ಅಪೂರ್ಣ ಮೈಸೂರು ದಸರಾ ವೆಬ್ ಸೈಟ್ ಗೆ ಚಾಲನೆ
ಬೆಂಗಳೂರು, ಆಗಸ್ಟ್ 31: ವಿಶ್ವಪ್ರಸಿದ್ಧ ಮೈಸೂರು ದಸರಾ ಸಡಗರ ಸಂಭ್ರಮ ಹೆಚ್ಚಿಸುವ ಪ್ರಯತ್ನವಾಗಿ ದಸರಾ ವೆಬ್ ಸೈಟ್ ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ ಶ್ರೀನಿವಾಸ ಪ್ರಸಾದ್ ಅವರು ಶುಕ್ರವಾರ ಅಧಿಕೃತ ಚಾಲನೆ ನೀಡಿದರು. ಒಂದಷ್ಟು ತಪ್ಪು ಮಾಹಿತಿಗಳೊಂದಿಗೆ ಕಾರ್ಯಾರಂಭಿಸಿರುವ ವೆಬ್ ಇನ್ನಷ್ಟೇ ಪೂರ್ಣಪ್ರಮಾಣದಲ್ಲಿ ಮೂಡಿಬರಬೇಬೇಕಿದೆ.
ಈ ವೆಬ್ ನಲ್ಲಿ 2013 ರ ದಸರಾ ಮಹೋತ್ಸವದ ವಿವರಗಳು ಒಳಗೊಂಡಿವೆ. Mysore Palace Board ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ವೆಬ್ ಸೈಟ್ ಚಾಲೂ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಅವರು ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ದಸರಾ 2013 ರ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಈ ವೆಬ್ ಸೈಟ್ ಆರಂಭಿಸಲಾಗಿದೆ.

ಕೇಂದ್ರ ಸರಕಾರದ National Informatics Centre ಹಾಗೂ Dot Angle ಎಂಬ ಮೈಸೂರಿನ ಖಾಸಗಿ ಸಂಸ್ಥೆ ಸಹಯೋಗದಲ್ಲಿ ಈ ವೆಬ್ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ದಸರ ಮಹೋತ್ಸವದ ಮಾಹಿತಿ, ಅಪರೂಪದ ಚಿತ್ರಗಳು ಹಾಗೂ ವಿಡಿಯೋ ತುಣುಕುಗಳನ್ನು ಲಭ್ಯವಾಗುವ ರೀತಿ ಅಭಿವೃದ್ಧಿಪಡಿಸಲಾಗಿದೆ. ಸಾಮಾಜಿಕ ತಾಣಗಳ ಜತೆ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಸ್ಥಾನಿಕ ಆಯುಕ್ತೆ ಎಂವಿ ಜಯಂತಿ, ಜಿಲ್ಲಾಧಿಕಾರಿ ಸಿ ಶಿಖಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಸಮಾರಂಭದಲ್ಲಿ ಉಪಸ್ಥಿರಿದ್ದರು. ದಸರಾ ವಿಶೇಷಾಧಿಕಾರಿಯೂ ಆದ ಶಿಖಾ ಅವರು ಈ ಬಾರಿ 1,000 Dasara gold cardಗಳನ್ನು ಮುದ್ರಿಸಲಾಗುವುದು. ಇದರ ಮುಖಬೆಲೆಯನ್ನು ಸದ್ಯದಲ್ಲೇ ತಿಳಿಸುವುದಾಗಿ ಹೇಳಿದರು. ಕಳೆದ ವರ್ಷ gold cardಗೆ ಬೆಲೆ ತಲಾ 6,000 ರೂ. ನಿಗದಿಯಾಗಿತ್ತು.
ಅಕ್ಟೋಬರ್ 5ರಿಂದ ಆರಂಭವಾಗಲಿರುವ 10 ದಿನಗಳ ದಸರಾ ಮಹೋತ್ಸವದ ಬಗ್ಗೆ ಸಮಗ್ರ ಮಾಹಿತಿ ನೀಡುವ one-stop destination ವೆಬ್ ಸೈಟ್ ಇದಾಗಿದೆ. ಕನ್ನಡ ಮತ್ತು ಇಂಗ್ಲೀಷಿನಲ್ಲಿ ಮಾಹಿತಿ ಅಡಕವಾಗಿದ್ದು Google Translate ಮೂಲಕ ಭಾಷಾಂತರಕ್ಕೂ ಅವಕಾಶವಿದೆ.












Click it and Unblock the Notifications