ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಗೋಪಾಲನ ಕೃಷ್ಣಲೀಲೆ ಬಿಚ್ಚಿಟ್ಟ ನೂಪುರ್ ಮೆಹ್ತಾ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Kanda exploited starlet
  ನವದೆಹಲಿ, ಆ.27: ಮಾಜಿ ಗಗನಸಖಿ ಗೀತಿಕಾ ಶರ್ಮ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹರ್ಯಾಣ ಸಚಿವ ಗೋಪಾಲ್ ಕಾಂಡ ಮಹಾನ್ ಕಾಮುಕ, ಆಮೀರ್ ಖಾನ್ ಸಿನಿಮಾದಲ್ಲಿ ಚಾನ್ಸ್ ಕೊಡಿಸುತ್ತೀನಿ ಎಂದು ಹೇಳಿ ಹಾಲಿ ನಟಿಯೊಬ್ಬಳಿಗೆ ಮೋಸ ಮಾಡಿಬಿಟ್ಟಿದ್ದ ಎಂಬ ವಿಷಯವನ್ನು ಬಾಲಿವುಡ್ ನಟಿ ನೂಪುರ್ ಮೆಹ್ತಾ ಬಿಚ್ಚಿಟ್ಟಿದ್ದಾರೆ.

  ಅಂಕಿತಾ ಸಿಂಗ್ ಗೆ ಬಾಲಿವುಡ್ ಪ್ರವೇಶಿಸುವ ಹುಚ್ಚಿತ್ತು. ಇದನ್ನು ಕಂಡಾ ಸರಿಯಾಗಿ ಬಳಸಿಕೊಂಡ. ಅಮೀರ್ ಖಾನ್ ಹಾಗೂ ಕಾಜೋಲ್ ಅಭಿನಯದ 'ಫನಾ' ಚಿತ್ರದಲ್ಲಿ ಆಕೆಗೆ ಸಣ್ಣ ಪಾತ್ರ ಕೊಡಿಸಿಬಿಟ್ಟ.

  ಇದಕ್ಕೆ ಪ್ರತಿಯಾಗಿ ಅಂಕಿತಾಳ ದೇಹ ಸಂಪರ್ಕ ಬಯಸಿದ ಹಾಗೂ ಮನಬಂದಂತೆ ಆಕೆಯನ್ನು ಉಪಯೋಗಿಸಿಬಿಟ್ಟ.

  ಗುರ್ ಗಾಂವ್ ನ ಫಾರ್ಮ್ ಹೌಸ್ ನಲ್ಲಿ ಅಂಕಿತಾಳ ನೃತ್ಯವೈಖರಿ ನೋಡಿ ಮೋಹಗೊಂಡಿದ್ದ ಗೋಪಾಲ್, ಆಕೆಗೆ ತೊಂದರೆ ಏನೂ ಕೊಡಲಿಲ್ಲ.

  ಅಂಕಿತಾಳ ಅಸಹಾಯಕತೆಯ ಲಾಭ ಪಡೆದುಕೊಂಡ, ಆಕೆಗೆ ಗೋವಾದ ಕ್ಯಾಸಿನೋದಲ್ಲಿ ಉದ್ಯೋಗ ನೀಡಿದ. ಇಬ್ಬರಿಗೂ ಒಂದು ಮಗು ಸಹಾ ಇದೆ.

  ಅತ್ಮಹತ್ಯೆಗೆ ಒಳಗಾದ ಗೀತಿಕಾ ಹಾಗೂ ಅಂಕಿತಾ ಜೊತೆ ಆಗಾಗ ಕಿತ್ತಾಟ ನಡೆಯುತ್ತಿತ್ತು. ಈ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಅಂಕಿತಾ ವಿರುದ್ಧ ಎಫ್ ಐಆರ್ ಕೂಡಾ ದಾಖಲಾಗಿತ್ತು ಎಂದು ನೂಪುರ್ ಹೇಳಿದ್ದಾಳೆ.

  ಈ ಇಬ್ಬರು ಯುವತಿಯರು ಕಂಡಾನನ್ನು ಹಂಚಿಕೊಳ್ಳಲು ಕಿತ್ತಾಡುತ್ತಿದ್ದರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ವಿಷಯ ಗೋಪಾಲ್ ಕಂಡಾ ಅವರ ಧರ್ಮಪತ್ನಿಗೂ ತಿಳಿದಿತ್ತು. ಅದರೆ, ಆಕೆಗೆ ಈ ಇಬ್ಬರು ಸಂಸ್ಥೆಯ ಉದ್ಯೋಗಿಯಾಗಿ ಮಾತ್ರ ಗೊತ್ತಿತ್ತು. ಕಂಡಾ ಜೊತೆಗೆ ಇಬ್ಬರಿಗೂ ಇರುವ ಸಂಬಂಧದ ಬಗ್ಗೆ ತಿಳಿದಿರಲಿಲ್ಲ ಎಂದು ನೂಪುರ್ ಹೇಳಿದ್ದಾರೆ.

  ಗೋಪಾಲ್ ಕಂಡಾ ಹಾಗೂ ಅವರ ಧರ್ಮಪತ್ನಿ ಇಬ್ಬರು ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಅದರಲ್ಲೂ ಕಂಡಾ ಪತ್ನಿಯಂತೂ ಗೀತಿಕಾಳನ್ನು ಗೋಪಾಲ್ ತನ್ನ ಮಗಳಂತೆ ನೋಡಿಕೊಳ್ಳುತ್ತಿದ್ದರು ಹೇಳಿಕೆ ನೀಡಿದ್ದಾರೆ.

  ಆದರೆ, ಪೊಲೀಸ್ ತನಿಖೆ ಬೇರೆಯದೆ ಕತೆ ಹೇಳುತ್ತಿದೆ. ಆ.5 ರಂದು ಆತ್ಮಹತ್ಯೆ ಮಾಡಿಕೊಂಡ ಗೀತಿಕಾ ಶರ್ಮ ಅನೈಸರ್ಗಿಕ ಸೆಕ್ಸ್ ಗೆ ಒಳಗಾಗಿದ್ದರು ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ.

  ಗೀತಿಕಾಗೆ ಬಿಎಂಡಬ್ಲ್ಯೂ ಕಾರು, ಎಂಬಿಎ ಓದಲು ಹಣ, 400ಕ್ಕೂ ಅಧಿಕ ಎಸ್ ಎಂಎಸ್ ಗಳನ್ನು ಗೋಪಾಲ್ ಕಳಿಸಿದ್ದು ಗುಟ್ಟಾಗಿ ಉಳಿದಿಲ್ಲ. ಪ್ರತಿದಿನ ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತಿರುವುದು ಪೊಲೀಸ್ ತನಿಖೆಯ ದಿಕ್ಕು ತಪ್ಪಿಸುತ್ತಿದೆ. ಪ್ರಕರಣದ ಆರೋಪಿಗಳಾದ ಗೋಪಾಲ್ ಕಂಡಾ, ಅರುಣಾ ಚಡ್ಡಾ ನ್ಯಾಯಾಂಗ ಬಂಧನದಲ್ಲಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Former Haryana minister Gopal Kanda has been accused of exploiting Bollywood starlet Ankita Singh whom he reportedly had married later. Kanda had taken advantages of Ankita in return of small-time role in Aamir Khan-Kajol starrer "Fanaa".

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more