ಮೈಸೂರಿನಲ್ಲಿ ಕಂಡ ಭಾರತದ ದುಬಾರಿ ಶ್ವಾನ
ಮೈಸೂರು, ಆ.26: ಸಾಕು ಪ್ರಾಣಿಯೊಂದರ ಬೆಲೆ 24 ಲಕ್ಷ ರು ಎಂದರೆ ಅದರ ಮಾಲೀಕರಿಗೆ ಖುಷಿಯೋ ಖುಷಿ. ಸಾರ್ವಜನಿಕರಿಗೆ ಅಚ್ಚರಿಯೋ ಅಚ್ಚರಿ. ಇಲ್ಲಿನ ಅಖಿಲ ಭಾರತ ಶ್ವಾನ ಚಾಂಪಿಯನ್ ಶಿಪ್ ನಲ್ಲಿ ಭರ್ಜರಿ ಮೌಲ್ಯ ಪಡೆದ ಸಂಜಯ್ ಕಪೂರ್ ಅವರ ಗ್ರೇಟ್ ಡೇನ್ ಭಾರಿ ಮೌಲ್ಯ ಪಡೆದು ಗಮನ ಸೆಳೆದಿದ್ದು ಮಾತ್ರವಲ್ಲದೆ, ಚಾಂಪಿಯನ್ ಶಿಪ್ ಗೆದ್ದುಕೊಂಡಿತು.
ಮೈಸೂರು ಶ್ವಾನ (kennel) ಕ್ಲಬ್ ಆಯೋಜಿಸಿದ್ದ ಶ್ವಾನ ಪ್ರದರ್ಶನ ಭಾನುವಾರ ದಸರಾ ಪ್ರದರ್ಶನ ಮೈದಾನದಲ್ಲಿ ನಡೆಯಿತು. 400ಕ್ಕೂ ಅಧಿಕ ಸ್ಪರ್ಧಿಗಳು 20 ಹೆಚ್ಚು ತಳಿಗಳನ್ನು ಈ ಸ್ಪರ್ಧೆಗೆ ಕರೆ ತಂದಿದ್ದರು.
ದೆಹಲಿಯ ಸಂಜಯ್ ಕಪೂರ್ ಅವರ ಗ್ರೇಟ್ ಡೇನ್ ಶ್ವಾನ ಎಲ್ಲರನ್ನು ಆಕರ್ಷಿಸಿತು. ಸಾಮಾನ್ಯವಾಗಿ ಗ್ರೇಟ್ ಡೇನ್ ತಳಿ ಬೆಲೆ 1 ರಿಂದ 2 ಲಕ್ಷದವರೆಗೂ ಇರುತ್ತದೆ. ಆದರೆ, ಸತತವಾಗಿ ಮೂರು ಬಾರಿ ಚಾಂಪಿಯನ್ ಶಿಪ್ ಗೆದ್ದಿರುವ ಸಂಜಯ್ ಅವರ ಶ್ವಾನ ಈಗ 24 ಲಕ್ಷ ರು ತೂಗುತ್ತಿದೆ. ಬಹುಶಃ ದೇಶದಲ್ಲೇ ಇದೇ ಅತ್ಯಧಿಕ ಮೌಲ್ಯದ ಶ್ವಾನ ಎನ್ನಬಹುದು. ಮೈಸೂರಿನಲ್ಲಿ ಶ್ವಾನ ಪ್ರದರ್ಶನದ ಇನ್ನಷ್ಟು ವಿವರ ಹಾಗೂ ಚಿತ್ರಗಳು ಇಲ್ಲಿವೆ. ಚಿತ್ರಗಳನ್ನು ಕಳಿಸಿದವರು: ಬಿಎಂಎಲ್, ಮೈಸೂರು

ಹ್ಯಾಟ್ರಿಕ್ ವಿಜೇತ
ಮೂರು ಬಾರಿ ಚಾಂಪಿಯನ್ ಶಿಪ್ ಗೆದ್ದ ಗ್ರೇಟ್ ಡೆನ್ ಜತೆಗೆ ಸಂಜಯ್ ಕಪೂರ್

ಹ್ಯಾಟ್ರಿಕ್ ವಿಜೇತ ಶ್ವಾನ
ಮೂರು ಬಾರಿ ಚಾಂಪಿಯನ್ ಶಿಪ್ ಗೆದ್ದ ಗ್ರೇಟ್ ಡೆನ್ ಜತೆಗೆ ದೆಹಲಿಯ ಸಂಜಯ್ ಕಪೂರ್

ಬಂದಿದ್ದ ಗಣ್ಯರು
ನಗರ ಪೊಲೀಸ್ ಆಯುಕ್ತ ಎಂ.ಎ ಸಲೀಂ, ಪಾಟ್ರನ್ ಕ್ಲಬ್ ನ ಡಾ. ಬಿಸಿ ರಾಮಕೃಷ್ಣ, ಡಾ. ಪಿವಿ ಯತೀಂದರ್, ಡಾ. ಡಿಟಿ ಜಯರಾಮಯ್ಯ, ಮೈಸೂರು ವಿಭಾಗದ ಕ್ಲಬ್ ಅಧ್ಯಕ್ಷ ಬಿಪಿ ಮಂಜುನಾಥ್ ಮತ್ತಿತ್ತರು ಬಂದಿದ್ದರು.
ಚಿತ್ರದಲ್ಲಿ: ಸ್ಪರ್ಧೆ ಮುಗಿಸಿ ಬಂದ ತಮ್ಮ ಶ್ವಾನದ ಚಿತ್ರ ತೆಗೆಯುತ್ತಿರುವ ಮಾಲೀಕರು

ಬಂದಿದ್ದ ತಳಿಗಳು
ಕುಬ್ಜ ಪಿನ್ಸಚರ್, ಬೆಲ್ಜಿಯನ್ ಶೆಪರ್ಡ್, ಬೀಗ್ಲ್, ಗ್ರೇಟ್ ಡೇನ್, ಡ್ಯಾಶ್ ಹಂಡ್, ಪಗ್, ಕೊಲ್ಲಿ, ಚೌ ಚೌ, ಐರೀಷ್ ಸೆಟ್ಟರ್, ಸೈಬಿರಿಯನ್ ಹಸ್ಕಿ, ಬಾಕ್ಸರ್ ಹಾಗೂ ಬುಲ್ ಡಾಗ್

ವಿದೇಶಿ ಜಡ್ಜ್
ಸಿಂಗಪುರದಿಂದ ಅಂತಾರಾಷ್ಟ್ರೀಯ ಮಟ್ಟದ ಶ್ವಾನ ಪ್ರದರ್ಶನ ಜಡ್ಜ್ ಸೂ ಲಿನ್ ತೊಂಗ್ ಆಗಮಿಸಿದ್ದರು

ಮೈಸೂರಿನಲ್ಲಿ ಮೂರನೇ ಬಾರಿ
ಈ ರೀತಿ ಅಂತಾರಾಷ್ಟ್ರೀಯ ಮಟ್ಟದ ಶ್ವಾನ ಪ್ರದರ್ಶನ, ಸ್ಪರ್ಧೆ ಮೈಸೂರಿನಲ್ಲಿ ಮೂರನೆ ಬಾರಿಗೆ ಆಯೋಜನೆಗೊಂಡು ಯಶಸ್ವಿಯಾಗಿ ನೆರವೇರಿದೆ.

ಸ್ಪರ್ಧಿಗಳ ಊರು
ದೆಹಲಿ, ಬೆಂಗಳೂರು, ಪುಣೆ, ಕೋಲ್ಕತ್ತಾ, ಚೆನ್ನೈ, ಕೊಯಮತ್ತೂರು, ಕೊಚ್ಚಿನ್, ಕಾಲಿಕಟ್ ಮುಂತಾದ ಪ್ರದೇಶದಿಂದ ಮಾಲೀಕರು ತಮ್ಮ ಶ್ವಾನಗಳನ್ನು ಕರೆ ತಂದಿದ್ದರು.

ಮಕ್ಕಳಿಗೆ ಮೋಜು
ಮೈಸೂರಿನಲ್ಲಿ ನಡೆದ ಶ್ವಾನ ಪ್ರದರ್ಶನದಲ್ಲಿ ಮಕ್ಕಳು ವಿವಿಧ ತಳಿಯ ಶ್ವಾನಗಳನ್ನು ಏಕಕಾಲಕ್ಕೆ ಒಂದೇ ಕಡೆ ನೋಡಿ ಖುಷಿ ಪಟ್ಟರು. ಎಲ್ಲಾ ಚಿತ್ರಗಳನ್ನು ನಮಗೆ ಕಳಿಸಿದವರು : ಬಿಎಂಎಲ್, ಮೈಸೂರು












Click it and Unblock the Notifications