ಒಂದೇ ದಿನ ದಾಖಲೆ ಟಿಕೆಟ್ ಮಾರಿದ IRCTC

ಬೆಂಗಳೂರು, ಸೆ.3: ಭಾರತೀಯ ರೈಲ್ವೆಯ ಐಆರ್ ಸಿಟಿಸಿ ವೆಬ್ ಸೈಟ್ ಬಗ್ಗೆ ದೂರುಗಳು ಎಷ್ಟೇ ಇದ್ದರೂ ಬಳಕೆದಾರರ ಸಂಖ್ಯೆ ಕಮ್ಮಿಯಾಗಿಲ್ಲ. ಸೋಮವಾರ ದಾಖಲೆ ಪ್ರಮಾಣದಲ್ಲಿ ಆನ್ ಲೈನ್ ಟ್ರೈನ್ ಟಿಕೆಟ್ ಗಳು ಬುಕ್ಕಿಂಗ್ ಕಂಡಿದೆ.

ಸೋಮವಾರ ಒಂದೇ ದಿನದಲ್ಲಿ ಸುಮಾರು 5.72 ಲಕ್ಷ ಟಿಕೆಟ್ ಗಳು ಆನ್ ಲೈನ್ ನಲ್ಲಿ ಮುಂಗಡ ಬುಕ್ಕಿಂಗ್ ಮಾಡಲಾಗಿದೆ. ಇ- ಟಿಕೆಟಿಂಗ್ ವೆಬ್ ಸೈಟ್ ಐಆರ್ ಸಿಟಿಸಿ ಕಂಡಿರುವ ಅತಿಹೆಚ್ಚಿನ ಬುಕ್ಕಿಂಗ್ ಪ್ರಮಾಣ ಇದಾಗಿದೆ. ಸೆಪ್ಟೆಂಬರ್ 2 ರಂದು ದಾಖಲೆ ಪ್ರಮಾಣದಲ್ಲಿ ಬುಕ್ಕಿಂಗ್ ಆಗಿದೆ ಇದಕ್ಕೂ ಮುನ್ನ ಆಗಸ್ಟ್ 12ರಂದು 5.04 ಲಕ್ಷ ಟಿಕೆಟ್ ಗಳು ಬುಕ್ ಆಗಿತ್ತು. ಎರಡೂ ದಾಖಲೆಗಳು ಇದೇ ವರ್ಷ ಸಂಭವಿಸಿದೆ ಎಂದು ಐಆರ್ ಟಿಸಿ ಅಧಿಕಾರಿಗಳು ಹೇಳಿದ್ದಾರೆ.

IRCTC sells record 5.72 lakh e-tickets on single day

ಒಟ್ಟಾರೆ ಮೂರನೇ ಬಾರಿ ಒಂದೇ ದಿನದಲ್ಲಿ 5 ಲಕ್ಷ ಹಾಗೂ ಅದಕ್ಕಿಂತ ಅಧಿಕ ಸಂಕ್ಯೆಯಲ್ಲಿ ಬುಕ್ಕಿಂಗ್ ಆಗಿರುವುದನ್ನು ದಾಖಲೆಗಳು ಸಾರುತ್ತಿವೆ. ಮೊದಲ ಬಾರಿಗೆ ಮಾರ್ಚ್ 1, 2013ರಲ್ಲಿ ಐಆರ್ ಟಿಸಿ ವೆಬ್ ತಾಣ ಒಟ್ಟಾರೆ 135 ಲಕ್ಷ ಇ ಟೆಕೆಟ್ ಗಳನ್ನು ಸರಾಸರಿ 4.34 ಲಕ್ಷ ಟಿಕೆಟ್ ಪ್ರತಿ ದಿನದಂತೆ ಮಾರಾಟ ಮಾಡಿತ್ತು.

ಆಗಸ್ಟ್ ತಿಂಗಳಿನಲ್ಲಿ ಸಾಧಿಸಿದ ಈ ಪ್ರಮಾಣಕ್ಕೆ ಕಳೆದ ವರ್ಷದ ಸಂಖ್ಯೆಗಳನ್ನು ಹೋಲಿಸುವುದಾದರೆ ಕಳೆದ ವರ್ಷ ಪ್ರತಿದಿನ 3.99 ಲಕ್ಷ ಟಿಕೆಟ್ ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದ ಶೇ 10 ರಷ್ಟು ಅಧಿಕ ಟಿಕೆಟ್ ಮಾರಾಟವಾಗಿದೆ.

ಒಟ್ಟಾರೆ ಕಳೆದ ವರ್ಷ 2012-13ರಲ್ಲಿ 3.85 ಲಕ್ಷ ಟಿಕೆಟ್ ಸರಾಸರಿ ಮಾರಾಟ ಪ್ರತಿದಿನ ಕಾಣಲಾಗಿತ್ತು. ಸುಮಾರು 22೦ ಲಕ್ಷ ಮಂದಿ ಟಿಕೆಟ್ ಬುಕ್ ಮಾಡಿದ್ದರು. ಪ್ರಸಕ್ತ ವರ್ಷದ ಆಗಸ್ಟ್ ತಿಂಗಳಿನ ಅಂಕಿ ಅಂಶದಂತೆ 223 ಲಕ್ಷ ಪ್ರಯಾಣಿಕರು ಆನ್ ಲೈನ್ ಮುಗಂಡ ಬುಕ್ಕಿಂಗ್ ಮಾಡಿದ್ದಾರೆ.

ಐಆರ್ ಟಿಸಿ ರೈಲ್ವೆ ಟಿಕೆಟ್ ಮುಂಗಡ ಬುಕ್ಕಿಂಗ್ ಸೌಲಭ್ಯ ಎಸ್ ಎಂಎಸ್ ಮೂಲಕ ಕೂಡಾ ಸಾಧ್ಯವಿದೆ. ಹೆಚ್ಚಿನ ಮಾಹಿತಿಗೆ ಭೇಟಿ ಕೊಡಿ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+