Get Updates
Get notified of breaking news, exclusive insights, and must-see stories!

ಒನ್ಇಂಡಿಯಾ ಕೂಪನ್ ಕೋಡ್ ಬಳಸಿ, ಹಣ ಉಳಿಸಿ!

ಅದು ಇದು ಇರಲಿ ತರಕಾರಿ ಮಾರುಕಟ್ಟೆಯಲ್ಲಿ ನಿಂಬೆಹಣ್ಣು ಕೊಳ್ಳುವಾಗ ಇನ್ನೊಂದ್ ಎಕ್ಸ್‌ಟ್ರಾ ಕೊಡಿ ಎಂದು ಕಾಡಿಬೇಡಿ, ಚೌಕಾಸಿ ಮಾಡಿ ಕೊಳ್ಳುವವರು ನಾವು, ಭಾರತೀಯರು. ಈ ಮನೋಭಾವ ಬಹುಶಃ ನಮ್ಮ ರಕ್ತದಲ್ಲಿಯೇ ಹರಿಯುತ್ತಿದೆಯೇನೋ. ಇನ್ನು ಹೊಸ ಪ್ರಾಡಕ್ಟ್ ಬಂದರೆ ಬಿಡ್ತೀವಾ? ಆನ್ ಲೈನ್ ನಲ್ಲೇ ಆಗಲಿ, ಆಫ್ ಲೈನ್ ನಲ್ಲೇ ಆಗಲಿ, ಏನೇನು ಕೊಡುಗೆಗಳಿವೆ ಎಂದು ನೋಡಿ, ಅಳೆದುತೂಗಿ ಕೊಳ್ಳುವುದು ನಮ್ಮ ಜಾಯಮಾನ. ಇದರಲ್ಲಿ ತಪ್ಪೇನಿಲ್ಲ ಬಿಡಿ.

ಟ್ಯಾಗ್ ಲೈನ್ ನೋಡಿ, ಡಿಸ್ಕೌಂಟ್ ಏನಾದರೂ ಇದೆಯಾ ಎಂದು ಪರಿಶೀಲಿಸಿ, ನಮ್ಮ ಬಜೆಟ್ಟಿಗೆ ಸರಿಹೊಂದುತ್ತದಾ ಎಂದು ಚಿಂತಿಸಿ, ಅಕ್ಕಪಕ್ಕದ ಅಂಗಡಿಗಳ ದರ ತುಲನೆ ಮಾಡಿ ನಂತರ ಕೊಳ್ಳಲು ಮುಂದಾಗುತ್ತೇವೆ. ಇದು ಆಫ್ ಲೈನ್ ನಲ್ಲಿ ಆದರೆ, ಆನ್ ಲೈನ್ ನಲ್ಲಿ, ದರ ತುಲನೆ ಮಾಡುವ ವೆಬ್ ಸೈಟುಗಳಿಗೆಲ್ಲ ಭೇಟಿ ನೀಡಿ ನಂತರ, ಸ್ನೇಹಿತರಲ್ಲಿ ವಿಚಾರಿಸಿ, ಹೆಂಡತಿಯನ್ನೊಮ್ಮೆ ಕೇಳಿ ಉತ್ಪನ್ನ ಕೊಂಡರೂ ಕೆಲಬಾರಿ ಇನ್ನೂ ಒಂದು ಪರ್ಸೆಂಟ್ ಕಡಿಮೆ ಇದ್ರೆ ಚೆನ್ನಾಗಿತ್ತು ಎಂದು ಥಿಂಕಿಸುತ್ತೇವೆ.

Get Discounts, Coupons & Awesome Deals With Oneindia Coupon Services

ಇದನ್ನೆಲ್ಲಾ ಮನಗಂಡೇ, ಭಾರತದ ನಂ.1 ಪ್ರಾದೇಶಿಕ ಭಾಷಾ ಪೋರ್ಟಲ್ ಆಗಿರುವ ಒನ್ಇಂಡಿಯಾ, ಆನ್ ಲೈನ್ ಗ್ರಾಹಕರಿಗೆ ಹೆಚ್ಚಿನ ಲಾಭ ದೊರಕಿಸಿಕೊಡುವ ಉದ್ದೇಶದಿಂದ ಹೊಸ ಪ್ರಾಡಕ್ಟನ್ನು ಲಾಂಚ್ ಮಾಡಿದೆ. ಅದೇ, ಒನ್ಇಂಡಿಯಾ ಕೂಪನ್ ಸರ್ವೀಸ್. ಈ ಕೂಪನ್ ಗಳನ್ನು ಬಳಸಿ ಸರಳವಾಗಿ, ಸುರಕ್ಷಿತವಾಗಿ ಮಾತ್ರವಲ್ಲ ಕೊಳ್ಳುವುದನ್ನು ಕೂಡ ಆನಂದಿಸುವಂಥ ಅನುಭವ ಗ್ರಾಹಕರದಾಗಲಿದೆ. ಅತ್ಯುತ್ತಮ ತಂತ್ರಜ್ಞಾನ, ಪರಿಶ್ರಮ ಮತ್ತು ಪ್ರೀತಿಯನ್ನು ಎರಕಹೊಯ್ದು ಹೊರತಂದಿರುವ ಈ ಸೇವೆ ಬಳಸಿದರೆ ಹೆಚ್ಚು ಕೊಳ್ಳಲೂಬಹುದು ಮತ್ತು ಹಣವನ್ನೂ ಉಳಿಸಬಹುದು.

coupons.oneindia.com ನೀಡುತ್ತಿರುವ ಕೂಪನ್ ಬಳಸಿ ಸಾವಿರಕ್ಕೂ ಹೆಚ್ಚು ಆನ್ ಲೈನ್ ಅಂಗಡಿಗಳಲ್ಲಿ, ಇಷ್ಟವಾದ ಬ್ರಾಂಡ್‌ನ ಉತ್ಪನ್ನಗಳನ್ನು ಕೊಂಡು ನಮ್ಮ ಅಮೂಲ್ಯವಾದ ಸಮಯ ಮತ್ತು ಹಣವನ್ನು ಉಳಿಸಬಹುದು. ಇದು ಗ್ರಾಹಕರಿಗೆ ಮಾತ್ರವಲ್ಲ ರಿಟೇಲ್ ಪಾಲುದಾರರಿಗೂ ಅನುಕೂಲವಾಗಿದೆ. ಅವರು ಹೆಚ್ಚೆಚ್ಚು ಗ್ರಾಹಕರನ್ನು ಸೆಳೆಯಲು, ಬೃಹತ್ ಪ್ರಮಾಣದಲ್ಲಿ ಮಾರಾಟ ಮಾಡಲು ಮತ್ತು ಉತ್ತಮ ಸೇವೆ ಸಲ್ಲಿಸಲು ಸಹಕಾರಿಯಾಗಿದೆ.

ಇಂಟರ್ನೆಟ್ ಆನ್ ಲೈನ್ ಗ್ರಾಹಕರ ಜೀವನವನ್ನು ಸರಳೀಕರಣ ಮಾಡುತ್ತಲೇ ಸಾಗುತ್ತಿದೆ. ಇಂಟರ್ನೆಟ್ಟನ್ನು ಬಳಕೆದಾರರ ಜೀವನದ ಅವಿಭಾಜ್ಯ ಅಂಗವಾಗಿಸುವತ್ತ ನಮ್ಮ ಕಂಪನಿ ಕೂಡ ಸಾಕಷ್ಟು ಶ್ರಮವಹಿಸುತ್ತಿದೆ. ಹೊಸಹೊಸ ಉತ್ಪನ್ನ ಮತ್ತು ಸೇವೆಗಳನ್ನು ಬಿಡುಗಡೆ ಮಾಡುತ್ತ, ಅವರ ಜೀವನ ಸರಳ, ಸುರಕ್ಷಿತ ಮತ್ತು ಉತ್ತಮಪಡಿಸುತ್ತ ಒನ್ಇಂಡಿಯಾ ಗ್ರಾಹಕರ ಸೇವಕನ ಸ್ಥಾನದಲ್ಲಿ ನಿಂತಿದೆ. ಒನ್ಇಂಡಿಯಾ ಕೂಪನ್ ಸೇವೆಯನ್ನು ಸ್ವಾಗತಿಸೋಣ.

ಏನಿದು coupons.oneindia.com?
ಈ ಡಿಸ್ಕೌಂಟ್ ಕೂಪನ್ನಿಗೂ ನೀವು ಬಳಸುವ ಪೇಪರ್ ಕೂಪನ್ನುಗಳಿಗೆ ಯಾವುದೇ ವ್ಯತ್ಯಾಸವಿಲ್ಲ. ಆದರೆ, ಈ ಕೂಪನ್ನುಗಳನ್ನು ಆನ್ ಲೈನ್ ನಲ್ಲಿ ಮಾತ್ರ ಬಳಸಬಹುದು. ಕೂಪನ್ ಗಳ ಮೌಲ್ಯಗಳ ಆಧಾರದ ಮೇಲೆ ಉತ್ಪನ್ನಗಳನ್ನು ಕೊಳ್ಳುವಾಗ ರಿಯಾಯಿತಿಗಳು ದೊರೆಯುತ್ತವೆ. ಜೊತೆಗೆ, ವೋಚರ್ ಕೋಡ್‌ಗಳನ್ನು ಬಳಸಿ ಉಚಿತ ಕೊಡುಗೆಗಳನ್ನು ಕೂಡ ಪಡೆಯಬಹುದು. ಇವನ್ನು ಬಳಸಿದರೆ ಇದಕ್ಕಿಂತ ಅತ್ಯುತ್ತಮವಾದ ಆಫರುಗಳು ಬೇರೆಲ್ಲೂ ದೊರೆಯುವುದಿಲ್ಲ.

ಕೂಪನ್ ಮತ್ತು ವೋಚರ್ ಗಳನ್ನು ಹೇಗೆ ಪಡೆಯಬಹುದು?
ಬುಟ್ಟಿಯಲ್ಲಿನ ಕಡ್ಲೆಕಾಯಿ ಕೊಂಡಷ್ಟು ಇದು ಸುಲಭ. ಸರ್ಚ್ ಬಾಕ್ಸ್ ನಲ್ಲಿ ನಮ್ಮ ಆಯ್ಕೆಯ ಅಂಗಡಿ, ಉತ್ಪನ್ನ ಅಥವಾ ವಿಭಾಗವನ್ನು ಹುಡುಕಿದಾಗ, ಇದಕ್ಕೆ ಸಂಬಂಧಿಸಿದ ಇತ್ತೀಚಿನ ವೋಚರ್ ಕೋಡ್‌ಗಳು ದೊರೆಯುತ್ತವೆ. ಭಾರತದ ನಂಬಿಗಸ್ತ ರಿಟೇಲರುಗಳಾದ ಇನ್ಫಿಬೀಮ್, ಟ್ರೇಡಸ್, ಹೋಮ್ ಶಾಪ್18, ಮೈನ್‌ಟ್ರಾ, ಜಬಾಂಗ್ ಮತ್ತಿತರ ಕಂಪನಿಗಳು ಉತ್ಪನ್ನಗಳಿಗೆ ಸಂಬಂಧಿಸಿದ ಕೂಪನ್ ಗಳು ಇಲ್ಲಿ ಲಭ್ಯ.

ಕೂಪನ್ ಕೋಡ್ (ಸಂಕೇತಾಕ್ಷರ) ಅಂದ್ರೇನು?
ಉತ್ಪನ್ನ ಕೊಳ್ಳುವ ಅಂತಿಮ ಹಂತದಲ್ಲಿ ಭರ್ತಿ ಮಾಡಬೇಕಾದ ಅಂಕಿ ಮತ್ತು ಅಕ್ಷರಗಳ ಸರಣಿಯೇ ಕೂಪನ್ ಕೋಡ್.

coupons.oneindia.comನಲ್ಲಿ ಕೂಪನ್ ಕೊಳ್ಳುವುದು ಹೇಗೆ?
ಉತ್ಪನ್ನ ಕೊಳ್ಳುವ ಕೊನೆಯ ಹಂತದಲ್ಲಿ ಕೋಡ್ ಮೇಲೆ ಕ್ಲಿಕ್ ಮಾಡಿದಾಗ, ಆನ್ ಲೈನ್ ರಿಟೇಲರ್‌ನ ಬಿಲ್ಲಿಂಗ್ ಸೆಕ್ಷನ್‌ನಲ್ಲಿ ಕೂಪನ್ ಕಾಣಿಸಿಕೊಳ್ಳುತ್ತದೆ. ಉತ್ಪನ್ನದ ದರದಿಂದ ಡಿಸ್ಕೌಂಟ್ ದೊರೆಯುವಷ್ಟು ಹಣ ಕಡಿತವಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ. ಈ ಪ್ರಮೋಷನಲ್ ಕೋಡ್‌ಗಳು coupons.oneindia.comನಲ್ಲಿ ಸಂಪೂರ್ಣ ಉಚಿತವಾಗಿರುತ್ತವೆ.

ಕೂಪನ್ ಕೋಡ್ಸ್ ಬಳಸುವ ಸರಳ ಮಾರ್ಗ

1. ಕೊಳ್ಳಬೇಕಾದ ಅಂಗಡಿಯ ಕೂಪನ್ ಗಳಿಗಾಗಿ ಸರ್ಚ್ ಮಾಡಿರಿ.
2. ವ್ಯೂ ಕೋಡ್ ಅಥವಾ ವ್ಯೂ ಡೀಲ್ ಮೇಲೆ ಕ್ಲಿಕ್ಕಿಸಿ.
3. ರಿಟೇಲರ್ ಸೈಟ್ ಶಾಪಿಂಗ್ ಮಾಡಿರಿ.
4. ಚೆಕೌಟ್ ಹಂತದಲ್ಲಿ ಕೂಪನ್ ಕೋಡ್ ಭರ್ತಿ ಮಾಡಿರಿ.
5. ಉಳಿಸಿ.

ಮುಂದೇನು? ಇದರ ಬಗ್ಗೆ ನಿಮ್ಮ ಸ್ನೇಹಿತರಿಗೂ ಹೇಳಿರಿ.

coupons.oneindia.comದಲ್ಲಿ ನಿಮಗೇನು ಸಿಗುತ್ತದೆ?
coupons.oneindia.comನಲ್ಲಿ ದೊರೆಯುವ ಕೂಪನ್ ಮತ್ತು ವೋಚರ್‌ಗಳನ್ನು ಆದ್ಯಂತವಾಗಿ ಪರಿಶೀಲಿಸಲಾಗಿದ್ದು, ಗೊತ್ತುಪಡಿಸಲಾದ ಲಾಭ ಖಂಡಿತ ದೊರೆಯುತ್ತದೆ. ಎಲೆಕ್ಟ್ರಾನಿಕ್ಸ್, ಪುಸ್ತಕ, ಬಟ್ಟೆ, ಹೂವು, ಉಡುಗೊರೆ, ಸಿನೆಮಾ ಮತ್ತಿತರ ವಸ್ತುಗಳ ಮೇಲೆ ಶೇ.60ರಷ್ಟು ರಿಯಾಯಿತಿ ದೊರೆಯುತ್ತದೆ ಎಂದು ಹೆಮ್ಮೆಯಿಂದ ಹೇಳುತ್ತೇವೆ. ಇಷ್ಟು ಅದ್ಭುತವಾದ ಡಿಸ್ಕೌಂಟ್ ಜೊತೆಗೆ ಅತ್ಯುತ್ತಮವಾಗಿ ಉತ್ಪನ್ನಗಳು ಕೂಡ ಆನ್ ಲೈನ್ ನಲ್ಲಿ ದೊರೆಯುತ್ತವೆ.

ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ಒನ್ಇಂಡಿಯಾದ ಧ್ಯೇಯ ಮಾತ್ರವಲ್ಲ ಕರ್ತವ್ಯ ಕೂಡ. ಆನ್ ಲೈನ್ ಶಾಪಿಂಗ್ ಮಾಡುವ ಆನಂದ ನಿಮಗೆ ಸಿಗಬೇಕು. ಕೊಳ್ಳುವಿಕೆ ಸರಳ ಮತ್ತು ಸುರಕ್ಷಿತವಾಗಿರಬೇಕು. ಇದಕ್ಕೆ ನಿಮ್ಮ ಸಹಾಯ, ಸಹಕಾರ, ಪ್ರತಿಕ್ರಿಯೆ, ಸಲಹೆಗಳು ಬೇಕು. ಗ್ರಾಹಕರ ಆನಂದವೇ ನಮ್ಮ ಆನಂದ. ಇನ್ನೇಕೆ ತಡ, ಗೋ ಶಾಪಿಂಗ್, ಕೂಪನ್ ಕೋಡ್ ಬಳಸಿರಿ, ಹಣ ಉಳಿಸಿರಿ!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+