ಸಿದ್ದರಾಮಯ್ಯಗೆ ಜಗದೀಶ್ ಶೆಟ್ಟರ್ ಓಪನ್ ಚಾಲೇಂಜ್

ಬೆಂಗಳೂರು, ಸೆ. 7 : ಶಾಪಗ್ರಸ್ತ ನಗರವೆಂದು ಹಣೆಪಟ್ಟಿ ಕಟ್ಟಿಕೊಂಡಿರುವ ಚಾಮರಾಜನಗರಕ್ಕೆ ತೆರಳಿ, ಆ ಮೂಢನಂಬಿಕೆಯನ್ನು ತೊಳೆದುಹಾಕಲು ದಿಟ್ಟ ಪ್ರಯತ್ನ ಮಾಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೇ ಈಗ, ನಗರಕ್ಕೆ ಭೇಟಿ ಕೊಟ್ಟಾದರೂ ನೋಡಿ ಎಂದು ಸಿದ್ದರಾಮಯ್ಯ ಅವರಿಗೆ ಚಾಲೇಂಜ್ ಮಾಡಿದ್ದಾರೆ.

ಈ ಮೂಲಕ ತಾವು ಕೂಡ ಮೂಢನಂಬಿಕೆಯ ದಾಸರೇ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬೇಕಿದ್ದರೆ, ಒಂದು ಬಾರಿ ಚಾಮರಾಜನಗರಕ್ಕೆ ಭೇಟಿ ಕೊಟ್ಟು ನೋಡಿ ಮುಂದೆ ಏನಾಗುತ್ತದೆ ಎಂದು ಶೆಟ್ಟರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಣಕಿದ್ದಾರೆ. ಶೆಟ್ಟರ್ ಅವರು ಅಂದು ಭೇಟಿ ನೀಡಿದಾಗ ಎಲ್ಲರೂ ಅವರ ಧೈರ್ಯವನ್ನು ಹಾಡಿಹೊಗಳಿದ್ದರು.

Shettar challenges Siddaramaiah to visit Chamarajanagar

ಜನವರಿ 9ರಂದು ಅಂದು ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಅವರು ಸಪತ್ನೀಕರಾಗಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ನಾನು ಮೂಢನಂಬಿಕೆಯ ಪರ ಇಲ್ಲ. ಅಲ್ಲಿಗೆ ಭೇಟಿ ನೀಡಿ ಮೂಢನಂಬಿಕೆಯನ್ನು ಸುಳ್ಳು ಮಾಡುತ್ತೇನೆ ಎಂದು ಎದೆತಟ್ಟಿಕೊಂಡು ಹೇಳಿದ್ದರು. ಈಗ ಅವರೇ ಹಿಂದೆ ಅವರು ಆಡಿದ ಮಾತನ್ನು ಮರೆತು ಸಿದ್ದರಾಮಯ್ಯ ಅವರಿಗೆ ಚಾಲೇಂಜ್ ಮಾಡಿದ್ದಾರೆ.

ದೇವರಲ್ಲಿ ಮತ್ತು ಮೂಢನಂಬಿಕೆಯಲ್ಲಿ ಅಷ್ಟು ನಂಬಿಕೆ ಇಟ್ಟುಕೊಂಡಿಲ್ಲದ ಸಿದ್ದರಾಮಯ್ಯ ಅವರು ಈ ಹೇಳಿಕೆಗೆ ಯಾವ ಪ್ರತಿಕ್ರಿಯೆ ನೀಡಿಲ್ಲ. ಈ ಚಾಲೇಂಜ್ ಸ್ವೀಕರಿಸಿ, ತಾವು ಮೂಢನಂಬಿಕೆ ಪರ ಇಲ್ಲ ಎಂದು ಹೇಳುತ್ತಾರಾ, ಅಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಾರಾ ಎಂಬುದು ಸದ್ಯದ ಪ್ರಶ್ನೆಗಳು.

ಇತಿಹಾಸದ ಪುಟ ತಿರುವಿದಾಗ : ಕರ್ನಾಟಕ ರಾಜಕೀಯದ ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ನೋಡಿದರೆ ಈ ಮೂಢನಂಬಿಕೆಗೆ ಸಾಕಷ್ಟು ಪುಷ್ಟಿ ಸಿಗುತ್ತದೆ. ಇದು ಮೂಢನಂಬಿಕೆಯೋ, ಕಾಕತಾಳೀಯವೋ ಅಲ್ಲಿಗೆ ಭೇಟಿ ನೀಡಿದ ಅನೇಕ ಮುಖ್ಯಮಂತ್ರಿಗಳು ಪಟ್ಟು ಕಳೆದುಕೊಂಡಿದ್ದಾರೆ. ಇದನ್ನು ನಂಬಿದ ಅನೇಕ ಮುಖ್ಯಮಂತ್ರಿಗಳು ಅಲ್ಲಿಗೆ ಕಾಲಿಡಲೂ ಹಿಂಜರಿದಿದ್ದಾರೆ.

ಸಮಾಜವಾದಿ ನಾಯಕ, ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು 1997ರ ಆಗಸ್ಟ್ 15ರಂದು ಚಾಮರಾಜನಗರವನ್ನು ಜಿಲ್ಲೆಯನ್ನಾಗಿ ಘೋಷಿಸಿದ್ದರು. ಆದರೆ, ಅವರು ಕೂಡ ನಗರಕ್ಕೆ ಕಾಲಿಡದೆ ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಮರಳಿದ್ದರು. ಆದರೆ, ಅವರಿಗಿಂತ ಮೊದಲು ನಗರಕ್ಕೆ ಭೇಟಿ ನೀಡಿದ್ದ ದೇವರಾಜ್ ಅರಸ್, ವಿರೇಂದ್ರ ಪಾಟೀಲ್, ಗುಂಡೂರಾವ್, ರಾಮಕೃಷ್ಣ ಹೆಗಡೆ ಮತ್ತು ಎಸ್ಆರ್ ಬೊಮ್ಮಾಯಿ ಅವರು ಅಧಿಕಾರ ಕಳೆದುಕೊಂಡಿದ್ದರು.

ನಂತರ ರಾಜ್ಯದ ಚುಕ್ಕಾಣಿ ಹಿಡಿದಿದ್ದ ಎಸ್ಎಂ ಕೃಷ್ಣ, ಎಸ್ ಬಂಗಾರಪ್ಪ, ಧರಂಸಿಂಗ್, ಬಿಎಸ್ ಯಡಿಯೂರಪ್ಪ ಮತ್ತು ಡಿವಿ ಸದಾನಂದ ಗೌಡ ಯಾರೂ ಚಾಮನಗರಕ್ಕೆ ಕಾಲಿಡುವ ಧೈರ್ಯ ತೋರಿರಲಿಲ್ಲ. ಯಡಿಯೂರಪ್ಪ ತಾವು ಭೇಟಿ ನೀಡುವುದಾಗಿ ಘೋಷಿಸಿದ್ದರೂ ನಂತರ ಹಿಂದೇಟು ಹಾಕಿದ್ದರು. ಆದರೆ, ಭೇಟಿ ನೀಡಿದ ಜಗದೀಶ್ ಶೆಟ್ಟರ್ ತಮ್ಮ ಅಧಿಕಾರ ಉಳಿಸಿಕೊಳ್ಳಲು ಯಶಸ್ವಿಯಾಗಲಿಲ್ಲ. ಇದು ಮೂಢನಂಬಿಕೆಯೋ, ಕಾಕತಾಳೀಯವೋ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+