ಚಿಕ್ಕಮಗಳೂರು ಬಾಲಕಿಯರ ರೇಪಿಸ್ಟುಗಳಿಗೆ ಶಿಕ್ಷೆಯಾಯ್ತು

ಜ್ಞಾನಭಾರತಿ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಮೊನ್ನೆಯಷ್ಟೇ 7 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇನ್ನು ಅತ್ತ ದಿಲ್ಲಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ರೇಪ್ ಅಂಡ್ ಮರ್ಡರ್ ಪ್ರಕರಣದಲ್ಲಿ 4 ಮಂದಿ ಆರೋಪಿಗಳಿಗೆ ಇನ್ನೇನು ಗಲ್ಲು ಶಿಕ್ಷೆಯಾಗುವುದು (ಶುಕ್ರವಾರ ತೀರ್ಪು) ಖಚಿತವಾಗಿದೆ. ಹೀಗಿರುವಾಗ...
ಚಿಕ್ಕಮಗಳೂರಿನ ಮೂಡಿಗೆರೆ ಕಾಫಿ ಎಸ್ಟೇಟಿನಲ್ಲಿ ನಡೆದ ಪ್ರಕರಣ ಮತ್ತು ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ (ಟ್ರಾವೆಲರ್ಸ್ ಬಂಗ್ಲೋ) ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಇಂದು ತೀರ್ಪು ನೀಡಿದೆ.
ಟಿ.ಬಿ.ಯಲ್ಲಿ ದಿನಗೂಲಿ ನೌಕರನಾಗಿರುವ ಮಹೇಶನಿಗೆ 2.5 ವರ್ಷ ಕಠಿಣ ಶಿಕ್ಷೆ ಮತ್ತು 2.15 ಲಕ್ಷ ರೂ ದಂಡ ವಿಧಿಸಿದೆ. ಮತ್ತೊಂದು ಪ್ರಕರಣದಲ್ಲಿ ಪ್ರಸನ್ನ ಎಂಬುವವನಿಗೆ 2.50 ಲಕ್ಷ ರೂ ದಂಡ ಮತ್ತು 2.5 ವರ್ಷ ಕಠಿಣ ಶಿಕ್ಷೆ ವಿಧಿಸಿ ಪ್ರಧಾನ ನ್ಯಾಯಾಧೀಶ ಬಿಆರ್ ಪಾಟೀಲ್ ಅವರು ಆದೇಶ ಹೊರಡಿಸಿದ್ದಾರೆ. ದಂಡದ ಮೊತ್ತವು ಬಾಧಿತ ಇಬ್ಬರು ಬಾಲಕಿಯರ ಆರ್ಥಿಕ ನೆರವಿಗೆ ಸಲ್ಲಿಕೆಯಾಗಬೇಕು ಎಂದೂ ತೀರ್ಪಿನಲ್ಲಿ ಹೇಳಲಾಗಿದೆ.












Click it and Unblock the Notifications