ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸದೆ ರಮ್ಯಾಗೆ ಜ್ವರ: ದಿಲ್ಲಿ ಅಪೊಲೋ ಆಸ್ಪತ್ರೆಗೆ ದಾಖಲು

By Srinath
|
Google Oneindia Kannada News

ಮಂಡ್ಯ, ಸೆ.4: ಮಂಡ್ಯ ಸಂಸದೆಯಾಗಿ ದೆಹಲಿಗೆ ಚೊಚ್ಚಲ ಭೇಟಿ ಕೊಟ್ಟಿರುವ ಸುಪ್ರಸಿದ್ದ ನಟಿ ರಮ್ಯಾ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಸರಿಯಾಗಿ ಒಂದು ತಿಂಗಳಿಂದ ದಿಡೀರನೆ ಬಿಡುವಿಲ್ಲದ ಚಟುವಟಿಕೆಗಳಿಂದ ಬಳಲಿರುವ ರಮ್ಯಾ ಅವರು ಸೂಕ್ತ ಚಿಕಿತ್ಸೆಗಾಗಿ ದೆಹಲಿಯ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಾಕು ತಂದೆಯ ಹಠಾತ್ ಸಾವಿನಿಂದ ಹಿಡಿದು ಚೊಚ್ಚಲ ಬಾರಿಗೆ ಸಂಸದೆಯಾಗಿ ವಿಜಯೀಭವ ಆಗುವುದರ ಮಧ್ಯೆ ಖಾಸಗಿ ಬದುಕಿನಲ್ಲಿ ಅನೇಕ ಏರುಪೇರುಗಳನ್ನು ಕಂಡ ರಮ್ಯಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಘಾಸಿಗೊಂಡಿದ್ದರು.

mandya-cong-mp-kannada-actress-ramya-admitted-at-apollo-delhi

ರಮ್ಯಾ ಅವರು ಭಾನುವಾರವೇ ಅಸ್ವಸ್ಥಗೊಂಡಿದ್ದಾರೆ. ರಮ್ಯಾ ಅವರನ್ನು ವೈರಲ್ ಜ್ವರ ಬಾಧಿಸುತ್ತಿದೆ. ಆದರೆ ಗಾಬರಿಪಡುವಂಥದ್ದೇನೂ ಆಗಿಲ್ಲ. ಮೂರ್ನಾಲ್ಕು ದಿನಗಳ ಚಿಕಿತ್ಸೆ/ವಿಶ್ರಾಂತಿ ಪಡೆದು ಸಹಜತೆಗೆ ಮರಳುತ್ತಾರೆ ಎಂದು ರಮ್ಯಾ ಅವರ ಆಪ್ತ ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ 7ರಂದು ತಮ್ಮ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳುವುದಾಗಿ ರಮ್ಯಾ ತಮ್ಮ ಟ್ವಿಟ್ಟರ್ ಖಾತೆ ಮೂಲಕ ತಿಳಿಸಿದ್ದಾರೆ.



English summary
Mandya Lok Sabha Congress MP- Kannada Actress Ramya admitted at Apollo in Delhi viral infection. 'Nothing to panic.The last one month has been very stressful & she is down with a viral infection' says Ms Ramya Twitter account update.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X