ಗೋವಾ ಡ್ಯಾನ್ಸ್ ಬಾರ್ ನಲ್ಲಿ ಶಾಸಕನ ಬಂಧನ

ಪಣಜಿ, ಆ 28: ಗೋವಾದ ವಿಲಾಸಿ ಬೀಚ್ ಹೋಟೇಲಿನ ಡ್ಯಾನ್ಸ್ ಬಾರ್ ನಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದ ಶಾಸಕ ಮತ್ತು ಅವರ ಐವರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಶಾಸಕರ ಹೆಸರು ಮಹೇಂದ್ರ ಕುಮಾರ್ ಸಿಂಗ್, ಇವರು ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಶಾಸಕ. ಇವರ ಜೊತೆ ದೆಹಲಿಯಿಂದ ಬಂದಿದ್ದ ಮಹಿಳೆ ಮತ್ತು ಐವರು ಶಾಸಕರ ಸ್ನೇಹಿತರನ್ನೂ ಗೋವಾ ಪೊಲೀಸರು ಸೋಮವಾರ (ಆ 26) ತಡರಾತ್ರಿ ಬಂಧಿಸಿದ್ದಾರೆ. ಎಲ್ಲರನ್ನೂ ಆರು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗೋವಾದ ಕ್ಯಾಂಪಲ್ ನಲ್ಲಿರುವ ವೀವಾ ಹೋಟೇಲಿನ ಮಾಳಿಗೆಯಲ್ಲಿ ಆರು ಜನ ನರ್ತಕಿಯರ ಜೊತೆ ಶಾಸಕ ಮತ್ತು ಅವರ ಜೊತೆಗಿದ್ದವರು ಹೆಜ್ಜೆ ಹಾಕುತ್ತಿದ್ದಾಗ ಪೊಲೀಸರು ಪ್ರವೇಶಿಸಿದ್ದಾರೆ.

Samajwadi MLA from UP held in Goa dance bar

(ಚಿತ್ರದಲ್ಲಿ ಶಾಸಕ: 2nd from right)

ಪೊಲೀಸರ ಆಗಮನದಿಂದ ಗಾಬರಿಗೊಂಡ ನರ್ತಕಿಯರಲ್ಲಿ ಒಬ್ಬರು ಹೆದರಿ ಬಾಗಿಲು ಹಾಕಿಕೊಂಡಾಗ ಪೊಲೀಸರಿಗೆ ಅನುಮಾನ ಬಂದು ಎಲ್ಲರನ್ನೂ ಬಂಧಿಸಿದ್ದಾರೆ.

ಭಾನುವಾರ ಕಂಡೋಲಿನ್ ಬೀಚಿನಲ್ಲಿ ಉಳಿದು ಕೊಂಡಿದ್ದೆವು. ಅಲ್ಲಿ ನನ್ನ ಸ್ನೇಹಿತನ ಕರೆ ಬಂದಿದ್ದರಿಂದ ಪಣಜಿಯ ಕ್ಯಾಸಿನೋ ಹೋಟೇಲಿಗೆ ಬಂದೆ. ಗೋವಾದಲ್ಲಿ ಡ್ಯಾನ್ಸ್ ಬಾರ್ ಎಲ್ಲಾ ಹೋಟೆಲುಗಳಲ್ಲಿರುತ್ತದೆ.

ಯಾವುದೇ ಕಾರಣ ನೀಡದೇ ಪೊಲೀಸರು ನಮ್ಮನ್ನು ಬಂಧಿಸಿದ್ದಾರೆ ಎಂದು ಶಾಸಕ ಮಹೇಂದ್ರ ಕುಮಾರ್ ಸಿಂಗ್ ಹೇಳಿದ್ದಾರೆ.

ಉತ್ತರ ಪ್ರದೇಶದ ಸೇವ್ತಾ ಅಸೆಂಬ್ಲಿ ಕ್ಷೇತ್ರವನ್ನು ಸತತ ನಾಲ್ಕು ಬಾರಿ ಪ್ರತಿನಿಧಿಸಿರುವ ಸಿಂಗ್ ಪರ ಸಮಾಜವಾದಿ ಪಕ್ಷ ಇದುವರೆಗೂ ಯಾವ ಕ್ರಮಕ್ಕೂ ಮುಂದಾಗಿಲ್ಲ. ಪೊಲೀಸರು ತಮ್ಮ ಕ್ರಮವನ್ನು ಸಮರ್ಧಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+