ಆಗ್ರಾದಲ್ಲಿ ಸ್ಪಾ ನಡೆಸುತ್ತಿದ್ದ ಥೈಲೆಂಡ್ ಮಹಿಳೆ ನಿಗೂಢ ಸಾವು
ಆಗ್ರಾ, ಜನವರಿ 16: ಆಗ್ರಾದಲ್ಲಿ ಸ್ಪಾ ನಡೆಸುತ್ತಿದ್ದ ಥೈಲ್ಯಾಂಡ್ ಮಹಿಳೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
42 ವರ್ಷದ ಮಹಿಳೆ ಉತ್ತರ ಪ್ರದೇಶದ ಆಗ್ರಾದಲ್ಲಿ ಸ್ಪಾ ನಡೆಸುತ್ತಿದ್ದರು. ಅವರು ತಂಗಿದ್ದ ಬಾಡಿಗೆ ಮನೆಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಅವರು 2012ರಿಂದ ಅಲ್ಲಿ ಸ್ಪಾ ನಡೆಸುತ್ತಿದ್ದರು.
2004ರಲ್ಲಿ ಹೈದರಾಬಾದಿನಲ್ಲಿ ಅವರ ಮದುವೆಯಾಯಿತು. ಬಳಿಕ ಅವರ ಪತಿ ಕ್ಯಾನ್ಸರ್‌ಗೆ ತುತ್ತಾಗಿ ಪ್ರಾಣ ಬಿಟ್ಟಿದ್ದಾರೆ. ಬಳಿಕ ಅವರು ಇನ್ನೊಂದು ಮದುವೆಯಾಗಿದ್ದರು. 2018ರಲ್ಲಿ ಅವರು ಬೇರೆಯಾಗಿದ್ದರು.

ಮಹಿಳೆ ಯಾರ ಬಳಿಯೂ ಜಗಳವಾಡುತ್ತಿರಲಿಲ್ಲ, ತುಂಬಾ ಆತ್ಮೀಯವಾಗಿ ಮಾತನಾಡುತ್ತಿದ್ದರು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. ಒಂದು ದಿನ ಅವರ ಮನೆಯಿಂದ ದುರ್ವಾಸನೆ ಬರುತ್ತಿತ್ತು. ತಕ್ಷಣ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದರು.
ಪೊಲೀಸರು ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ಆಕೆ ಮಂಚದ ಮೇಲೆ ಮಲಗಿದ್ದ ಸ್ಥಿತಿಯಲ್ಲೇ ಶವವಾಗಿದ್ದಳು. ಹೆಚ್ಚಿನ ಪ್ರಮಾಣದ ನಿದ್ರೆ ಮಾತ್ರೆ ಸೇವಿಸಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಮಹಿಳೆ ಮೃತಪಟ್ಟು ಮೂರು ದಿನಗಳು ಕಳೆದಿವೆ ಎಂದು ತಿಳಿದುಬಂದಿದೆ. ಜೊತೆಗೆ ಡೆತ್‌ನೋಟ್ ಕೂಡ ದೊರೆತಿದ್ದು, 'ನನ್ನ ಸಾವಿಗೆ ಯಾರೂ ಕಾರಣರಲ್ಲ, ನನ್ನ ಅಸ್ತಿಯನ್ನು ಯುನೆಯಲ್ಲಿ ವಿಸರ್ಜನೆ ಮಾಡಿ' ಎಂದು ಬರೆದಿದ್ದಳು.












Click it and Unblock the Notifications