ರಾಹುಲ್ ಗಿಂತ ಮೋದಿಯೇ ಪ್ರಧಾನಿಯಾಗಲಿ: ಸಿಇಒಗಳು

ಮುಂಬೈ, ಸೆ.7: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ಚರ್ಚೆ ನಡೆದಿರುವ ಬೆನ್ನಲ್ಲೇ ಅನೇಕ ಸಮೀಕ್ಷೆಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮೀಕ್ಷೆಯಂತೆ ರಾಹುಲ್ ಗಿಂತ ಮೋದಿ ಬಹುಮತ ಪಡೆದಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಲಿ ಎಂದು ದೇಶದ ಉನ್ನತ ಸ್ತರದ ನಾಲ್ಕನೇ ಮೂರರಷ್ಟು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ)ಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಆಂಗ್ಲ ವಾಣಿಜ್ಯ ಪತ್ರಿಕೆಯೊಂದು ನೀಲ್ಸನ್ ಕಂಪನಿ ಜತೆಗೂಡಿ ನಡೆಸಿರುವ ಈ ಸಮೀಕ್ಷೆಯಲ್ಲಿ ಕೇವಲ ಶೇ.7ರಷ್ಟು ಮಂದಿ ಮಾತ್ರ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಹುದ್ದೆಗೆ ಬೆಂಬಲಿಸಿದ್ದಾರೆ.

Almost three fourths back Narendra Modi; less than 10% want Rahul Gandhi as PM

500 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ನಡೆಸುವ ಕಂಪನಿಗಳ ಸಿಇಒಗಳಿಂದ ಆ.1ರಿಂದ ಸೆಪ್ಟೆಂಬರ್ ವರೆಗೆ ಅಭಿಪ್ರಾಯ ಸಂಗ್ರಹಿಸಿ ಈ ಸಮೀಕ್ಷೆ ನಡೆಸಲಾಗಿದೆ. ದೇಶದ ಆರ್ಥಿಕ ವ್ಯವಸ್ಥೆಯನ್ನು ಕೇಂದ್ರದ ಯುಪಿಎ ಸರ್ಕಾರ ಕೆಟ್ಟದಾಗಿ ನಿರ್ವಹಿಸಿದೆ ಎಂದು ಅಭಿಪ್ರಾಯಪಟ್ಟಿರುವ ಸಿಇಒಗಳು, ತಮಗೆ ಬಲಿಷ್ಠ ನಾಯಕತ್ವ, ನಿರ್ಧಾರ ಕೈಗೊಳ್ಳುವವರು ಬೇಕು. ರಾಹುಲ್ ಗಾಂಧಿಗೆ ಹೋಲಿಸಿದರೆ ಈ ವಿಚಾರದಲ್ಲಿ ಮೋದಿ ಮುಂದಿದ್ದಾರೆ ಎಂದು ತಿಳಿಸಿದ್ದಾರೆ.

ನರೇಂದ್ರ ಮೋದಿ ಅವರಿಗೆ ಉದ್ಯಮಿಗಳು ಹಾಗೂ ಕೈಗಾರಿಕೆ ಕಷ್ಟ ನಷ್ಟಗಳು ತಿಳಿದಿದೆ. ಅವರ ಬೆನ್ನ ಹಿಂದೆ ಅಪಾರ ಅನುಭವವಿದೆ. ರಾಹುಲ್ ಅವರು ಈ ವಿಷಯದಲ್ಲಿ ಕಲಿಯುವುದು ಸಾಕಷ್ಟಿದೆ ಎಂದು ಸಮೀಕ್ಷೆ ಹೇಳಿದೆ.

ಶೇ 74 ರಷ್ಟು ಉದ್ಯಮಿಗಳು ಮೋದಿ ಪರ ನಿಂತರೆ ಉಳಿದವರು ರಾಹುಲ್ ಗಾಂಧಿ ಪರ ಇದ್ದಾರೆ. ಕಾಂಗ್ರೆಸ್ ಅಥವಾ ಬಿಜೆಪಿ ಆಯ್ಕೆ ಪ್ರಶ್ನೆ ಬಂದಾಗ ಸ್ಥಿರ ಸರ್ಕಾರ ನೀಡುವ ಯಾವುದೇ ಪಕ್ಷವಾದರೂ ನಾವು ಅದನ್ನು ಬೆಂಬಲಿಸುತ್ತೇವೆ ಎಂದು ಸಿಇಒಗಳು ಹೇಳಿದ್ದಾರೆ. ಮೋದಿ ಅವರ ನಾಯಕತ್ವ ಗುಣ, ಅನುಭವದಿಂದ ಮಾತ್ರ ಆಯ್ಕೆ ಮಾಡಲಾಗಿದೆ. ರಾಜಕೀಯವಾಗಿ ನಾವು ಅವರನ್ನು ಬೆಂಬಲಿಸಬೇಕೆಂದಿಲ್ಲ. ಸರ್ಕಾರ ಸ್ಥಿರವಾಗಿದ್ದರೆ ಉದ್ಯಮ ಅಭಿವೃದ್ಧಿ ಸಾಧ್ಯ ಎಂದು ಸಮೀಕ್ಷೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+