ಮುಸ್ಲಿಂ ಇಮಾಮ್ ಗಳ ತಿಂಗಳ ಅನುದಾನ ಕಟ್

ಕೋಲ್ಕತ್ತಾ, ಸೆ.2: ಮುಸ್ಲಿಂ ಸಮುದಾಯದ ಇಮಾಮ್ ಗಳು ಮುಝಿನ್ ಗಳಿಗೆ ಪ್ರತಿ ತಿಂಗಳು ಇಂತಿಷ್ಟು ಎಂದು ಹಣ ನೀಡುತ್ತಾ ಬಂದಿದ್ದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಮುಖಭಂಗವಾಗಿದೆ. ಇಮಾಮ್ ಗಳಿಗೆ ಅನುದಾನ ಏಕೆ? ಇದು ತಾರತಮ್ಯ ನೀತಿ, ಅಸಂವಿಧಾನಿಕ ಕ್ರಮ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಜಸ್ಟೀಸ್ ಪಿಕೆ ಚಟ್ಟೋಪಾಧ್ಯಾಯ ಹಾಗೂ ಜಸ್ಟೀಸ್ ಎಂಪಿ ಶ್ರೀವಾಸ್ತವ್ ಅವರಿದ್ದ ನ್ಯಾಯಪೀಠ ಆದೇಶ ನೀಡಿ ಇಮಾಮ್ ಗಳಿಗೆ ನೀಡುತ್ತಿದ್ದ ತಿಂಗಳ ವಂತಿಕೆ ನಿಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಇಮಾಮ್ ಗಳಿಗೆ ಅನುದಾನ ನೀಡುವ ಬಗ್ಗೆ ಸಲ್ಲಿಸಲಾಗಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶವನ್ನು ಸೋಮವಾರ(ಸೆ.2) ಹೊರಡಿಸಿದೆ.

ಈ ರೀತಿ ಅನುದಾನ ನೀಡುವ ಮೂಲಕ ಸಂವಿಧಾನದ ಸೆಕ್ಷನ್ 14 ಹಾಗೂ 15/1 ವಿಧೇಯಕಗಳ ನಿಯಮ ಉಲ್ಲಂಘನೆ ಮಾಡಲಾಗಿದೆ. ಜಾತಿ, ಮತ, ಪಂಥ, ಲಿಂಗ, ವರ್ಣ, ಹುಟ್ಟಿದ ಸ್ಥಳ ಮುಂತಾದವುಗಳ ಆಧಾರದ ಮೇಲೆ ಯಾವುದೇ ನಾಗರೀಕರನ್ನು ಮೇಲು ಕೀಳಾಗಿ ನೋಡಬಾರದು ತಾರತಮ್ಯನೀತಿ ಅನುಸರಿಸಬಾರದು ಎಂದು ನಿಯಮ ಸಾರುತ್ತದೆ.

Allowance for Imams and Muezzins unconstitutional: HC

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 2012ರ ಏರ್ಪ್ರಿಲ್ ತಿಂಗಳಿನಲ್ಲಿ ಹೊಸ ನಿಯಮ ಜಾರಿಗೊಳಿಸಿದ್ದರು. ಈ ಹೊಸ ನೀತಿ ಪ್ರಕಾರ ಪ್ರತಿ ತಿಂಗಳು ಇಮಾಮ್ ಗಳಿಗೆ 2,500 ರು ಹಾಗೂ ಮುಝಿನ್(muezzins) ಗಳಿಗೆ 1500 ರು ನೀಡುತ್ತಿತ್ತು.

ಈ ನೀತಿಯನ್ನು ವಿರೋಧಿಸಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆಸೀಮ್ ಸರ್ಕಾರ್ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಭಾರತ ಸೆಕ್ಯುಲರ್ ರಾಷ್ಟ್ರ. ಮಮತಾ ಬ್ಯಾನರ್ಜಿ ಅವರ ನೀತಿಯಿಂದ ಕದಂಕ ಸೃಷ್ಟಿಯಾಗಲಿದೆ. ಜಾತಿ ಪಂಥಗಳನ್ನು ಸಮಾನತೆಯಿಂದ ಕಾಣಬೇಕು ಎಂದಿದ್ದರು.

ಇದೇ ಅಂಶವನ್ನು ಮುಂದಿಟ್ಟುಕೊಂಡು ಸರ್ಕಾರ್ ಪರ ವಕೀಲ ಕೌಶಿಕ್ ಚಂದಾ ಅವರು ಕೋರ್ಟಿನಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರು. ಕೌಶಿಕ್ ಅವರ ವಾದದಲ್ಲಿ ಹುರುಳಿರುವುದನ್ನು ಪರಿಶೀಲಿಸಿದ ನ್ಯಾಯಪೀಠ ಮೇಲ್ಕಂಡ ತೀರ್ಪು ನೀಡಿದೆ.

ಮಮತಾ ಸರ್ಕಾರದ ಈ ನಿರ್ಣಯದಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕವಾಗಿ 126 ಕೋಟಿ ರು ಹೊರೆಯಾಗುತ್ತಿತ್ತು. ಇದು ಎಲ್ಲರಿಗೂ ಸೇರಿರುವ ಹಣ, ಸಾರ್ವಜನಿಕರ ತೆರಿಗೆ ಹಣ ಎಂದು ಕೌಶಿಕ್ ವಾದಿಸಿದರು. ಸರ್ಕಾರಿ ವಕೀಲರು ಈ ಅನುದಾನಕ್ಕೆ ಅಸೆಂಬ್ಲಿಯಲ್ಲಿ ಮಾನ್ಯತೆ ಸಿಕ್ಕಿದೆ. ಕಾನೂನು ಪ್ರಕಾರ ಅನುದಾನ ನೀಡಲಾಗುತ್ತಿದೆ ಎಂದರು.

ಆದರೆ, ಸರ್ಕಾರಿ ವಕೀಲರ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ, ತಕ್ಷಣದಿಂದ ಜಾರಿಗೆ ಬರುವಂತೆ ಅನುದಾನ ನೀಡುವುದನ್ನು ನಿಲ್ಲಿಸಬೇಕು ಎಂದು ನಿರ್ದೇಶನ ನೀಡಿತು. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+