ದಿಢೀರನೆ ಭರ್ಜರಿ ಮಳೆ: ಬೆಂಗಳೂರು ಕೂಲ್ ಕೂಲ್
ಬೆಂಗಳೂರು, ಆಗಸ್ಟ್ 31: ರಾಜಧಾನಿನಲ್ಲಿ ದಿಡೀರ್ ಭರ್ಜರಿ ಮಳೆಯಾಗುತ್ತಿದೆ. ಮೂರ್ನಾಲ್ಕು ದಿನಗಳಿಂದ ಬೇಸಿಗೆಯ ಶೆಖೆ ಅನುಭವಿಸುತ್ತಿದ್ದ ಬೆಂಗಳೂರು ಶನಿವಾರ ಮುಂಜಾನೆ ತಂಪನೆಯ ವಾತಾವರಣದಲ್ಲಿ ಮಿಂದಿದೆ.

ಶನಿವಾರ ಬೆಳಗಿನ ಜಾವ 3.30ಕ್ಕೆ ಭಾರಿ ಗುಡುಗು ಸಹಿತ ಮಳೆ ಶುರುವಾಗಿದೆ. ಒಂದೇ ಸಮನೆ ಭಾರಿ ಗುಡುಗಿನ ಸದ್ದು ಕೇಳಿ ಬೆಚ್ಚಿಬಿದ್ದ ಬೆಂಗಳೂರಿನ ಜನರನ್ನು ಮಳೆರಾಯ ತುಸು ಬೇಗನೆ ಅಂದರೆ ನಾಲ್ಕು ಗಂಟೆಗೇ ಎಬ್ಬಿಸಿದ್ದಾನೆ. ಬೆಳಗಿನ ಜಾವದಲ್ಲಿ ನಗರ ಹೊರವಲಯದಲ್ಲಿ ಭಾರಿ ಮಳೆಯಾಗಿದೆ. ಆದರೆ ಯಾವುದೇ ಅನಾಹುತಗಳಾದ ವರದಿ ಬಂದಿಲ್ಲ.
ಅಲ್ಪ ವಿಶ್ರಾಂತಿಯ ಬಳಿಕ ಬೆಳಗ್ಗೆ 8 ಗಂಟೆಗೆ ಮತ್ತೆ ಮಳೆಯಾಗಲಾರಂಭಿಸಿದ್ದು, ಇಡೀ ಬೆಂಗಳೂರಿನಲ್ಲಿ ಮಳೆ ಸುರಿಯಲಾರಂಭಿಸಿದೆ. ಇದರಿಂದ ಶಾಲಾ ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.
ಇನ್ನು ಕಚೇರಿಗಳಿಗೆ ತೆರಳಬೇಕಾದವರೂ ತೊಂದರೆ ಅನುಭವಿಸುತ್ತಿದ್ದಾರೆ, ಮಳೆ ಸದ್ಯಕ್ಕೆ ನಿಲ್ಲುವ ಹಾಗಿಲ್ಲ. ಇಂದು ನಾಳೆಯೂ ಮಳೆ ಮುಂದುವರಿಯುವ ಸೂಚನೆಗಳಿವೆ. ಇದರಿಂದ ಬೆಂಗಳೂರಿಗರಿಗೆ ವೀಕೆಂಡ್ ತುಸು ಬೇಗನೇ ಬಂದಂತಾಗಿದೆ.












Click it and Unblock the Notifications