ವುಡ್ ಲ್ಯಾಂಡ್ಸ್ ಹೈಟೆಕ್ ವೇಶ್ಯಾವಾಟಿಕೆ: ಟೆಕ್ಕಿ ಸೆರೆ

ವೇಶ್ಯಾವಾಟಿಕೆಯ ಸೂತ್ರಧಾರನಾಗಿದ್ದ ಟೆಕ್ಕಿ ಮತ್ತು ಹೋಟೆಲ್ ಮ್ಯಾನೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ ಕೋಲ್ಕೊತ್ತಾ ಮೂಲದ ಯುವತಿಯನ್ನೂ ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಅಜಯ್ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.
ವುಡ್ ಲ್ಯಾಂಡ್ಸ್ ಹೋಟೆಲಿನಲ್ಲಿ ರಹಸ್ಯವಾಗಿ ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಬುಧವಾರ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ ಎಂದು ಹಲಸೂರು ಗೇಟ್ ಉಪ ವಿಭಾಗದ ಎಸಿಪಿ ನ್ಯಾಮಗೌಡ ತಿಳಿಸಿದ್ದಾರೆ.
ಸಾಫ್ಟ್ ವೇರ್ ಇಂಜಿನಿಯರ್ ವೆಂಕಟ್ ಮತ್ತು ವುಡ್ ಲ್ಯಾಂಡ್ಸ್ ಹೋಟೆಲಿನ ಮ್ಯಾನೇಜರ್ ಜಾನ್ ಬಂಧಿತರು. ಮತ್ತೊಬ್ಬ ಬಂಧಿತ ಆರೋಪಿ ಅಜಯ್ ಬೇನಾಮಿ ಹೆಸರಿನಲ್ಲಿ ವುಡ್ ಲ್ಯಾಂಡ್ಸ್ ಹೋಟೆಲಿನಲ್ಲಿ ಕೊಠಡಿಗಳನ್ನು ಬುಕ್ ಮಾಡಿಸುತ್ತಿದ್ದ.
ವಿವಿಧ ರಾಜ್ಯಗಳಿಂದ ಯುವತಿಯರನ್ನು ಕರೆತಂದು ಅವರನ್ನು ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದ. ಮ್ಯಾನೇಜರ್ ಜಾನ್ ಇದಕ್ಕೆ ನೆರವು ನೀಡುತ್ತಿದ್ದ. ಶ್ರೀಮಂತ ಕುಳಗಳೇ ಇಲ್ಲಿಗೆ ಗಿರಾಕಿಗಳಾಗಿ ಬರುತ್ತಿದ್ದರು ಎಂದು ತಿಳಿದುಬಂದಿದೆ.












Click it and Unblock the Notifications