ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಗನಸಖಿ ಆತ್ಯಹತ್ಯೆ ಪ್ರಕರಣ, ಕಾಂಡಗೆ ಜಾಮೀನು

By Mahesh
|
Google Oneindia Kannada News

ನವದೆಹಲಿ, ಸೆ.5: ಮಾಜಿ ಗಗನಸಖಿ ಗೀತಿಕಾ ಶರ್ಮ ಆತ್ಮಹತ್ಯೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿ ಹರ್ಯಾಣದ ಮಾಜಿ ಸಚಿವ ಗೋಪಾಲ್ ಗೋಯಲ್ ಕಾಂಡ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ.

ಕಳೆದ 14 ತಿಂಗಳಿನಿಂದ ಜೈಲಿನಲ್ಲಿದ್ದ ಕಾಂಡ ಅವರು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿದ್ದರು. ಈ ಮನವಿಯನ್ನು ಪುರಸ್ಕರಿಸಿದ ದೆಹಲಿಯ ಹೆಚ್ಚುವರಿ ಸೆಷನ್ಸ್ ಕೋರ್ಟ್ ಜಡ್ಜ್ ಎಂಸಿ ಗುಪ್ತಾ ಅವರು ಜಾಮೀನು ನೀಡಿದ್ದಾರೆ>

ಪ್ರಕರಣದ ಇನ್ನೊಬ್ಬ ಆರೋಪಿ, ಗೋಪಾಲ್ ಕಾಂಡ ಅವರ ಆಪ್ತ ಅರುಣ್ ಚಡ್ಡಾ ಅವರಿಗೆ ನವೆಂಬರ್ 11 ತನಕ ಬಿಡುವು ಸಿಕ್ಕಿದೆ. ಸಮಾರಂಭಗಳು ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅರುಣ್ ಅನುಮತಿ ಕೋರಿದ್ದರು.

Geetika suicide case: Accused Kanda granted bail

ಕಾಂಡ ಅವರು ಹರ್ಯಾಣದ ಶಾಸಕರಾಗಿದ್ದು ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳುವುದು ಅವಶ್ಯವಾಗಿದೆ. ಹೀಗಾಗಿ ಅವರಿಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ಕಾಂಡ ಅವರ ಪರ ವಕೀಲ ರಮೇಶ್ ಗುಪ್ತಾ ವಾದಿಸಿದ್ದರು.

ಸಿರ್ಸಾ ಕ್ಷೇತ್ರದ ಶಾಸಕರಾಗಿದ್ದು, ಶಾಸಕರು ಜೈಲಿನಲ್ಲಿ ಹೋಗಿ ಕುಳಿತರೆ ಜನರ ಸಮಸ್ಯೆಗಳನ್ನು ಕೇಳುವವರು ಯಾರು? ಕಾಂಡ ಅವರು ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. ಹೀಗಾಗಿ ಕ್ಷೇತ್ರಕ್ಕೆ ಸಿಗುವ ನಿಧಿ ಸದ್ಬಳಕೆ, ಕಾಮಗಾರಿಗಳ ಉಸ್ತುವಾರಿಗೆ ಶಾಸಕರು ಜೈಲಿನಿಂದ ಹೊರಬರಲೇ ಬೇಕು ಎಂದು ವಕೀಲ ರಮೇಶ್ ವಾದ ಮಂಡಿಸಿದರು.

ಈ ವಾದವನ್ನು ಖಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೀವ್ ಮೋಹನ್ ಅವರು, ಫೆಬ್ರವರಿ ತಿಂಗಳಿನಲ್ಲಿ ಅಧಿವೇಶನ ನಡೆದಾಗ ಗೋಪಾಲ್ ಅವರು ಜೈಲಿನಲ್ಲೇ ಇದ್ದರು. ಈಗಲೂ ಇದ್ದಾರೆ. ಇದರಿಂದ ಜನರಿಗೆ ನಷ್ಟವೇನು ಆಗಿಲ್ಲ. ಗೋಪಾಲ್ ಅವರು ಜೈಲಿನಿಂದ ಹೊರ ಬಿದ್ದರೆ ಸಾಕ್ಷ್ಯ ನಾಶ ಪಡಿಸುವುದು ಖಂಡಿತ ಎಂದಿದ್ದರು. ಆದರೆ, ಜಡ್ಜ್ ತೀರ್ಪು ಗೋಪಾಲ್ ಪರ ಬಂದಿದೆ.

ಗೀತಿಕಾ ಆತ್ಮಹತ್ಯಾ ಪ್ರಕರಣದ ಪ್ರಮುಖ ಆರೋಪಿ ಹರ್ಯಾಣದ ಮಾಜಿ ಸಚಿವ ಗೋಪಾಲ್ ಕಾಂಡ ಅವರ ವಿರುದ್ಧ ಹಾಕಿರುವ ಕೇಸುಗಳನ್ನು ಹಿಂಪಡೆಯುವಂತೆ ಗೀತಿಕಾ ಅವರ ಕುಟುಂಬದ ಮೇಲೆ ಭಾರಿ ಒತ್ತಡ ಹೇರಲಾಗಿತ್ತು. ಕಾಂಡ ಅವರ ಕಡೆಯವರ ಒತ್ತಡ ತಾಳಲಾರದೆ ಗೀತಿಕಾ ಅವರ ತಾಯಿ ಸಾವಿಗೆ ಶರಣಾಗಿದ್ದರು.

23 ವರ್ಷ ವಯಸ್ಸಿನ ಗೀತಿಕಾ ಅವರು ದೆಹಲಿಯ ವಾಯುವ್ಯ ಭಾಗದಲ್ಲಿರುವ ಅಶೋಕ್ ವಿಹಾರ್ ನ ಅಪಾರ್ಟ್ಮೆಂಟ್ ನಲ್ಲಿ ಆಗಸ್ಟ್ 5,2012ರಂದು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಗೀತಿಕಾ ಅವರ ಸೂಸೈಡ್ ನೋಟ್ ನಲ್ಲಿ ಗೋಪಾಲ್ ಕಾಂಡಾ, ಕಾಂಡಾ ಬಂಟ ಅರುಣ್ ಚಡ್ಡಾ ಅವರ ಮೇಲೆ ಆರೋಪ ಎಲ್ಲಾ ರೀತಿಯ ಕಿರುಕುಳ ಹೊರೆಸಲಾಗಿತ್ತು. ಪ್ರಕರಣ ಕುತ್ತಿಗೆಗೆ ಬಂದ ಮೇಲೆ ಹರ್ಯಾಣದ ಸಚಿವ ಸ್ಥಾನಕ್ಕೆ ಗೋಪಾಲ್ ಕಾಂಡಾ ರಾಜೀನಾಮೆ ನೀಡಿದ್ದರು.

English summary
Former Haryana Minister Gopal Goyal Kanda finally has been granted bail in Geetika Sharma suicide case. Kanda, who was lodged in a jail in Delhi for over 14 months, sought bail to attend upcoming assembly session in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X