ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಲಾಲಿ ಬಂಧನ

ಶ್ರೀನಗರ, ಸೆ. 4: ಭಾರತದ ಭದ್ರತಾ ಪಡೆಗಳು ಮತ್ತೊಂದು ಸಾಹಸ ಮೆರೆದಿದ್ದಾರೆ. ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದನೆ ಸಂಘಟನೆಯ ಪ್ರಮುಖ ನಾಯಕ ಉಗ್ರ ತಾಲೀಬ್ ಲಾಲಿನನ್ನು ಬುಧವಾರ ಬಂಧಿಸಿದ್ದಾರೆ. ಬಂಡಿಪೋರ ಜಿಲ್ಲೆಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಲಾಲಿ ಜತೆಗೆ ಅವನ ಇನ್ನೂ ಇಬ್ಬರು ಸಹಚರರನ್ನು ಬಂಧಿಸಲಾಗಿದೆ.

ಕಾಶ್ಮೀರದಲ್ಲಿ ಬಹುಕಾಲದಿಂದ ಚಾಲ್ತಿಯಲ್ಲಿರುವ ಉಗ್ರ ಲಾಲಿನನ್ನು ಅವನ ಊರಾದ ಅಜಾಸ್ ಎಂಬಲ್ಲಿ ಬಂಧಿಸಲಾಗಿದೆ. ಅಜಾಸ್ ಪ್ರಾಂತ್ಯದಲ್ಲಿ ಬುಧವಾರ ಬೆಳಗ್ಗೆ ಕಾರ್ಯಾಚರಣೆ ನಡೆದ ವೇಳೆ ಭದ್ರತಾ ಪಡೆಗಳ ಜತೆಗೆ ಗುಂಡಿನ ದಾಳಿ ನಡೆದಿದೆ. ಆದರೆ ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Hizbul Mujahideen commander Talib Lali two other suspects held Srinagar

ತಾಲೀಬ್ ಲಾಲಿ ಕಳೆದ 15 ವರ್ಷಗಳಿಂದ ಸಕ್ರಿಯನಾಗಿದ್ದ. ಮಾಮೂಲಿ ಸದಸ್ಯನಾಗಿ ಸೇರಿಕೊಂಡಿದ್ದ ಲಾಲಿ, ಕಾಲಾಂತರದಲ್ಲಿ ಕಣಿವೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದನೆ ಸಂಘಟನೆಯ ಸರ್ವೋಚ್ಛ ನಾಯಕನಾಗಿ ಹೊರಹೊಮ್ಮಿದ್ದಾನೆ.

ಇದೀಗ ಲಾಲಿ ತನ್ನ ಇಬ್ಬರು ಸಹಚರರಾದ ಅಬ್ದುಲ್ ರಶೀದ್ ಲಾಲಿ ಮತ್ತು ಷೌಖತ್ ಅಹಮದ್ ಮಿರ್ ಜತೆಗೂಡಿ ಭದ್ರತಾ ಪಡೆಗಳಿಗೆ ಸೆರೆಸಿಕ್ಕಿದ್ದಾನೆ. ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೂವರನ್ನೂ ಗುಪ್ತ ಸ್ಥಳಕ್ಕೆ ಕರೆದೊಯ್ಯಲಾಗಿದ್ದು, ತೀವ್ರ ವಿಚಾರಣೆಗೊಳಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+