನಿವಾರ ಬಾಲಕಿಯ ಮೃತದೇಹ ಪತ್ತೆ:
ಕಳೆದ ಅಕ್ಟೋಬರ್.16ರಂದು ಮನೆಯಿಂದ ನಾಪತ್ತೆಯಾಗಿದ್ದ 12 ವರ್ಷದ ಬಾಲಕಿಯ ಮೃತದೇಹವನ್ನು ದಾಂತೇವಾಡ ತಾಲೂಕಿನ ಮೋತಿ ಭಾಖರ್ ಪ್ರದೇಶದಲ್ಲಿ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಈತ ಬಾಲಕಿಯ ಸಂಬಂಧಿ ಎಂದು ತಿಳಿದು ಬಂದಿದೆ. ಬಾಲಕಿ ಕೊಲೆಗೂ ಮೊದಲು ಅತ್ಯಾಚಾರ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ವರದಿ ಬಂದ ಬಳಿಕ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಡೆಪ್ಯುಟಿ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಕುಶಾಲ್ ಓಜಾ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+